ಪುಟ:ವೈಶಾಖ.pdf/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೨ ವೈಶಾಖ ರುಕ್ಕಿಣಿಗೆ ಅವಳು ಜೀವಂತವಿರುವಾಗಲೆ ಘಟಸ್ಫೋಟ ಕರ್ಮಮಾಡಿ ಅವಳಿಗೂ ತಮಗೂ ನಡುವೆ ಇನ್ನುಮುಂದೆ ಎಲ್ಲ ಸಂಬಂಧಗಳನ್ನೂ ಕಡಿದು ಕೊಳ್ಳಲು ತೀರ್ಮಾನಿಸಿದರು. ಈ ಕರ್ಮವನ್ನು ನೀರಿರುವ ಸ್ಥಳದಲ್ಲಿ, ಅಂದರೆ ಹೊಳೆ ಅಥವಾ ಕೆರೆಕಟ್ಟೆಗಳ ದಡದಲ್ಲಿ ನಡೆಸಬೇಕಾದ್ದು ನಿಯಮ. ಆದ್ದರಿಂದ ಕೆರೆಯ ದಡದಲ್ಲಿ ಇದನ್ನು ಆಚರಿಸಬೇಕೆಂದು ಯರೊ ವೈದಿಕ ಸೂಚಿಸಿದಾಗ, ಅಲ್ಲೇ ಕುಳಿತಿದ್ದ ಲಕ್ಷಮ್ಮ, “ಛೇ, ಛ- ಇಂಥ ಪಾಪಿಗೆ ನೀರಿರೋ ಜಾಗದಲ್ಲಿ ಕರ್ಮ ಆಚರಿಸಬಾರದು. ಅವಳ ಮನೆ ಮುಂದೇನೆ ನಡೆಸಬೇಕು” ಎಂದು ಬಲವಾಗಿ ವಾದಿಸಿದಳು. ಬ್ರಾಹ್ಮಣ ಸಮೂಹ, “ಲಕ್ಷ ಮನೋರು ಹೇಳಿರೊ ಮಾತಿನಲ್ಲಿ ಅರ್ಥವಿದೆ. ಅವಳ ಮನೆ ಎದುರಿಗೆ ಆಚರಿಸಿದರೆ, ಊರಿನ ಎಲ್ಲಾ ಜನರೂ ನೋಡ್ತಾರೆ. ಊರಿನಲ್ಲಿ ಇಂಥಾದ್ದು ನಡೆಯಬಾರದು ಎಂದು ಸರ್ವರಿಗೂ ಮನದಟ್ಟಾಗತ್ತೆ” ಎಂದು ಒಪ್ಪಿತು. ಆ ಸಭೆಯಿಂದ ಎದ್ದ ಹೋಗುವಾಗ ಲಕ್ಷಮ್ಮ, "ಅವಳ ಜಲ್ಮಾನ ಒದ್ದೆ ಬಟ್ಟೇಲು ಒರಸಬಾರದು. ಬರಬಟ್ಟೇಲಿ ಒರೆಸ ಬೇಕು” ಎಂದು ಔಡು ಕಚ್ಚುತ್ತ ಎದ್ದು ಹೊದರು. ಬ್ರಾಹ್ಮಣರು ರುಕ್ಕಿಣಿಗೆ ಘಟಸ್ಫೋಟ ಕರ್ಮ ಮಾಡಬೇಕೆಂದು ತೀರ್ಮಾನಿಸುತ್ತಿರುವಾಗ, ಕೃಷ್ಣಶಾಸ್ತ್ರಿಗಳು ದೇವರ ಕೋಣೆಯಲ್ಲಿ ಕುಳಿತು ದೇವರ ಧ್ಯಾನ ಮಾಡುತ್ತ ಚಿಂತೆಯಲ್ಲಿ ಮುಳುಗಿದ್ದರು. ವಿಧಿಬರಹವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾನವರಿಗೇ ಏಕೆ, ಹರಿಹರಬ್ರಹ್ಮಾದಿ ದೇವತೆಗಳಿಗೂ ಸಹ ಪ್ರಾಕ್ತನಕರ್ಮ ತಪ್ಪಿದ್ದಲ್ಲ ಎಂಬ ಭಾವ ಸುಳಿಯಿತು. ತತ್‌ಕ್ಷಣ, ಹರಿಣಾಪಿ ಹರೇಣಾಪಿ ಬ್ರಹ್ಮಣಾಪಿ ಸುರೈರಪಿ | ಲಲಾಟಲಿಖಿತ ರೇಖ ಪರಿಮರ್ಷ್ಟುಂನ ಶಕ್ಯತೇ|| -ಈ ಶ್ಲೋಕವನ್ನು ಕೊಂಚ ಗಟ್ಟಿಯಾಗೇ ಹೇಳಿಕೊಂಡರು. ನಂತರ ಹಾಗೇ ಚಿಂತನೆ ಮಾಡುತ್ತ ಕುಳಿತರು.... ಯಾವ ಯಾವ ಕರ್ಮವನ್ನ, ಕರ್ಮಫಲವನ್ನ, ಯಾರು ಯಾರು, ಯವ ಯಾವ ರೀತಿಯಿಂದ, ಎಲ್ಲೆಲ್ಲಿ, ಹೇಗೆ ಹೇಗೆ ಅನುಭವಿಸಬೇಕಾಗಿದೆಯೋ-ಹಾಗೆ ಹಾಗೆ, ಅದೇ ರೀತಿ, ನಾವು ಕರ್ಮಫಲವನ್ನು ಅನುಭರಸಬೇಕಾಗಿರುತ್ತದೆ, ಇದಕ್ಕೆ ಯಾರೂ ಹೊಣೆಯಲ್ಲ. ಇದರಲ್ಲಿ ಕೃತಿ ನಡೆದೂ ನಡೆಯದೆಯೂ, ನೋಡಿಯೂ ನೋಡದೆಯೂ,