________________
೧೯
ರಟ್ಟೆ ಇಡುದೆಳುದು, ದಡಾರನೆ ಕಡ ಮುಚ್ಚಿ, ತಾಪಾಳು ಝಾಡಿಸಿದ್ದು....
ವಸಿ ದೂರ ವೋಗೂದರೊಳ್ಗೆ ಆ ಗೋಣಿ ತಾಟ್ನ ವಳಗೆ ಏನಿರಬೈದು ಅನ್ನೊದು ಲಕ್ಕಂಗೆ ತಿಳಿದೋಗಿತ್ತು. ಅದರ ನಾತವೆ ಸಾಗ್ತಾ ಇತ್ತು ಎಲ್ಲಾ ಕತೆನೂವೆ!. ತನ್ನಯ್ಯನೂ ಕುಡಿದು ಬತ್ತಾ ಇರನಿಲ್ವ?... ತನಗೆ ಅದರ ವಾಸಣ ತೀರ ಹೇಸಿಗೆ...
“ಲ....ಲೋ ಲಕ್ಕ....ನಿಂತುಗೊಳ್ಳಾ ಅಪ್ಪಯ್ಯಾ...” ಹಿಂದಿಂದ ಕೂಗ್ತ ಓಡಿಬಂದೋರು ಯಾರೂಂತ ನೋಡಿದ್ರೆಬೈಲಿಗ ರಂಗ!
“ಸದ್ಯ ಆ ಮಾರಿ ಕಯ್ಯಿಂದ ತೆಪ್ಪುಸಿಬಂದೆ..."ದುಸುದುಸು ಏದ್ತ್ತ ವದುರ್ದ. “ಅದ್ಯಾವ ಮಾಟದಲ್ಲಿ ತೆಪ್ಪುಸ್ದೆ?” -ಲಕ್ಕ ಕೇಳಿದಾಗ,
“ಏಡು ನಿಮಿಸ ಅವಳು ಯೋಳಿದ್ದ ಕೇಳ್ಕಂಡು ವಕ್ಕಡೆ ಕುಕ್ಕುರುಸಿದ್ದೋನು, ಅವಳು ಅಡಿಗೆ ಕ್ವಾಣೆಗೆ ಹ್ವಾದೆ ಸಮ, ಮುಂದಿನ ಬಾಗಿಲ ತಾಪಾಳ ತೆಗೆದು ವಾಟ ವೊಡದುದ್ದೇ ವೊಡದುದ್ದು...ವೊಡದುದ್ದು...”
ರಂಗ ಜೋರು ಜೋರಿಂದ ನಕ್ಕ. ಅಂಗೆ ನಗಾಡ್ವಾಗ ಅವ್ನ ಹೊಟ್ಟೆ ಮುಂಚೋರಿ ದೋಣವೆ ಎದ್ದು ಬಿದ್ದು ಕುಣದಾಡ್ತಿತ್ತು. ಅದ ಕಂಡು ಲಕ್ಕನೂವೆ ತಡಕೋನಾರದೆ ಬಿದ್ದು ಬಿದ್ದು ನಗಾಡ್ಡ, ನಗಾಡ್ತ ನಗಾಡ್ತಾನೆ ಬೈಲಿಗೆ ರಂಗ ಲಕ್ಕನ ಸಂಸಯಾವ ನಿವಾರ್ಸಿದ್ದ.
“ಈ ಬಾಟ್ಲಿಗಳು ಜಪ್ಪಯ್ನ ಮಟದ ಸಿವಪಾದಪ್ಪಾರಿಗಲ್ಲ ಕನೊ, ಲಕ್ಕ...” “ಮಂತೆ?”
“ಅವರೆಸರ್ನಲ್ಲಿ ನಂಜೇಗೌಡುರು ನಡುಸ್ತಿರೋ ಕರಾಮತ್ತು ಇದು. ಪಾಪ, ಈ ಪರಿಪಾಟ್ಲ ಒಂದೂ ತಿಳೀದ ಆ ಅಯ್ಯನೋರ್ಗೆ ಸುಮ್ಮಸುಮ್ಕೆ ಅಪಾದ, ಕೆಟ್ಟೆಸರು...”
ಕುಡುದ ಗ್ಯಾನದಲ್ಲಿ ಈಟೆಲ್ಲ ಇವರಿಸಿ, ಬೈಲಗ ರಂಗ ಮಾರಿ ಗುಡಿದಿಕ್ಕೆ ವೋಳ್ಳಿದ. ಅಂಗೆ ವೊಳ್ವಾಗ ಲಾಟೀನ ಈ ಕೈಯಿಂದ ಈ ಕಯ್ಯಗೆ ಬದ್ಲಾಯಿಸ್ಥ. ಆಗ ಅವ್ರು ಕಂಕುಳಲ್ಲಿ ಇರುಕಿಸಿದ್ದ ಬಾಟ್ಲಿಗಳ ಇನ್ನೊಂದು ಹೊದೆ ಲಕ್ಕನ ಕಣ್ಣಿಗೂ ಬಿತ್ತು.... “ಈ ನಮ್ಮ ಊರಾಗೆ ಯಾರೋ ಹೆಸರು, ಇನ್ಯಾರ್ದೋ ಬೊಸರು”- ಇಸ್ಮಯಪಡ್ತ, ಆ ಮಾಲ ಗುಟ್ಟಾಗಿ ಕ್ವಿಂಡೋಗಿ ಗೌಡ್ರಿಗೆ ತಲುಪಿದ್ದ ಲಕ್ಕ...ಮಠದ ವಳುಗಡೀಕೆ ಎಲ್ಲೋ ಸಿವಪಾದಪ್ಪನೋರು ತಮೋಟಿಗೆ ತಾವು ಯಾವೋ ಸರಣರ ಪದವ ಅಂದುಕತ್ತಿದ್ದರು...ಗೌಡ್ರಿಗೆ ಕುಸಿ ಆಯ್ತು. ಮೊಗ