ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೪ ವೈಶಾಖ ಹೆದರಿಕೆಯಾಗುತ್ತ” ಕಿರುಚಿದಳು. ಕೂಡಲೆ ಆರಿದ್ದ ದೀಪವನ್ನು ರುಕ್ಕಿಣಿಯು ಪುನಃ ಹಚ್ಚಿ, ಅವಳನ್ನು ತಟ್ಟುತ್ತಾ ಮಲಗಿಸಿದಳು. ಕಣ್ಣು ಮಿಟುಕಿಸುವಷ್ಟು ಜಾಗ್ರತೆ ಸರಸಿಯನ್ನು ನಿದ್ರೆ ಆವರಿಸಿತ್ತು. ರುಕ್ಕಿಣಿಗೆ ಮಾತ್ರ ನಿದ್ರೆ ಬಾರದು. ಮತ್ತೆ ಮತ್ತೆ ಲಕ್ಕನನ್ನು ಚಾವಡಿಯ ಮುಂದೆ ಕಂಬಕ್ಕೆ ಕಟ್ಟಿ ಹೊಡೆದ ದೃಶ್ಯವೂ ತಾನೇ ಸ್ವತಃ ಎದುರಿಗಿದ್ದು ನೋಡಿದಷ್ಟು ಸಷವಾಗಿ ಕಣ್ಣುಂದೆ ಕುಣಿಯುವುದು. ಆ ಬೆತ್ತದ ಕೊಲಿನ ಏಟು ತನಗೇ ಬಿದ್ದು ಮೈಮೇಲೆಲ್ಲ ಬಾಸುಂಡೆ ಎದ್ದಂತೆ ನೋವು ಅನುಭವಿಸುವಳು.. ಈ ಯಮಯತನೆಯಿಂದ ಮುಕ್ತಿ ಎಂತು? ಎಂದು ಪರಿತಪಿಸುವಳು. ಪಾರಾಗುವ ದಾರಿಯೆ ಕಾಣದೆ ತಳಮಳದಿಂದ ಹೊರಳವಳು... ಹೀಗೆ, ಬೆಳಕಿಂಡಿಯಿಲ್ಲದ ಕೋಣೆಯ ಹೊಗೆಯಾಗಿ ಸುತ್ತುವ ಚಿಂತೆಯಿಂದ ಉಸಿರುಗಟ್ಟಿ ಇಡೀ ರಾತ್ರಿಯನ್ನು ಕಳೆದಳು. ಬೆಳಿಗ್ಗೆ ವೆಂಕಣ್ಣ ಜೋಯಿಸರ ಮನೆಯಿಂದ ಎದ್ದ ಬಾಲಕರ ವೇದಘೋಷದೊಡನೆ ತಾನೂ ಎದ್ದ ನಿತ್ಯಕರ್ಮದಲ್ಲಿ ತೊಡಗಿದ್ದಳು. ಇಷ್ಟರಲ್ಲಿ ಒಂದು ವಿಚಿತ್ರ ಶಾಂತಿ ನೆಲೆಸಿದಂತಿತ್ತು. ಇಷ್ಟು ದಿನ ಸದಾ ದುಖಿಯಾಗಿರುತ್ತಿದ್ದ ರುಕ್ಕಿಣಿಯಲ್ಲಿ ಒಂದು ಸಮಾಧಾನದ ಪ್ರಶಾಂತತೆಯನ್ನು ಗಮನಿಸಿದ ಕೃಷ್ಣಶಾಸ್ತ್ರಿಗಳು, ಅದರ ಕಾರಣ ತಿಳಿಯದೆ ಅಚ್ಚರಿಪಡುತ್ತಿದ್ದರು. ಈ ದಿನ ಅವಳೇ ಹೂಗಳನ್ನು ಬಿಡಿಸಿ ತಂದು [ಈ ಕರ್ಮ ಆ “ಸಂಗತಿ' ನಡೆದ ದಿನದಿಂದ ನಿಂತು ಹೋಗಿತ್ತು. ಶಾಸ್ತ್ರಿಗಳೇ ಹೂ ಬಿಡಿಸಿ ತರುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.] ದೇವರಿಗೆ ಹೂಮಾಲೆ ಕಟ್ಟಿ ಇಟ್ಟಿದ್ದಳು. ಅವಳೇ ಶ್ರೀಗಂಧವನ್ನು ಪೂರ್ತಾ ತೇದು ಬೆಳ್ಳಿಯ ಬಟ್ಟಲಲ್ಲಿ ಎತ್ತಿ ಇಟ್ಟಿದ್ದಳು. ಮಂತ್ರಾಕ್ಷತೆಯನ್ನು ಸಿದ್ಧಗೊಳಿಸಿದ್ದಳು. ಶಾಸ್ತ್ರಿಗಳ ಸಂಧ್ಯಾವಂದನೆಗೆ ಹಿಂದಿನಂತೆಯೇ ಎಲ್ಲವನ್ನೂ ಅಣಿಮಾಡಿದ್ದಳು... ಭೀಮನಳ್ಳಿಯಿಂದ ಬಂದಾಗಿನಿಂದ ಅವಳು ಇದ್ಯಾವುದನ್ನೂ ಈ ದಿನದ ಮುತುವರ್ಜಿಯಿಂದ ಮಾಡಿದ್ದಿಲ್ಲ!- ಶಾಸ್ತ್ರಿಗಳು ಕಂಡೂ ಕಾಣದಂತೆ ಇದೆಲ್ಲವನ್ನೂ ಗಮನಿಸುತ್ತಿದ್ದರು. ಸರಸಿಯನ್ನು ಎಬ್ಬಿಸಿ, ಅವಳು ಬೇಡಬೇಡವೆಂದರೂ ಮುದ್ದು ಮಾಡಿ ಒಲಿಸಿಕೊಂಡು ಅವಳಿಗೆ ಸೊಗಸಾಗಿ ಅಭ್ಯಂಜನ ಮಾಡಿಸಿದ್ದಳು. ಸ್ನಾನ ಮಾಡಿಸಿದ್ದಳು. ಅನಂತರ ಬಾಳೆಹಣ್ಣು, ದೀಪದಾಕಿಗಳ ಸಹಿತ ನೀರು ಬೆರಸದೆ, ಕೇವಲ ಹಾಲಿನಲ್ಲಿ ತಯಾರಿಸಿದ ಸಜ್ಜಿಗೆಯನ್ನು ದೇವರಿಗೆ ನೈವೇದ್ಯವಾದ ಬಳಿಕ, ಒಲ್ಲೆ ಒಲ್ಲೆನೆಂದರೂ ಬಿಡದೆ, ತನ್ನ ತೊಡೆಯ ಮೇಲೆ ಸರಸಿಯನ್ನು ಕೂರಿಸಿಕೊಂಡು, ಎಂದಿಲ್ಲದ ಅಕ್ಕರೆಯಿಂದ ಅದನ್ನು ತಿನ್ನಿಸಿದ್ದಳು. ಸಾಸ್ತಿಗಳ ತಟ್ಟೆಯಲ್ಲೂ ಹಿಂದೆ ನೀಡುತ್ತಿದ್ದ ಅಭ್ಯಾಸದಂತೆ, ಆಗ ನೀಡುತ್ತಿದ್ದದಕ್ಕೂ ಮೀರಿದ