ಪುಟ:ವೈಶಾಖ.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೪ ವೈಶಾಖ ನಮ್ಮ ಜೊತೆಗೆ ಬಂದು ಕುಳಿತುಕೊಳ್ಳಿ...” ಎಂದು ಬಲಾತ್ಕಾರದಿಂದಲೆ ಅವರನ್ನು ಕರೆದೊಯ್ದು, ಚಾವಡಿಯೊಳಗೆ ಕೂರಿಸಿದರು. ಉದ್ದಕ್ಕೂ ಶಾಸ್ತ್ರಿಗಳು ಒದರಾಡುತ್ತಲೆ ಇದ್ದರು.... ನೆರೆದಿದ್ದ ಸಭಿಕರ ಗುಂಪಿನಲ್ಲಿ ಕೆಲವರು “ಈವಯ್ಯ ಯೋಳಿರೋ ಮಾತ್ನಲ್ಲಿ ನಿಜ ಯಾಕಿರಬಾರು?- ಅಟ್ಟೇಲಿ ಮಾವ ಸೊಸೆ ಇಬ್ಬರೇಯ!... ನಡದಿದ್ರೂ ನಡದಿರಬೈದು” ಅಂತ ಸಂದೇಹಪಟ್ಟರು. ಚಾವಡಿಯೊಳಗೆ ಯಜಮಾನರೆಲ್ಲರೂ ಪುನಃ ಉಪಸ್ಥಿತರಾದ ನಂತರ ಗಂಗಪ್ಪ, - “ಒಳ್ಳಿ ಕತ್ಯಾಯ್ತು.... ಈ ಶಾಸ್ತಿಗೊಳು ಸಿವಪೂಜೇಲಿ ಕರಡಿ ಬುಟ್ಟಂಗೆ ಬಂದು, ನಮ್ಮ ಪಂಚಾತಿಗೇ ಅಡ್ಡಕಾಲು ಕ್ವಿಟ್ಟು ಕುಂತುಬುಟ್ಟಿದಲ್ಲ?..... ಸದ್ಯಕೆ, ವಳುಗೆ ಕರಕಂಬಂದು ಕುಕ್ಕರಿಸಿದ್ದಾಯ್ತು. ಇನ್ನು ಅವರು ಯೇನಾರ ಬಾಯಿ ಮಾಡ್ತಿದ್ದಿ-" ಎಂದು ಗೊಣಗಿದ. “ಪಂಚಾಯಿತಿ ಅಂದಮ್ಯಾಲೆ, ಇಂತ ಅಡ್ಡಿ ಆಡಚ್ಚೆಯೆಲ್ಲಾ ಮಾಮೂಲೆ ಅಲ್ವ?”- ಎಂದು ತಾನು ಅನುಭವಸ್ಥ ಎಂಬುದನ್ನು ಪ್ರಕಟಿಸುತ್ತ ಪಟೇಲ ನಿರ್ವಾಣಯ್ಯ ನುಡಿದ. “ಸುಮಾಸು, ಶ್ಯಾನುಭೋಗರೆ, ಇನ್ನು ಕಾರ್ಯ ಜರುಗಬೌದಲ್ಲ?”ಎಂದು ನಂಜೇಗೌಡ ಕೇಳಿದಂತೆ, ಶ್ಯಾನುಬೋಗರು ತಲೆ ಸನ್ನೆಯಲ್ಲಿ ಒಪ್ಪಿಗೆಯಿತ್ತಿದ್ದರು. ಕೊಡಲೆ ನಂಜೇಗೌಡ, ಬೆತ್ತದ ಕೋಲು ಹಿಡಿದು ಕರಾಳವಾಗಿ ನಿಂತಿದ್ದ ರುದ್ರನಿಗೆ, “ರುದ್ರ, ಇನ್ನು ನಿನ್ನ ಕಾರ್ಯ ಜರಗುಸು” ಎಂದ. ತುಂಡು ಪಂಚೆಯನ್ನು ಬಿಟ್ಟು ಲಕ್ಕನ ಮೈಯನ್ನು ಬೆತ್ತಲೆ ಮಾಡಿದ್ದರು. ಬೆಳುದಿಂಗಳ ಬೆಳಕಿನಲ್ಲಿ ಹೊಳೆಯುವ ಕಪ್ಪು ಗೊಂಬೆಯಂತೆ ಕಾಣುತ್ತಿದ್ದ ಲಕ್ಕ, ಛಟಾರ್- ಎಂದು ಮೊದಲ ಏಟು ಬಿದ್ದಾಗ, ಪಾಂಡವರ ಕಲ್ಲುಕಂಬಕ್ಕೆ ಬಲವಾಗಿ ಕಟ್ಟಲ್ಪಟ್ಟಿದ್ದ ಲಕ್ಕ 'ಅಮ್ಮಾ.....' ಎಂದು ನರಳಿದ. ಥಟ್ಟನೆ ಲಕ್ಕನ ಆಜುಬಾಜುವಿನಲ್ಲಿ ಸುತ್ತುತ್ತಿದ್ದ ಬೊಡ್ಡ, ಭೀಕರವಾಗಿ ಬೊಗಳುತ್ತ ಏರಿ ಬಂದು ತನ್ನ ಯಜಮಾನನನ್ನು ಹೊಡೆಯಲಾರಂಭಿಸಿದ್ದ ವ್ಯಕ್ತಿಯ ಮೇಲೆ ನೆಗೆನೆಗೆದು ಆಕ್ರಮಣ ಮಾಡಿ, ಕೈಕಾಲುಗಳನ್ನು ಕಚ್ಚಿತು. ಅಷ್ಟರಲ್ಲಿ ಮಾರಗುಡಿಯ ರುದ್ರನ ಬಳಗ ಬೊಡ್ಡನನ್ನು ಸುತ್ತುವರಿದು, ಸಭೆಗಳಿಂದ ಅದನ್ನು ಬಡಿದರು. ಆ ಏಟುಗಳಿಂದ ಜರ್ಝರಿತಗೊಂಡ ದೊಡ್ಡ ಕುಂಯ್ ಕುಂಯ್‌ಗುಡುತ್ತ, ಕುಂಟುತ್ತ ಕಲ್ಯಾಣಿಯ ಮುಂದೆ ಹೋಗಿ ಬಿದ್ದಿತು. ಬೊಡ್ಡನ ಆಕ್ರಮಣದಿಂದ ತುಸು ಸಮಯ ದಿಗ್ವಾಂತನಾದಂತೆ ನಿಂತಿದ್ದ