ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೈಶಾಖ ೩೭ ಹೋಲಗೇರೀಲಿ ಅವರ ಬದುಕು ಇಂಗೆ ಮಂಟಾಡಿಕಂಡೇ ವಾರದ ಮ್ಯಾಲೆ ವಾರ ಕಳೀತು, ಕದ್ದ ಕದ್ದು ಕಲ್ಯಾಣಿ ಲಕ್ಕಂಗೆ ರಾಗಿರೊಟ್ಟಿ ತಟ್ಟಿ, ಜಿನಕಾನೂ ಖಾರಾನೋ ಅವೆರಡು ರೊಟ್ಟಿ ವಳುಗಿಟ್ಟು, ತನ್ನ ಸೀಗೆ ನೆರಿಗೆಗೆ ಸೆಕ್ಕಿಸಿ, ತಕ್ಕಂಡೋಗದ ಮಾತ್ರ ನಿಲ್ಲಸನಿಲ್ಲ. ಆದರೆ ಈಚೆಗೆ ನಾಕೈದು ಜಿನದಿಂದಲೂವೆ, ಜ್ವರ ಬಂದು ಅವಳು ದೂರ ಸೋತಿದ್ದಳು. ಸಿವಿನಿ, “ಇದ್ಯಾನವ್ವ, ನಿನ್ನ ಮೈಯಿ ನಾಕು ಜಿನದಿಂದಲೂವೆ ಕುದ್ದೊಯ್ತಾ ಕುಂತದೆ. ಈ ಸ್ತಿತೀಲಿ ನೀ ರೊಟ್ಟಿ ತಕ್ಕಂಡು ಅಣ್ಣನ್ನ ತಾವಿಕೆ ಸ್ವಾಗದು ಬ್ಯಾಡ. ಜ್ವರ ಬುಟ್ಟಮ್ಯಾಲೆ ಸ್ವಾಗೀವಂತೆ” ಎಂದು ತಡೆದರೂ ಕಲ್ಯಾಣಿ, “ಅಯೋ, ಅದೇಟು ಜಿನ ಬದುಕಬೇಕು, ಬುಡೆ ಸಿವುನಿ... ಬಿದ್ದೋಗೊಮರ, ಬೀಸೋಗೊ ಗಾಳಿ ಹಂಗಿರೋ ಈ ಜಲ್ಮಕ್ಕೆ ಅದ್ಯಾಕೆ ವೋಟು ದೋಸಾಕು ಮಾಡಬೇಕು?- ಈ ಕಾಲು ನಡೀತೀನಿ ಅನ್ನಾವರೆ ನಡುದು ಬುಡಾದು, ವೋಟೇಯ” ಎಂದು ಲಕ್ಕನ ಗುಡ್ಡಿಗೆ ಹೋಗಿ ಬರೋದ ನಿಲ್ಲಸನಿಲ್ಲ. ಲಕ್ಕನೂ ಹೇಳ್ತಾನೇ ಇದ್ದ: “ಬ್ಯಾಡ ಕನವ್ವ, ನೀನು ಈಪಾಟಿ ಜರದಲ್ಲಿ ಓಡಡಿದ್ರೆ, ಅದು ಇಸಮಿಸಿಕಂಡು ಯೆಚ್ಚುಕಮ್ಮಿ ಆದ್ರೇ ನೋಡಾಕ್ಯರು?” ಅವನ ಬುದ್ಧವಾದದ ಮಾತಿಗೆ ಕಲ್ಯಾಣಿ ನಿಶ್ಯಕ್ತನಗೆ ನಕ್ಕು, “ನೀ ಇದ್ದೀಯಲ್ಲ” ಅಂದು, “ಗುಮ್ಮನೆ ರೊಟ್ಟಿ ತಿನ್ನು” ಅಂದಿದ್ದಳು. ಅಂತೂ ಪ್ರತಿ ರಾತ್ರಿ ಲಕ್ಕ ಮಾಡಿಕೋಬೇಕಾಗಿದ್ದ ಒಷ್ಟೊತ್ತಿನ ಅಡಿಗೆಯ ಕಲ್ಯಾಣಿ ಹೀಗೆ ಬಹುತೇಕ ತಪ್ಪಿಸಿದ್ದಳು! ನಾಕು ಜಿನದಿಂದ ಎಡದ ಕಂಕುಳಲ್ಲಿ ಅದೇನೊ ಕುಂದಂಗೆ ಎದ್ದುಬುಟ್ಟು, ಕಲ್ಯಾಣಿಗೆ ಅದು ಬ್ಯಾರೆ ಬಾಯಿಬಡಿಕೊಳೊವೋಟು ನೋವು... ಆದರೂ ಭಾತಿ ಹೆಂಗಸು. ಅದರಾಗು ಮಗನಿಗೆ ರಾಗಿರೊಟ್ಟಿಯ ಸಂಜೆ ದನೀಗೆ ತಕ್ಕಂಡೋಗೋದ ಮಾತ್ರ ತಪ್ಪಿಸನಿಲ್ಲ. - ಒಂದು ಜಿನ ಸಂಜೆ, ಕನ್ಯಾಣಿ ಮಂಟಾಡ್ಡ ಲಕ್ಕನ ಗುಡ್ಡ ತಾವಿಕೆ ಹೋಯ್ತಿದ್ದು, ಇನ್ನೂ ಮುಕ್ಕಾಲು ದಾರಿ ಸಾಗಿರನಿಲ್ಲ ಇನ್ನು ಮುಂದಕೆ ನಡೆಯಕ್ಕೇ ಆಗಕ್ಕಿಲ್ಲ ಅನ್ನುಸಿ, ನಂಜೇಗೌಡರ ಹೊಲದ ತೇವರೀಲಿ ಇದ್ದ ಬೃಲದ ಮರ ಒರಗಿ ಕುಂತಳು. ದೇಯ ದೂರ ದಣಿದಿದ್ರೂವೆ, ಬ್ಯಾಲದ ಮರ ಆಂತು