ಪುಟ:ವೈಶಾಖ.pdf/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೬ ವೈಶಾಖ ಮಾಡಿಸಿದ್ದಾಯಿತು. ರುಕ್ಕಿಣಿ ಹೇಗೂ ಕೆಟ್ಟೆ ಎಂದು ಲಕ್ಕನಿರುವಲ್ಲಿಗೇ ತೆರಳಿರಬಹುದೆ?... ಈ ಶಂಕೆಯ ಪರಿಹಾರಾರ್ಥ ಶೋಧನೆಯೂ ನಡೆಯಿತು. ರಂಡೇಗಂಡ ಬೇರೆಲ್ಲಿಗೆ ಕಳುಹಿಸಿ ಬಚ್ಚಿಟ್ಟಿದ್ದಾನೊ?- ಎನ್ನುವ ಅನುಮಾನವೂ ಉಳಿಯದಿರಲಿಲ್ಲ.... ಮಾರಿಗುಡಿ ಅಣ್ಣದೀರ ಮೇಲೂ ಕೆಲವರ ಗುಮಾನಿ ಹರಿಯದಿರಲಿಲ್ಲ. ಇವಳು ರಾತ್ರಿ ಮನೆ ಬಿಟ್ಟು ಹೊರಟಾಗ, ಆ ಪಟಿಂಗರ ಕೈಗೆ ಸಿಕ್ಕಿ, ಅವರು ಇವಳನ್ನು ನಂಜೇಗೌಡನಿಗೆ ಒಪ್ಪಿಸಿರಬಹುದೆ?- ಇದು ಸ್ವಯಂ ಕೃಷ್ಣಶಾಸ್ತಿಗಳ ಸಂದೇಹ... ಅಂತೂ ರುಕ್ಕಿಣಿಯು ರಾತ್ರೋರಾತ್ರಿ ಮನೆಯಿಂದ ನಾಪತ್ತೆಯಾದ ಸುದ್ದಿ ಊರಿನ ಮನೆಮನೆಯಲ್ಲೂ ಕೋಲಾಹಲವನ್ನೆಬ್ಬಿಸಿತ್ತು. ಮುಂದೆ ಒಂದು ಅಮಾವಾಸ್ಯೆಯ ರಾತ್ರಿ, ಊರಿನಲ್ಲಿ ಯಾರಿಗೂ ಚಿತ್ರ ಮೂಲನ ಕೋಟೆಯ ದಿಸೆಯಿಂದ ಹೆಣ್ಣು ಶೋಕಿಸುವ ದನಿ ಕೇಳಿಬಂದಿತಂತೆ!... ಆ ಸುದ್ದಿ ಬಾಯಿಂದ ಬಾಯಿಗೆ ಹರಡಿ, ಕಾಲಕ್ರಮೇಣ ಅದು ಊರಿನ ತುಂಬ ವ್ಯಾಪಿಸಿಬಿಟ್ಟಿತು- ರುಕ್ಕಿಣಿ ಆ ಚಿತ್ರಮೂಲನ ಕೋಟೆಗೆ ಹೋಗಿ ಸತ್ತಿರಬೇಕು. ಆ ಗೋಳಿನ ರಾಗ ಅವಳದೇ- ಎಂದು ಹಳ್ಳಿಯ ಮಂದಿ ನಂಬಿದರೆ, ತಾವು ತಿಳುವಳಿಕೆಯುಳ್ಳವರು ಎಂದುಕೊಂಡ ಮಂದಿ, “ಅಯ್ಯೋ, ಹಾಗೆ ಕೊಟೆಯಿಂದ ಕೇಳಿ ಬಾ ಇರೋದು ರುಕ್ಕಿಣಿಯ ಧ್ವನಿಯಲ್ಲ- ಅದು ಗುಳ್ಳೆನರಿ ಊಳಿಡ್ತಾ ಇರೋ ಶಬ್ದ.... ಮೂಢ ಜನಕ್ಕೆ ಬುದ್ದಿಯಿಲ್ಲ” ಎಂದು ತಮ್ಮ ಬುದ್ಧಿಂತಿಕೆಯನ್ನು ಪ್ರದರ್ಶಿಸುತ್ತಿದ್ದರು. ಬರಬರುತ್ತಹಳ್ಳಿಯ ಬಹುತೇಕ ಮಂದಿಯ ನಂಬಿಕೆಯೇ ಹೆಚ್ಚು ಕಡಿಮೆ ದರಮನಳ್ಳಿಯ ಸಾರ್ವತ್ರಿಕ ಅಭಿಪ್ರಾಯವಾಗಿ ರೂಪುಗೊಂಡಿತು. ತಾವು ಬುದ್ದಿವಂತರೆಂದು ತಿಳಿದ ಜನರೂ ಕಾಲಕ್ರಮೇಣ ತಮ್ಮ ಅಭಿಪ್ರಾಯ ತಪ್ಪಿರಬಹುದು ಎಂದು ಶಯಪಡುವಂತಾಯಿತು. ೩೬ ಲಕ್ಕನ ಸಂಪರ್ಕವ ಯಾರೂ ವೋಂದಿರಕ್ಕೇ ಕೂಡ್ಡು ಅನ್ನಾ ಊರಿನೋರ್ ಕಟುಗ್ರ ಬಯಿಸ್ಕಾರ ಇದ್ದರೂವೆ, ಕಲ್ಯಾಣಿಯ ತಾಯಿಕರುಳು ತಡೀನಿಲ್ಲ. ಒಂದು ಸಂದೆ ದನೀಗೆ ಏಡು ರಾಗಿರೊಟ್ಟಿ ತಟ್ಟಿದ್ದಲು. ಅವೇಡರ ನಡ್ಡೆ ಮಗ ಯಾವಾಗೂ ಆಸೆಪಡೋ ಉಬ್ಬಿಜಿನುಕ ಸೇರಿಸಿದ್ದು. ಅಮ್ಮಾಕೆ ಜನರ ಕಣ್ಣ ತೆಪ್ಪುಸಿ, ಯಾರುಯಾರೊ ವೊಲದ ತವರೀಲಿ ಬೆರಿಕೆ ಸೊಪ್ಪು ಕುಯ್ಯೋಳಂಗೆ ನಟನೆ ಮಡ್ತಾ ಸಾಗಿ ಅತ್ತ ಇತ್ತ ನ್ಯಾಡ ಮೆಲ್ಲಗೆ ಸಕುನಿಕೊಪ್ತ ವೊಲಗಳ ತಾವಿಕೆ