________________
ಸಮಗ್ರ ಕಾದಂಬರಿಗಳು ೩೨೯ ತೆಪ್ಪೋಯ್ತು ... ನಾಳೆ ಸಂಜೀಕೆ ಬತ್ತೀ ತಾನೆ?” ಅಂದು ಕೇಳಿ. ನಿಂಗಯ್ಯನ ಉತ್ತರಕೆ ಕಾಯದೆ, ಕುಳವಾಡಿ ಕುಂದೂರಯ್ಯಂಗೆ ಸಲಾಂ ಹೇಳಿ, ಲಕ್ಕನ್ನ ತಬ್ಬಿ ನಿಧಾನ್ವಾಗಿ ನಡುಸ್ತ, ಕರಿಯಪ್ಪನೊಡೆ ತಮ್ಮ ಕೊಪ್ಪಲ್ಪ ಕಡೀಕೆ ಸಾಗಿದ್ರು. ವೋಲಗೇರಿಯ ಮಂದಿ ಸಾಲುಗಟ್ಟಿ ನಿಂತು, ಅವರು ಹೋಗೋದ್ರೆ ಕಂಬನಿಗರೀತ ಕ್ವಾಡ್ತಿದ್ರು. ಗೋಸು ಸಾಬರೂ ಕರಿಯಪ್ಪನೂ ಲಕ್ಕನೊಂದಿಗೆ ಕೊಪ್ಪಲು ಓಣಿಗೆ ತಿರುಗಿದಂತೆ, ಅವರ ಹಿಂದೆ ದೂರದಲ್ಲಿ ಬರುತ್ತಿದ್ದ ಪುರೋಹಿತ ವೆಂಕಣ್ಣಜೋಯಿಸರು ಯಾವುದೊ ಮಂತ್ರವನ್ನು ಗುನುಗುತ್ತ, ಕೆರೆಯ ಓಣಿಯತ್ತ ಹೆಜ್ಜೆಹಾಕುತ್ತಿದ್ದರು. ಆಗ ಯಾರೊ ಆ ಜೋಯಿಸರನ್ನು, “ಜೋಯಿಸರೆ... ನಿಂತುಕನ್ನಿ, ವಸಿ ನಿಂತುಕನ್ನಿ...” ಎಂದು ಕೂಗಿದಂತಾಯಿತು. ಜೋಯಿಸರು ನಿಂತರು. ಕೂಗುತ್ತಿದ್ದನು ನಾಮಧಾರಿಗಳ ಬಿಳಿಗಿರಿ. “ಏನಪ್ಪ ಬಿಳಿಗಿರಿ?- ಇಷ್ಟು ತರಾತುರಿಯಿಂದ ಕರೀತಾ ಇದೀಯಲ್ಲ, ಏನು ಸಮಾಚಾರ?”- ಕೇಳಿದರು. “ಬಿಳಿಗಿರಿಗೆ ಗೂರಲು, ಸ್ವಲ್ಪ ಓಡುತ್ತ ಬಂದುದರಿಂದ, ಕುಲುಮೆಯಲ್ಲಿ ತಿದಿ ಒತ್ತಿದ ಹಾಗೆ ಏದುಸಿರು ಬಿಡುತ್ತ,” “ಸೋಮಿ- ಇವೊತ್ತು ಒಳ್ಳೆ ಜಿನವಾ?” – ಕಾತರದಿಂದ ಪರಶ್ನಿಸಿದ. “ಯಾಕಯ್ಯ, ಏನಾಗಬೇಕು?” “ವಸಿ ಇದೊಂದು ಯೋಳಿ, ಸೋಮಿ ಬಾಕಿದು ಆಮ್ಯಾಕೆ ಹೇಳೀನಂತೆ.” ಬಿಳಿಗಿರಿ ಬಲು ರಗಳೆ ಮನುಷ್ಯ. ಯವಾಗಲೂ ಹೇಳೋದನ್ನ ನೇರವಾಗಿ ಹೇಳಲ್ಲ. ಸುತ್ತಿಬಳಸಿ, ಚಿತ್ರಮೂಲನ ಕೋಟೆ ಹೊಕ್ಕಿಬಂದ ಹಾಗೇ ಅವನ ಮಾತು! ಇದು ಜೋಯಿಸರಿಗೆ ಎಂದೋ ಅನುಭವವೇದ್ಯಾವಾಗಿತ್ತು. ಆದರೆ ಅವರು ತಾಳ್ಮೆ ಕಳೆದುಕೊಳ್ಳುವುದಕ್ಕೆ ಆಗುತ್ತೆಯೇ?... ಹೊಟ್ಟೆಪಾಡು ನಡೆಯಬೇಕಲ್ಲ-ಅವರಿಗೆ ಹೇಳಿಕೊಳ್ಳುವಂತಹ ಜಮೀನಿಲ್ಲ. ಮೂರು ಹೆಣ್ಣು ಮಕ್ಕಳು. ಅವರಲ್ಲಿ ಇಬ್ಬರು ಆಗಲೆ ಮುದುವೆಗೆ ಬಂದಿದ್ದಾರೆ. ಜೋಯಿಸರ ಸಂಪಾದನೆಯೆಂದರೆ ಶುಭ ಅಶುಭಗಳ ಪೌರೋಹಿತ್ಯಾಗಿ ಈ ಊರು ಆ ಊರು ಎಂದು ತಿರುಗಿತಿರುಗಿ ತಂದ ಧಾನ್ಯಗಳು, ತೆಂಗಿನಕಾಯಿ, ಬೆಲ್ಲ, ಬಾಳೆಹಣ್ಣು ಇತ್ಯಾದಿ ಮತ್ತು ದಕ್ಷಿಣೆ, ಈಚೀಚೆಗೆ ಜನ, “ಮಂತ್ರಗಳ ಕಡಿಮೆ ಮಾಡಿ ಜೋಯಿಸರೆ, ಶಾಸ್ತ್ರಗಳನ್ನು ಅಪ್ಪೆ ಚಟುಕದಲ್ಲಿ ಮುಗಿಸಿಬಿಡಿ; ಎಲ್ಲಾ