ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

________________

೧೮

ವೈಶಾಖ

ಇಲ್ಲ. ಆ ಮಟದ ಆಜೂಬಾಜೂನಲ್ಲಿ ನಾವೀಗ ಸುಳುದಾಡೋದು ಮುಕ್ಸ ಬಂದ್!... ಅದ್ಕೆ ಗೌಡ್ರು ನಿನ್ನ ಮದ್ಯಸ್ತಿಕೆ ಮಾಡಿಕಂಡವ್ರೆ... ಬಾ ಬಾ, ಕ್ವಡ್ತೀನಿ. ತಕಂಡೋಗೀವಂತೆ...”

ಇಸ್ಪೀಟು ಎಲೆ ಎಸೆದು ಬೈಲಿಗೆ ರಂಗ ವೊಂಟ. ಲಕ್ಕ ಅವ್ನ ಹಿಂದುಗಡೆ ವೋದ- ಊರ್ನ ಕೊನೀಕೆ ಅಗ್ನಿ ಮೂಲೇಲಿ ಅವ್ನ ಜೋಪಡಿ...ಜೋಪಡಿ ತಲುಪುತ್ಲೇಯ, ಬೈಲಿಗ ರಂಗ ಜೋರಿನ್ಂದ ಕದ ತಟ್ದ.ವಳುಗ್ನಿಂದ.

“ಅಸ್ಸಿ ಯಾವೋನ ಅವ್ನು -ಬೆದೆ ಬಂದೋನ ತರ, ಒಂದೆ ಸಮಕೆ ಇಂಗೆ ಕದ ಕುಟ್ಟೋನು?”

ಬೈತ ಬೈತ, ನಿದ್ದ ಕಣ್ಣ ಹ್ವಸಗ್ತ ಅವನ ಎಂಗಸು ಕದ ತಗಿಯಕ್ಕೆ ಸುಮಾರು ವ್ಯಾಳ್ಯವೇ ಇಡೀತು-ಗಂಡಯ್ಯನ ನ್ವಾಡಿಮ್ಯಾಲಂತೂ ಉರಿದುಪ್ಪಾಗಿ,

“ಮಾರಿಗುಡಿ ಬುಟ್ಟು ಇಲ್ಯಾಕೆ ಬಂದಿದ್ದೀ-ನಿಂಗೆ ಎಡತಿ ಯಾಕೆ? ಹಕ್ಕಳ್ಯಾಕೆ? -ನಿನ್ನ ಆ ಬರಬಿಜ್ಜಾರು ಬಂದು ವೊತ್ತಗಂಡು ವೊಗಬಾರ್ದ....ಆ ಮಟದಯ್ಯ ಒಬ್ಬ ಕೇಡಿಗ ಬಂದ ಊರ್ಗೆ-ಹಿಂದಿದ್ದ ಅಯ್ಯನೋರು ದ್ಯಾವರಂತ ಮನುಸ್ರು! ಈವಯ್ಯ ನಿಂಗೆ, ನಿನ್ನ ಪೋಲಿ ಪಟಾಲಂಗೆ ಎಲ್ಲಾದ್ರೂವೆ ದುಡ್ಡು ಕ್ವಟ್ಟು ಕುಡುಸಿ, ನಿಮ್ಮ ಕೈಲಿ ಮಾಡಬಾರದ್ದ ಮಾಡ್ಸಿ ಊರನ್ನೇ ನಿಪಾತಗೊಳಸ್ತಾ ಅವ್ನೆ ಅಂತ ವಳುವಳಗೆ ವಸಿ ಜನ ಗುಸಗುಸಗುಟ್ತಾ ಅವ್ರೆ, ಇನ್ನೊಸಿ ಜನ ಇಲ್ಲ ಆ ನಂಜೇಗೌಡ್ರೆ ಕೇತು ಅಂತಾನು ಯೋಳೋದ ಕೇಳಿವ್ನಿ... ಯಾರು ಸಾಚವೋ ಯಾರು ಪಾಚವೋ- ಆ ಜಡೆಮುನೀಗೆ ಗ್ವತ್ತು... ಅದೆಂಗಾರು ಆಗ್ಲಿ ಕನ, ನೀ ಯಾಕೆ ಬಂದೆ ಇಲ್ಲಿ? ಆ ಮಾರಿಗುಡೀಲೇಯ ನಿಮ್ಮಪ್ಪನ ಚಪ್ಪೋಡು ಅಂತ ಬಿದ್ದುಕೋ ವೋಗು.”

ಅರಳು ಸಿಡಿಯೋವಂಗೆ ಸಿಡುದ್ಲು. ಬೈಲಿಗ ರಂಗ ಕಿಲಾಡಿ, ಒಂದು ಮಾತ್ನೂ ಆಡದೆ ಆಯಿದು ರೂಪಾಯಿ ನೋಟ ವಳುಗಿಸೆಯಿಂದ ತಗ್ದು ಅವಳ ಕೈಯಾಗಿಟ್ಟ, “ಈ ರೂಪಾಯಿ ಯಾವ ಮುಂಡೆಗೆ ಬೇಕಾಗಿತ್ತು?” ಅಂತ ಅಂತಾನೆ ತನ್ನ ರವಿಕೆ ವಳೀಕೆ ಅದ್ನ ಇಳಿಬುಟ್ಟಲು... ಅಲ್ಲಿಂದ ಮುಂದಕೆ ಮಾತ್ನಲ್ಲ ನಿಲ್ಲುಸಿ, ತನ್ನ ಗಂಡಯ್ಯ ಬೆಂಕಿಕಡ್ಡಿ ಕೀರಿ, ಸೀಮೆಯೆಣ್ಣೆ ಬುಡ್ಡಿ ಕತ್ತಿಸಿ, ವಳುಕ್ವಾಣೆ ಮೂಲೇಲಿ, ಗೋಣಿ ತಾಟ್ನಲ್ಲಿ ಸುತ್ತಿಟ್ಟಿದ್ದ ಅತ್ತು ಬಾಟ್ಲಿಗಳ ಎತ್ತ ಲಕ್ಕನ ಕಯ್ಯಗಿಡಾದ್ರೆ ಗುರುಕಾ ಸ್ವಾಗ್ತಿದ್ದು, ಲಕ್ಕ ಆ ಬಾಟ್ಲಿಗಳ ತಕ್ಕಂಡು ವೋರಿಕೊಂಡಿದ್ದೇ ತಡ, ತನ್ನ ಗಂಡನೂವೆ ಲಕ್ಕನ ಬಾಲಂಗಚ್ಚಾಗಿ ಕಾಲಿಟ್ಟಿದ್ದ ಕಂಡು,

“ನೀಯೆಲ್ಲೀಗೆ ವೊಂಟಿದ್ದಿಯೊ ನನ್ನ ಅಳೇನ ಮಗನೆ?” -ಅರಚಿ, ಅವ್ನ