ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩.೩.೫. ಸಜ್ಜಿಗೆಯ ಮೊತ್ತ. [ಶಾಸ್ತ್ರಿಗಳು ಅದನ್ನು ಸೇವಿಸುವುದನ್ನು ಎಂದೋ ಬಿಟ್ಟಿರುವುದನ್ನೂ ಮರೆತು] ರುಕ್ಕಿಣಿಯ ಈ ಎಲ್ಲ ಚರ್ಯೆಗಳಿಂದ ಮೊದಮೊದಲು ಚಕಿತರಾದರೂ, ಕಾಲಕ್ರಮೇಣ ಅವಳಿಗೆ ಆರಂಭದ ನೋವು ಕಡಿಮೆಯಾಗಿರಬೇಕೆಂದು ಶಾಸ್ತ್ರಿಗಳು ಊಹಿಸಿದರು. ಅವರು ಬೀದಿಗೆ ಇಳಿಯುತ್ತಿದ್ದಂತೆ, ರುಕ್ಕಿಣಿಯು ಧಾವಿಸಿ ಬಂದು, ಬಾಳೆ ಎಲೆ ತಗೊಂಡು ಬನ್ನಿ ಮಾವಯ್ಯ, ಎನ್ನುತ್ತಿದ್ದಂತೆ, ವೆಂಕಣ್ಣ ಜೋಯಿಸರ ಜಗಲಿಯ ಮೇಲೆ ನೆರೆದ ಬ್ರಾಹ್ಮಣ ಪ್ರಮುಖರ ಕೊನೆಕೊನೆಯ ಮಾತುಗಳು ರುಕ್ಕಿಣಿಯ ಕಿವಿಗೆ ಬಿದ್ದವು: “...... ಆದ್ದರಿಂದ ರುಕ್ಕಿಣಿಗೆ ಘಟಸ್ಫೋಟಮಾಡಿ, ಮಂಡೆ ಬೋಳಿಸಿ, ಕತ್ತೆಯ ಮೇಲೆ ಕೂರಿಸಿ, ಊರು ಬಿಟ್ಟು ಓಡಿಸಬೇಕು..... ನಮ್ಮ ಇಡೀ ಬ್ರಾಹ್ಮಣ ಸಮುದಾಯದ ಮಾನವನ್ನ ಕಳೆದಿರತಕ್ಕ ಆ ಪಾಪಿಗೆ ಇದೊಂದೇ ತಕ್ಕ ಪ್ರಾಯಶ್ಚಿತ್ತ.....” ಈ ಮಾತುಗಳನ್ನು ಆಲಿಸಿ, ಗಾಬರಿಗೊಂಡ ಶಾಸ್ತಿಗಳು ಆತಂಕದಿಂದ ರುಕ್ಕಿಣಿಯತ್ತ ದೃಷ್ಟಿ ಹೊರಳಿಸಿದರು. ವಿಷಣ್ಣಛಾಯೆ ಒಂದು ಕ್ಷಣ ಅವಳ ಮುಖವನ್ನು ಕವಿಯಿತು. ಮರುಗಳಿಗೆಯಲ್ಲಿಯೇ ಹಿಂದಿನ ಪ್ರಶಾಂತತೆ ಮೂಡಿತು. ಏನೂ ಆಗಲಿಲ್ಲವೇನೋ ಎಂಬಂತೆ ಸಮಾಧಾನವಾಗಿ ಒಳಗೆ ನಡೆದಳು, ಶಾಸ್ತಿಗಳು ಮಾತ್ರ ಬ್ರಾಹ್ಮಣಸಮೂಹದ ತೀರ್ಮಾನದಿಂದ ಕಂಗೆಟ್ಟರು. ಇಷ್ಟು ಕಾಲ ಅವರಲ್ಲಿ ಭದ್ರವಾಗಿ ಮನೆಮಾಡಿದ್ದ ಚಿತ್ತಸ್ಟ್ರ್ಯ , ಬ್ರಾಹ್ಮಣರ ತೀರ್ಪನ್ನು ಕೇಳಿ ಜರ್ಝರಿತವಾಯಿತು..... ರುಕ್ಕಿಣಿಗೆ ಘಟಸ್ಫೋಟ ಮಾಡಲು ಅವರು ನಿರ್ಧರಿಸಿದ್ದು ಶಾಸ್ತಿಗಳಿಗೆ ಅಂತಹ ಆತಂಕದ ವಿಷಯವೇನೂ ಆಗಿರಲಿಲ್ಲ! ಅವರು ಅದನ್ನು ನಿರೀಕ್ಷೆ ಮಾಡಿಯೇ ಇದ್ದರು. ಆದರೆ ಅವಳಿಗೆ ಮಂಡೆ ಬೋಳಿಸಿ, ಕತ್ತೆಯ ಮೇಲೆ ಕೂರಿಸಿ, ಊರು ಬಿಟ್ಟು ಓಡಿಸಬೇಕೆಂಬ ತೀರ್ಮಾನ ಅವರನ್ನು ಕುಕ್ಕಿತು. ಜೊತೆಗೆ ಅವರು ಅದೇ ದಾರಿಯನ್ನು ಹಿಡಿದು ತೋಟಕ್ಕೆ ತೆರಳುವಾಗ, ಕೇಶವಯ್ಯನು ಶಾಸ್ತ್ರಿಗಳಿಗೆ ಕೇಳಿಸಲೆಂದೇ ಒಂದು ಪಕ್ಷ ಶಾಸ್ತ್ರಿಗಳು ಅಡ್ಡಿ ಪಡಿಸಿದರೆ, ಅವರನ್ನು ಕಟ್ಟಿಹಾಕಿ, ಈ ಕಾರ್ಯಾನ ಪೂರ್ಣಗೊಳಿಸಬೇಕು” ಎಂದು ಜಗಲಿಯ ಮೇಲಿನಿಂದ ಮಾತನ್ನು ಉಡಾಯಿಸಿದ್ದ. ತೋಟದಿಂದ ಬಾಳೆಲೆಯ ಕಟ್ಟು ಹಿಡಿದು ಮನೆಗೆ ಬರುವಾಗಲೂ ಅವರನ್ನು ಇದೇ ಕಳಕಳ ಬಾಧಿಸುತ್ತಿತ್ತು...