________________
ಸಮಗ್ರ ಕಾದಂಬರಿಗಳು ೩೩೯ ಹಾಲು ಕರೆಯುತ್ತಿರಬಹುದು ಎಂದು ಅಲ್ಲಿ ಹೊಗಿನೋಡಿದರು. ಅಲ್ಲಿ ಕಸ ಹಕಿ, ದನಗಳನ್ನು ಕಾಡಿಗೆ ಅಟ್ಟಿಕೊಂಡು ಹೋಗಲು ತಾವು ನೇಮಿಸಿಕೊಂಡಿದ್ದ ಹೊಲೆಯರ ಹುಡುಗ ಸೊಸಿಯ, ಕೊಟ್ಟಿಗೆಯ ಕಲ್ಲುಕಂಬವೊಂದನ್ನೊರಗಿ ತೂಕಡಿಸುತ್ತಿದ್ದ. ಶಾಸ್ತ್ರಿಗಳು “ಸೊಸಿಯ-“ ಎಂದು ಕೂಗಿದರು. ಹುಡುಗ ಬೆಚ್ಚಿ ಕಣ್ಣಹೊಸಗುತ್ತ ಎದ್ದುನಿಂತ. “ಅಮಾವರು ಹಾಲು ಕರೆಯೋಕೆ ಇನ್ನೂ ಬರಲಿಲ್ಲವೇನೊ?ಆತಂಕದಿಂದ ಕೇಳಿದರು. “ಇಲ್ಲ, ಸೋಮಿ. ನಾನೂವೆ ವೋಟೋತ್ತಿಗೇ ಬಂದು, ದನ, ಎಮ್ಮೆ, ಎತ್ತುಗಳೆಲ್ಲ ವೊಡಕಂಡೋಗಿ ಇತ್ತಲ ಗೂಟಗಳೆ ಕಟ್ಟಾಕಿ ಬಂದು, ಕಸ ಬೊಳುದು ತಿಪೊಗಕಿ, ಮಂತೆ ಕರೆಯೋ ಹಸ, ಎಮ್ಮೆಗಳ ಅಟ್ಟಿಗಂಬಂದು ಕಾಯ್ತಾ ಕುಂತೆ. ಅಮಾರು ಬರನಿಲ್ಲ. ಹಿತ್ತಲ ಬಾಗ್ಲು ತೆಗುದಿತ್ತು. ಈಗ ಬತ್ತಾರೆ, ಆಗ ಬತ್ತಾರೇಂತ ಕಾದೂ ಕಾದೂ ಸಾಕಾಯ್ತು. ಅಂಗೇ ಈ ಕಂಬಕ್ಕೆ ವರಿಕ್ಕಂಡೆ. ಬಡ್ಡಿಹೆತ್ತ ನಿದ್ದೆ ಜೋಂಪು ಅಂಗೇ ಎಳುದು ಬುಡ್ಡು- ಅಮ್ಮಾರ ಕರುಡುಬುಡಿ ಮಂತೆ, ಹಸೀನ ಕರ ಬುಟುಕಲ್ಲಿ-" ಎಂದು ಅವಸರಪಡಿಸಿದ ಸೊಸಿಯ. ಶಾಸ್ತ್ರಿಗಳು ಈಗಲೀಗ ಅವಾಕ್ಕಾದರು!... ರುಕ್ಕಿಣಿ ಮನೆಯ ಒಳಗಂತೂ ಇಲ್ಲ. ಹಿಂದಿನ ಬಾಗಿಲು ತೆರೆದಿದೆ. ಅವಳು ಕೊಟ್ಟಿಗೆಯಲ್ಲೂ ಇಲ್ಲ-ಬೇರೆ ಎಲ್ಲಿ ಹೋಗಲು ಸಾಧ್ಯ?... ಬ್ರಾಹ್ಮಣರ ಘಟಸ್ಫೋಟದ ಬೆದರಿಕೆಯಿಂದ ಮನಸ್ಸು ಕೆಟ್ಟಿ ಏನಾದರೂ ಕೆರೆ, ಬಾವಿ-ಎಂಬ ಯೋಚನೆ ಬಂದು, ಮುಂದೆ ಅವರ ಮನಸ್ಸು ಚಿಂತನೆ ಮಡುವ ತನ್ನ ಕ್ರಿಯಶೀಲತೆಯನ್ನು ತಟಸ್ಥವಾಯಿತು...... ಶಾಸ್ತ್ರಿಗಳು ಹೀಗೆ ರುಕ್ಕಿಣಿಯು ಎತ್ತ ಹೋದಳೋ ಎಂಬ ಚಿಂತೆಯಲ್ಲಿ ಮುಳುಗಿರುವಾಗ, ಅವರ ಮನೆಯ ಹೊರಗೆ ರುಕ್ಕಿಣಿಯ ಗಂಡನ ಸಪಿಂಡರು, ಸಮಾನೋದಕರು, ಹಾಗೂ ಬಾಂಧವರು ಸೇರಿ, ರುಕ್ಕಿಣಿಯ ವಿರುದ್ದ ಘಟಸೋಟ ಕರ್ಮವನ್ನು ಆಚರಿಸುತ್ತಿದ್ದರು. ವೆಂಕಣ್ಣಜೋಯಿಸರ ಪ್ರಕಾರ ಈ ಘಟಸೋಟ ಕರ್ಮವನ್ನು ಎರಡು ಕಾರಣಗಳಿಗಾಗಿ ಆಚರಿಸುತ್ತಿದ್ದರು. ಒಂದೊ ಪಾತಕಿ ಮಾಡಿದ ಪಾಪಕರ್ಮದಿಂದ ಈ ಸಪಿಂಡರು, ಸಮಾನೋದಕರು, ಹಾಗು ಬಂಧುಬಾಂಧವರು ಮುಕ್ತರಾಗುವ ಬಯಕೆ. ಪಾತಕಿಗೆ ಜನ್ಮಾಂತರಗಳಲ್ಲಿ