________________
ವೈಶಾಖ “ಬೀಳದೇ ಯೇಣವ್ವ-ಆಗ್ಗೆ ಸುತ್ತ ಅತ್ತು ಹಳ್ಳಿಗೂ ಟಾಂ ಟಾಂ ಆಗದೆ.” “ಯೇನಾರ ಆಗ್ಲಿ, ಆ ಬ್ರಾಂಬರು-ತಲೆ ಬೋಳುಸ್ತೀವಿ, ಊರು ಬುಟ್ಟೋಡುಸ್ತೀವಿ, ಅತಂಕ ವೋಗ್ಯಾರದಾಗಿತ್ತು... ಬೊಸರಿ ಎಂಗಸು. ಅವುಳ ಆ ತೊರ ಗೋಳುಕಿಚ್ಚು ಉಮೈಕೊಬ್ಯಾಡದೂಂತ ಅವರಿಗೆ ಅನ್ನು ಸಬ್ಯಾಡ?... ಮ್ಯಾಡರು, ಮ್ಯಾಡರು ಅಂತ ನಮ್ಮ ಕರೀತಾರಲ್ಲ, ಅವುರಿಗಿಂತ ನಾನು ಏಟೆ ವಾಸಿ ಕನ, ಬುಡು.” - “ರುಕ್ಕಿಣವ್ವ ಚಿತ್ರಮೂಲನಕ್ವಾಟೆಗೋಗಿ ಸತ್ತರು ಅಂತಾರಲ್ಲವ್ವ, ನಿಜವಾ?” “ನಿಜ ಇದ್ರು ಇರಬೌದು. ವೊದ ಅಮಾಸಿಂದ, ಆ ಕ್ವಾಟೆ ಕಡಿಂದ ರಾತ್ರಿನಾಗ ಎಂಗಸು ಸೋಕ ಮಾಡಿದಂಗೇ ನಂಮೂರಿಗೆ ಕೇಳುಸ್ತಾ ಅದೆ~ ಎಲ್ಲಾರು ಅಂಗೆ ಯೋಳಕ್ಕೆ' ಮುಟ್ಟಿಕಂಡಮ್ಯಲೆ, ನನೂವೆ ನಾಕೈದು ಜಿನದಿಂದ ಒಂದೇ ಸಮನೆ ಆ ಅಳೋ ಸೊಲ್ಲ ಕೇಳ್ತಾನೆ ಇನ್ನಿ. ಸಮರಾತ್ರಿಗೆ ಸುರು ಆಯ್ತದೆ. ಸ್ವಡು. ಅದು ಬೆಳಕು ಅರಿಯೋ ವಝವೆ ನಿಲ್ಲಕ್ಕೇ ಇಲ್ಲ....” “ಒಳ್ಳೆ ಇಚಿತ್ರ ಕನವ, ಇದು ನಿಮೂರಿಗೆ ಮಾತ್ರ ಎಂಗಸು ಅಳೊ ಅಂಗೆ ಕ್ಯಾಳೋದು. ಇಲ್ಲಿ ನಮ್ಮ ಸಕುನಿಕೊಪ್ಪಲೋರು ಯರಿಗೂವೆ ಅಂಗೆ ಕ್ಯಾಳಿಸಕ್ಕೇ ಇಲ್ಲ. ಇಲ್ಲಿಯೊರಿಗೆಲ್ಲ ಬರಿ ಗುಳ್ಳೆಲಕ್ಕೆ ಊಳಿಟ್ಟಂಗೇ ಕ್ಯಾಳೋದು!... ಈ ಸಕುನಿಕೊಲ್ಲಲೂವೆ ನಮ್ಮ ದರುಮನಳ್ಳಿ ಅಂಗೆ ಬೆಟ್ಟದ ಬುಡದಲ್ಲಿ ಅಲ್ವ ಇರಾದು?- ಇಲ್ಲಿಗೂ ಯಾಕೆ ಎಂಗಸಿನ ಅಳುವಿನಂಗೆ ಕ್ಯಳಿಸಬ್ಯಾಡದು... ಅದ್ಯಾಕೆ ನಿಮಗೊಂತರ ಸೊಲ್ಲು, ಇಲ್ಲಿಯೋರಿಗೇ ಒಂದು ತರ ಸೊಲ್ಲು ಕ್ಯಾಳಿಸಬೇಕು?... - “ನಂಗೆ ತಿಳೀದು ಕನಪ್ಪ-ಈ ಇಚಿತ್ರ.... ಇದರಿಂದ ನಮ್ಮೂರಿಗೆ ಮತ್ರ ಯೇನೊ ಗಂಡಾಂತ್ರ ಕಾದದೆ ಅನ್ನಾದೇನೊ ಕಾತ್ರಿ- ಇದು ಈಚೀಚೆ ಊರಿನಾಗೆ ಸಾಮಾನ್ನವಾಗಿ ಕಡೀತಿರೋ ವಾಕ್ಯ” ಆಗ್ಗೆ ವೊತ್ತು ಮೀರಿತ್ತು. ಅವ್ವ ವೊತ್ತಾಗಿ ಊರಿಗೆ ವೋದರೆ ಯಾರಿಗಾದರೂ ಸಂಸಯ ಬರಬೌದು, ಅಂತ. “ಏಳವ್ವ ಒಂದು ಮಾಡಕ್ಕೊಗಿ ಇನ್ನೊಂದಾದಾತು!... ನೀನು ನಂಗೆ ರೊಟ್ಟಿ ತಿನ್ನುಸಕ್ಕೆ ಬಂದು, ನನ್ನ ಜ್ವತೆ ನೀನನೂವೆ ಗಡೀಪಾರು ಮಾಡಾರು.....” ಅಂದು, ಲಕ್ಕ ಎದ್ದ. “ಮಾಡಿದ್ರೆ ಮತ್ತೂ ವಳ್ಳಿದೆ. ನಿನ್ನ ಜತೆ ನಾನೂ ಬಂದು ಇದ್ದುಕೊತ್ತೀನಿ. ಅದುಕ್ಯಾಕೆ ಚಿಂತೆ?” ಕತ್ತಿದ್ದ ಲಾಟೀನ ಕೈಗೆತ್ತಿಗೊತ್ತ,