ಪುಟ:ವೈಶಾಖ.pdf/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೫೧ “ಒಳ್ಳೆ ಮಾತ್ರೆ ಯೋಳೆ ನೀನು... ಅಲ್ಲ, ನೀನು ಊರು ಬುಟ್ಟು ಬಂದರೆ, ಅಲ್ಲಿ ಸಿವುನಿ ಗತಿಯೇನು? ಆ ಕಂದನ ಗತಿಯೇನು? ವಸಿ ಯೋಚ್ಛೆ ಮಾಡು. ಆಮ್ಯಾಕೆ ಅಯ್ಯ ಗುತ್ತಿಗೆ ಯಾವತ್ತೂ ಒಂಜಿನ ಗ್ಯಾನ ಬಂದಂಗೆ ಬತ್ತಾ ಅಪ್ಪೆ ಅಂತಿದ್ದಿ. ನೀ ಇಲ್ಲದೇ ಇದ್ರೆ, ಅದೂ ತೆಪ್ಪೋಗಿ-ಅಯ್ಯ ಪೂರ್ತಾ ಆಲಾಗಬೌದು!...” ಅಂದು ಕರ್ತವ್ಯದ ಕಡೆ ಅವನ ಎಚ್ಚರಿಸ್ಥ ಲಕ್ಕ. “ನೀ ಯೋಳೋದು ಸರಿಕನೊ, ಏಟೇ ಆದ್ರೂ ನಂದು ಎಂಗಸು ಬುದ್ದಿ. ನಮ್ಮ ನೆರಳು ಮುಂದಕೆ ನಾವು ಸ್ವಾಡನಾರೊ.....” ಊರಿನ ಕೆರೆಯ ಕೋಡಿ ಸಮೀಪಿಸುವವರೆಗೂ ಅವರಿಬ್ಬರ ನಡುವೆ ಇಂಥವೇ ಮತುಗಳು ಲಕ್ಕ ಅಲ್ಲಿ ನಿಂತು, “ಅವ್ವ, ಇನ್ನು ನೀನು ಮೊಂಡು, ಇನ್ನುಮುಂದಕೆ ನಾ ಬರಾದು ತರವಲ್ಲ.... ಕತ್ತಲೆ ಆಗ್ಗೆ ಗಕುಂ ಅನ್ನಕ್ಕೆ ಅತ್ತದ. ದಾರೀಲಿ ಹೊಳ ಹುಪ್ಪಟೆ ಹರೀತಿತ್ತವೆ. ಎಚ್ಚರದಿಂದ ಎಜ್ಜೆ ಹಾಕ್ಕಂಡೋಗು..ನಿಂಗೊ ಮೊದ್ದೇ ಕಣ್ಣು ಮಂಜು. ಆಮ್ಯಾಕೆ ನೀ ಇಂಗೇ ಪದೇ ಪದೇ ನಂಗೆ ರೊಟ್ಟಿ ತಿನ್ನುಸ್ತೀನಿಂತ ಇಲ್ಲಿಗೆ ಬರೊ ಸಾಸ ಮಾಡಬ್ಯಾಡ, ಉಸಾರು.” ಕಲ್ಯಾಣಿ ಲಕ್ಕನ ಎಚ್ಚರಿಕೆಗೆ ಸೊಪಪ್ಪಸು ಹಾಕಲಿಲ್ಲ. ಮುಂದಿನ ದಿನಗಳಲ್ಲಿ ಅವಳು ರೊಟಿಗಳನ್ನ ತನ್ನ ನೆರಿಗೆ ಒಳಗೆ ಸಿಕ್ಕಿಸಿ ತರೋದು ತೆಪ್ಪಿಲ್ಲ. ಇನ್ನು ಮ್ಯಾಗೆ ತರಬ್ಯಾಡ ಕನವ್ವ, ಅಂತ ಲಕ್ಕ ಯೋಳೋದು ತಪ್ಪಿಲ್ಲ! ಕಲ್ಯಾಣಿ ಆ ರಾತ್ರಿ ಗುತ್ತಿಗೆ ಬಂದೊಡನೆಯೇ, ಸಿವುನಿ ಲಕ್ಕನ ಯೋಗಕ್ಷೇಮದ ವಿಚಾರವಾಗಿ ಕೇಳಿದ್ದಳು. ಆಗ ಕಲ್ಯಾಣಿ ತಾನು ಹೋಗಿಬಂದ ವಿವರಗಳನ್ನೆಲ್ಲ ಸಾಂಗವಾಗಿ ತಿಳಿಸಿ, “ಆ ಇಚಾರ ಹೆಂಗಾರ ಇಡ್ಲಿ, ಆದ್ರೆ ನಮ್ಮ ಲಕ್ಕ ಒಬ್ಬನೇ ಆ ಗುಡ್ಡ ಎತ್ತಿರಾದು ಯಾರಾರು ತಾಲೀಮು ಮಾಡಬೇಕು, ನಾಡೇ ಸಿವುನಿ..... ಆ ಗುಡ್ಡ ಏಳಿಸೋವಗ, ಅವನೊಬ್ಬಂದೆ ಕೇಮೆ.... ದೊಂಬನೂ ಅವನೆ, ಧೂಳು ಹೈಡೆಯೋನು ಅವನೆ, ಗಣೆ ಎತ್ತೋನೂ ಅವನೆ....” - “ನೀ ಹ್ಯಾಳಾದ ಕ್ಯಾಳದ್ದರೆ, ನಂಗೂ ಆಸೆ ಆಯ್ತದೆ. ನಾನೂವೆ ಹ್ವಾಗಿ ಅಣ್ಯ ಸ್ವಾಡಿಕಂಬರಾನೆ ಅಂತ! ಹಾಗಲವ?” “ಅಯ್ಯಯ್ಯೋ ಬ್ಯಾಡ, ಬ್ಯಡ..... ಪುಣಾತಿಗಿತ್ತಿ, ಹಂಗೆಲ್ಲಾರ ದುಡುಕಿ ಬುಟ್ಟಿಯೆ!... ಈ ಊರಿನ ಉತ್ಪತ್ತಗರ ಕೈಗೆ ಸಿಕ್ಕಂಡರೆ, ಮುಗುದೋಯ್ತು ಕತೆ! ನಿನ್ನೂವೆ ಇಲ್ಲಿಂದ ಅಟ್ಟದ ಬುಡಕ್ಕಿಲ್ಲ....”