ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೮ ವೈಶಾಖ ಮಾತಾಡುವಾಗ ಅವನ ನೋಟ ಅಪೂರ್ವ ಮಾರ್ದವತೆಯಿಂದ ತೇಲುವುದನ್ನು ತಾನು ಗಮನಿಸಿಲ್ಲವೆ?..... ಅಂದರೆ ರುಕ್ಕಿಣಿಯ ಬಗ್ಗೆ ಅವನ ಪ್ರೇಮೋನ್ಮಾದ ಹಿಂದಿನಂತೆಯೇ ಉಳಿದಿದೆ ಎಂದಾಯಿತು... ನಮ್ಮ ವಿಶ್ವ ಮೃತನಾದ ಹತ್ತು ಹನ್ನೊಂದು ತಿಂಗಳಲ್ಲೆ ರುಕ್ಕಿಣಿಯು ಈಗಲೂ ಇಚ್ಚಿಸಿದರೆ ತಾನು ಅವಳನ್ನು ಲಗ್ನವಾಗಲು ಸಿದ್ಧ ಎಂದು ಶ್ಯಾನುಭೋಗರ ಸಂಗಡ ಹೇಳಿಕಳಿಸಿರಲಿಲ್ಲವೆ?ಆಗಲೂ ರುಕ್ಕಿಣಿಯು ಅವನ ಪ್ರೇಮಹಸ್ತವನ್ನು ಕೋಪದಿಂದಲೆ ನಿರಾಕರಿಸಿರಲಿಲ್ಲವೆ?... ಆದರೆ ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಅವಳು ಬದುಕಿ ಉಳಿಯಬೇಕಾದರೆ, ಶ್ಯಾಮನನ್ನು ಕೂಡಿಕೊಳ್ಳುವುದೊಂದೇ ಈಗ ಉಳಿದಿರುವ ಮಾರ್ಗವಲ್ಲವೇ?- ಈಗಲೂ ರುಕ್ಕಿಣಿ ಒಪ್ಪಿದರೆ, ಶ್ಯಾಮ ಅವಳ ಕೈ ಹಿಡುದು ತನ್ನ ಮನೆ ತುಂಬಿಕೊಳ್ಳಲು ಹಿಂಜರಿಯಲಾರ... ಈ ಆಲೋಚನೆ ಬಂದೊಡನೆಯೇ ಧೂ ಎಂದು ತಮ್ಮ ಬಗ್ಗೆಯೇ ಶಾಸ್ತಿಗಳಿಗೆ ಹೆಸಿಗೆಯಾಯಿತು. ತನ್ನ ಪಾಪದ ಹೊರೆಯನ್ನು ಇಳುಕಲು ಆ ನಿಷ್ಕಳಂಕ ಮುಗ್ಧನನ್ನು 'ಹೊರೆಕಲ್ಲು' ಮಾಡಿಕೊಳ್ಳುವುದೇ?... ನನ್ನೊಳಗೆ ಈ ನೀಚ ಭಾವನೆ ಯಾಕಾದರೂ ಮೊಳೆಯಿತೋ!... , ಛ, ನಾನು ಮಾಡಿದ ಪಾಪಕ್ಕೆ ಇನ್ನೊಬ್ಬರನ್ನು ಎಂದೆಂದಿಗೂ ಪರಿಹಾರಪಶುವಾಗಿ ಉಪಯೋಗಿಸಬಾರದು. ನನ್ನ ಪಾಪಕರ್ಮಕ್ಕೆ ನಾನೇ ಹೊಣೆಗಾರನಾಗಿ ನಿಲ್ಲಬೇಕು!.... ಇದೇ ವಿಚಾರದ ಗುಂಗಿನಲ್ಲಿ ಮುಳುಗಿ ಏಳುತ್ತ, ಕೃಷ್ಣಶಾಸ್ತ್ರಿಗಳು ಗೊದಮೊಟ್ಟೆ ಕಟ್ಟನ್ನು ಹೊತ್ತು ಮನೆಯೊಳಗೆ ಕಾಲಿಟ್ಟರು. ಮನೆ ನಿಶ್ಯಬ್ದವಾಗಿತ್ತು. ಅವರು ಒಳಗೆ ಬಂದೊಡನೆಯೆ, ಕೈಕಾಲುಗಳಿಗೆ ನೀರು ಕೊಡಲು ಬರುತ್ತಿದ್ದ ರುಕ್ಕಿಣಿಯು ಇಂದೇಕೆ ಬರಲಿಲ್ಲ? ಕೇರಿಯ ಬ್ರಾಹ್ಮಣರ ಘಟಸ್ಫೋಟದ ತೀರ್ಮಾನ ಕೇಳಿ ಬೇಗೊಂಡು ಅಡಿಗೆ ಕೋಣೆಯಲ್ಲಿ ಒಬ್ಬಳೇ ಕುಳಿತು ಕಂಬನಿ ಸುರಿಸುತ್ತಿರಬೇಕು. ಆದರೆ ಸರಿಸಿ ಕಾಣುತ್ತಿಲ್ಲವಲ್ಲ? ಎಂದು, ಗೊದಮೊಟ್ಟೆಯ ಕಟ್ಟನ್ನು ಅಂಗಳದ ಒಂದು ಮೂಲೆಗೆ ಒಗೆದು, ಅವರಿಬ್ಬರೂ ಮಲಗುವ ಕೋಣೆಯೊಳಗೆ ಇಣಿಕಿದರು. ಸರಸಿ ಇನ್ನೂ ಮಲಗೇ ಇದ್ದಳು. ರುಕ್ಕಿಣಿಯೇಕೆ ಈ ದಿನ ಇವಳನ್ನಿನ್ನೂ ಎಬ್ಬಿಸಿಲ್ಲ?- ನೋಡೋಣವೆಂದು ಅಡಿಗೆಕೋಣೆಯಲ್ಲಿ ಬಗ್ಗೆ ನೋಡಿದರು. ರುಕ್ಕಿಣಿ ಅಲ್ಲೂ ಕಾಣಲಿಲ್ಲ.... ಅವಳಿಗೆ ವಿಪರೀತ ಜುಗುಪ್ಪೆಯಾಗಿ ಯವ ಕೆಲಸ ಮಡಲೂ ಮನಸ್ಸಿಲ್ಲದೆ, ಯಾವುದೋ ಮೂಲೆ ಹಿಡಿದು ಕುಳಿತರಬೇಕು... ಈ ಭಾವನೆಯಿಂದ ಮನೆಯನ್ನೆಲ್ಲ ಶೋಧಿಸಿದರು. ಅವಳು ಎಲ್ಲೂ ಕಾಣಲಿಲ್ಲ.... ಹಿತ್ತಿಲ ಬಾಗಿಲು ತೆರೆದಿತ್ತು. ಕೊಟ್ಟಿಗೆಯಲ್ಲಿ