ಪುಟ:ವೈಶಾಖ.pdf/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೩೭ ೩೫ ಮರುದಿನದ ಪ್ರಾತಃಕಾಲ ಎಂದಿನಂತೆ ಸೂರ್ಯೋದಯಕ್ಕೆ ಮುನ್ನವೇ ಕೃಷ್ಣಶಾಸ್ತ್ರಿಗಳು ಎದ್ದು ತೋಟಕ್ಕೆ ಹೋದರು. ಎಂದಿನಂತೆ ಹರಬಿಗಳಲ್ಲಿ ಕೊಳದ ನೀರನ್ನು ಗಿಡಗಳಿಗೆ ಊಡಿದರು. ಎಂದಿನಂತೆ ಕೊಳದಲ್ಲಿ ಸ್ನಾನ ಅಸ್ಮಿಕಗಳನ್ನು ಪೂರೈಸಿ, ಸೂರ್ಯನಾರಾಯಣನಿಗೆ ಅರ್ಥ್ಯ ಕೊಟ್ಟು, ಕೆಲವಾರು ದಿನಗಳಿಂದ ನಡೆದುಬಂದ ಪದ್ಧತಿಯಂತೆ ;ಒದ್ದೆ ಪಂಚೆಯಲ್ಲಿಯೆ ಮನೆಗೆ ಹಿಂದಿರುಗಿದರು. ಆದರೆ ತೋಟದಿಂದ ಈ ದಿನ ಅವರು ಸ್ವಲ್ಪ ಜಾಗ್ರತೆಯಾಗಿಯೇ ಬಂದಿದ್ದರು. ಏಕೆಂದರೆ ಕೇರಿಯ ಬ್ರಾಹ್ಮಣರು ರುಕ್ಕಿಣಿಗೆ ಇದೇ ಬೆಳಿಗ್ಗೆ ಘಟಸ್ಫೋಟ ಮಡುವವರಿದ್ದರು! ಆ ಕರ್ಮವನ್ನು ಅವರು ಆರಂಭಿಸುವುದಕ್ಕೂ ಮುನ್ನ ತಾವು ಮನೆ ಸೇರಿಬಿಡಬೇಕು. ಅವರು ಎಲ್ಲಿ ಬೇಕದರೂ ಘಟಸೋಟ ಮಾಡಿಕೊಳ್ಳಲಿ. ಆದರೆ ಅವರು ರುಕ್ಕಿಣಿಗೆ ತಲೆ ಬೋಳಿಸಿ, ಕತ್ತೆಯ ಮೇಲೆ ಕೂರಿಸಿ, ಊರಿನಿಂದ ಓಡಿಸುವುದಕ್ಕೆ ಮಾತ್ರ ಅವಕಾಶವೀಯಬಾರದು... ನನ್ನ ರೆಟ್ಟೆಯಲ್ಲಿ ಇನ್ನೂ ಶಕ್ತಿ ಕುಂದಿಲ್ಲ. ಈ ಹಾರುವಮಂದಿ ನಾನು ಪ್ರತಿಭಟಿಸಿದರೆ, ನನ್ನನ್ನು ಕಟ್ಟಿಹಾಕಿ ಅವಳ ತಲೆ ಬೋಳಿಸುತ್ತಾರಂತೆ..... ಬರಲಿ, ಇವರು ಅದೆಷ್ಟು ಮಂದಿ ಬರುತ್ತಾರೋ ಬರಲಿ. ಒಬ್ಬೊಬ್ಬರನ್ನು ಸದೆಬಡಿದು ಅವರು ಹುಟ್ಟಿದ ದಿನ ಕಾಣಿಸಿಬಿಡುತ್ತೇನೆ..... ಕೃಷ್ಣಶಾಸ್ತಿಯನ್ನು ಕೆಣಕುವುದು ಈ ಶೋಭೆಮುಂಡೇಗಂಡರು ಹೋಳಿಗೆ, ಆಂಬೋಡೆ, ಬೂದುಗುಂಬಳ ಮಜ್ಜಿಗೆಹುಳಿ, ಚಿರೋಟಿಗಳನ್ನು ಚಪ್ಪರಿಸಿ ಹೊಟ್ಟೆಗಿಳಿಸುವಷ್ಟು ಸುಲಭವಲ್ಲ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತೇನೆ... ಇವರೆಲ್ಲ ಮಾತಿನಲ್ಲಿ ಶೂರರು. ಒಂದೆರಡು ಬಿದ್ದರೆ ಆ ಪೌರುಷವೆಲ್ಲ ಕಣಾರ್ಧದಲ್ಲಿ ಧೂಳೀಪಟವಾಗುತ್ತದೆ. ಅವರ ಗುಣ ನನಗೆ ತಿಳಿಯದೆ?... ಶಾಸ್ತ್ರಿಗಳು ಆ ಬ್ರಾಹ್ಮಣರ ಗುಂಪನ್ನು ಮನಸ್ಸನನಿಂದ ತಳ್ಳಿಹಾಕಿದರು. ಬೇರೆ ಆಲೋಚನೆ ಅವರ ಚಿತ್ತವನ್ನು ಆಕ್ರಮಿಸಿತು.... ರುದ್ರಪಟ್ಟಣದ ವೈಣಿಕ ಶ್ಯಾಮ ಹಿಂದೆ ರುಕ್ಕಿಣಿಯನ್ನು ವಿವಾಹವಾಗಬೇಕೆಂದು ಬಯಸಿದ್ದನಲ್ಲವೆ?... ಆಗ ಸಾವಿತ್ರಿಯ ವಿರೋಧದ ಜೊತೆಗೆ ರುಕ್ಕಿಣಿಯೂ ಆತನನ್ನು ಲಗ್ನವಾಗಲು ಒಪ್ಪದೆ ನಿರಾಕರಿಸಿದ್ದಳು. ತಾರುಣ್ಯದಲ್ಲಿ ಯಾವುದು ಹಿತ, ಯವುದು ಅಹಿತ ಎಂಬುದು ನಮಗೇ ತಿಳಿದಿರುವುದಿಲ್ಲ. ರುಕ್ಕಿಣಿಗಾದರೂ ಆ ಸಮಯದಲ್ಲಿ ಹಾಗೆ ಆಗಿರಬೇಕು... ವಿಚಿತ್ರವೆಂದರೆ ಆ ಶ್ಯಾಮನಿಗೆ ರುಕ್ಕಿಣಿಯ ಮೇಲಿನ ಮೋಹ ಹೋದಂತೆ ತೋರುವುದಿಲ್ಲ. ಅವನು ಮೈಸೂರಿನಿಂದಲೋ ರುದ್ರಪಟ್ಟಣದಿಂದಲೂ ನಮ್ಮ ಊರಿಗೆ ಮೇಲಿಂದಮೇಲೆ ಬರುತ್ತಲೇ ಇರುತ್ತಾನೆ. ರುಕ್ಕಿಣಿಯ ಸಂಗಡ