ಪುಟ:ವೈಶಾಖ.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೮ ವೈಶಾಖ “ಎತ್ತ ಮೊಟ್ಟೆ, ತಡೀನಾರದೆ ವೋಯ್ತು. ಆ ನಾತ್ರೆ ನೀನು ನಮ್ಮ ಗುಡ್ಡ ಬುಟ್ಟೋದೇನಿಂದ ನಾನು ಮನಸ್ಸೇನ ಆಗಿಲ್ಲ- ಎಂಗೊ ಗೇದು, ಎಂಗೊ ಉಂಡುಬಿದ್ದುಕೊತ್ತೀನಿ. ನಿನ್ನ ತಂಗಿ ಸಿನುನಿಯೂ ಹೋಟೇಯ-ಎದ್ದ ವೋತ್ತಿನಿಂದ ನಿನ್ನ ಒಂದೆ ಸಮಕೆ ನೆನೀತಾನೆ ಇದ್ದಾಳೆ. ಎದ್ದಾಗ್ಯೂ ನಿನ್ನ ಸೊಲ್ಲೇಯ, ಒಲೆ ಕತ್ತಿಸೊವಾಗ್ಲೆ ನಿನ್ನ ಸೊಲ್ಲೇಯ. ಅಂಬಲಿಗೆ ಎಸರೆತ್ತೋವಾಗ್ಲು ನಿನ್ನ ಸೊಲ್ಲೇಯ. ಉಣೋವಾಗ್ಲು ನಿನ್ನ ಸೊಲ್ಲೇಯ. ಮೊಗೀಗೆ ಮೊಲೆ ಕಚ್ಚಿಸೋವಾಗ್ಲು ನಿನ್ನ ಸೊಲ್ಲೇಯ-ಬ್ಯಾಡ, ಬ್ಯಾಡ, ಅವಳ ಗೋಲು. ನಂಗಂತೂ ಸ್ವಾಡಕ್ಕೆ ಆಕ್ಕಿಲ್ಲ.” “ಆಣೆ ಬರಾವು. ಏನು ಮಾಡಕ್ಕಾದಾತು?” ನಿಟ್ಟುಸಿರುಬಿಟ್ಟು, “ಸಮಾಸು, ಅಯ್ಯ ಎಂಗವೆ?” ಕೇಳಿದ. - “ಅಯ್ಯಂದು ಮೊದ್ದೆ ರಂಪ ಆಗಿದ್ದದ್ದು, ಈಗ ಆಡರಂಪ ಆಗೋಗದೆ.... ಅಮ್ಮ ಕತೆ ಆಮ್ಯಾಕೆ ಯೋಳಿ ಕ್ವಟ್ಟಿನಂತೆ, ನಿನ್ನ ಗುಡ್ಡಿಗೆ ನಡಿ” ಲಕ್ಕ, “ಅದೂ ಸರಿ, ನಿನ್ನ ನನ್ನ ಇಬ್ಬರೂವೆ ನಮ್ಮೂರೋರು ಯಾರಾರು ಇಲ್ಲಿ ಕ್ವಾಡದ್ರೆ ನಮ್ಮ ಕತೇನೆ ಮುತೀತು. ಬಾ, ಬಾ, ಗುಡ್ಕೊಳಿಕೆ ವೋಗವ” ಎಂದು ಎಜ್ಜೆ ಕಿತ್ತ.. ಗುಡ್ಡ ಬಾಗಿಲ ತೆಗದು, ದೀಪ ಕತ್ತಿದ್ದಾಗ, ಕಲ್ಯಾಣಿ, “ಪರವಿಲ್ಲ, ವಾಸ ಮಾಡಬೈದು, ನೀನು ಗೋಸುಸಾಬರ ವೊಲದ ತೆವರೀಲಿ ಜೋಪಡಿ ಎತ್ತಿದ್ದೀ ಅಂತ ಕ್ಯಳಿ, ಏನೊ ಎಂತೊ ಅಂತಿದ್ದೆ... ಗೋಸುಸಾಬೈ ಆಕಿಸಿಕ್ಸಟ್ರ?” “ ಗೋಸುಸಾಬು ಈ ಜೋಪಡಿ ಆಕಕ್ಕೆ ಏನೇನು ಬೇಕೊ ಅದೆಲ್ಲಾನು ಕೃಟ್ಟರು. ಅವರ ಸೀನೇಯಿತ ಕರಿಯಪ್ಪನೂ ವಸಿ ಕ್ವಟ್ಟ ಅನ್ನು, ಮಡಿಕೆ ಕುಡಿಕೆ ಮುಕ್ಕಸ ಆ ಸಾಬೈ ಕ್ವಟ್ಟರು.” “ಈ ಜೋಪಡೀನೂ ಕಟ್ಟಿಸಿಕ್ವಟ್ರ?” “ಇದೇನವ್ವ, ನೀ ಯೋಲದು-ಇತತ್ತ ಬಾ ಅಂದ್ರೆ ಇದ್ದದ್ದೆಲ್ಲ ಕಿತ್ತುಗಂಡರು ಅಂದಂಗಾಯ್ತು- ಅವರು ಸಾಮಾನು ಕೂಟ್ಟರು ನಾ ಕಟ್ಟಿಕಂಡೆ/” “ಅದ್ವಿ, ಈ ಜೋಪಡೀಯ ಯಾರ ಸಾಯವೂ ಇಲ್ಲದೇಯನೀ ಒಬ್ಬನೆ ಎತ್ತಿದ್ಯ?... ಬೇಸ್‌ ಬೇಸ್, ನನ್ನ ಮಗನಾಗಿ ಉಟ್ಟಿದ್ದೆ, ಸಾರ್ತಕ ಆಯ್ದುಕನ ಬುಡು” ಅಂದು ಲಕ್ಕ, ಅವ್ರ ಉಲ್ಲು ಜೋಪಡಿ ಬಾಗ್ಲ ತಗೀವಾಗ ಅವಸ್ಥೆ ಗ್ವತ್ತಾಗದಂತೆ ನೆರಿಗೆ ವಳಗ್ನಿಂದ ಈಚೆ ತೆಗ್ಗದ ರೊಟ್ಟಿಗಳ ನೀಡ್ತ, “ಅದ್ಯಲ್ಲ ಸರಿ, ಈಗ-ಇದು ಕ್ವಾ... ತಿನ್ನು” ಎಂದಳು.