ಪುಟ:ವೈಶಾಖ.pdf/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೩೩ ಮಾತನಾಡಿಯೂ ಮಾತನಾಡದೆಯೂ ಅಪವಾದ ದೋಷಗಳಿಗೆ ಪ್ರಪ್ತರಾಗಬಹುದು ಎಂದು ಧರ್ಮಶಾಸ್ತ್ರದ ಕೆಲವು ಉಕ್ತಿಗಳನ್ನೂ ನೆನೆಸಿಕೊಂಡರು. ಅವರ ಸೋತ ಮನಸ್ಸು ಯುಕ್ತ ಪರಿಜ್ಞಾನವನ್ನು ಕಳೆದುಕೊಂಡು ಕರ್ಮಕ್ಕೆ ಶರಣಾಗಿತ್ತು... ಬ್ರಹ್ಮಾಯೇನ ಕುಲಲವನ್ನಿಯಮಿತೋ ಬ್ರಹ್ಮಾಂಡಭಾಂಡೋದರೇ। ವಿಷ್ಣುರ್ಯೇನ ದಶಾವತಾರಗಹನೇ ಕ್ಷಿಪ್ಲೋ ಮಹಸಂಕಟೇ। ರುದ್ರೋಯೇನ ಕಪಾಲಪಾಣಿಪುಟಕೇ ಭಿಕ್ಷಾಟನಂ ಸೇವತೇ। ಸೂರ್ಯೋಬ್ರಾಮ್ಯತಿ ನಿತ್ಯಮೇವ ಗಗನೇ ತನ್ನೇನಮಃ ಕರ್ಮಣೇ।। -ಹೀಗೆ ಕೃಷ್ಣಶಾಸ್ತ್ರಿಗಳು ಜಪ, ತಪ, ಧ್ಯಾನ, ಪೂಜೆ, ಪುರಸ್ಕಾರಗಳಿಂದ ತಮ್ಮ ತಾಪವನ್ನು ಮುಳಗಿಸಲೆತ್ನಿಸಿದರೆ, ರುಕ್ಕಿಣಿಯು ತನ್ನ ಭಯಂಕರ ಯಾತನೆಯನ್ನು ಮರೆಯಲು ಯಾವ ಆಸರೆಯೂ ಇಲ್ಲದೆ ನರಳುತ್ತಿದ್ದಳು. ಚಾವಡಿಯಿಂದ ಬಂದವಳೇ ಸರಸಿ ಕೇಳಿದಳು: “ಲಕ್ಕನ್ನ ಯಾಕಕ್ಕೆ ಹಾಗೆ ಹೊಡದ್ರು?- ನನಗಂತೂ ನೋಡಕ್ಕೇ ಆಗಲಿಲ್ಲ. ಆಲೂನೆ ಬಂದುಬಿಡಮ್ಮ.....” ರುಕ್ಕಿಣಿಗೆ, ಹೇಗೆ ಆ ಕಂದನಿಗೆ ಉತ್ತರವೀಯಬೇಕೊ ತಿಳಿಯದೆ ಒಳಗೇ ಜೀವ ಮುಲುಮುಲುಗುಟ್ಟಿತು. ಕೇವಲ ಒಂದು ಮಗುವಿನಿಂದ ಮುಚ್ಚಿಡುವಷ್ಟು ಹೀನ ರಹಸವಾಯಿತೆ ತನ್ನ ಬದುಕು, ಎಂದು ತನ್ನನ್ನೇ ಹಳಿದುಕೊಂಡಳು. ಊಟ ಮಾಡಿ ಮಲಗುವ ಪದ್ಧತಿಯಂತೆ ಸರಸಿ 'ರಾಮಂ ಸ್ವಂದಂ ಹನೂಮಂತಂ...” ಶ್ಲೋಕವನ್ನು ಗಟ್ಟಿಯಾಗಿ ಹೇಳಿದಳು. ತರುವಾಯ ಆ ಕೋಣೆಗೆ ಸರ್ವದ ಪ್ರವೇಶವಾಗುವ ಮೊದಲು ರೂಢಿಯಾಗಿದ್ದ -ಇಂದ್ರನ ಮನೆ ನಂದಾದೀವಗೆ ಇಂದು ಹೋಗಿ, ನಾಳೆ ಬಾ' ಹೇಳಿ, ಸರಸಿಯೂ ಮೂಲೆಯ ದೀಪಾಲೆಕಂಬದ ಮೇಲೆ ಹೊತ್ತಿಸಿಟ್ಟ ಹಣತೆಯನ್ನು ಉಫ್ ಎಂದು ಆರಿಸಿಬಿಟ್ಟಳು. ಒಡನೆಯೆ ಕೋಣೆಯನ್ನು ಗಕುಂ ಎಂದು ತುಂಬಿದ ಕತ್ತಲೆ ಅವಳೊಳಗೆ ಭೀತಿ ಹುಟ್ಟಿಸಿತು. “ಅಕ್ಕ, ಅಕ್ಕ-ದೀಪ ಯೋಯ್ತು ಕಣೆ...