ಪುಟ:ವೈಶಾಖ.pdf/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೫೩ ನೋಡಿದ್ದು. ತಾನು ಆ ಮರದ ಹಣ್ಣ ಅದೇಟು ತಿಂದಿದ್ರೂ ಅನ್ನೊಸೀ ಯೋಚ್ಛೆ ಮಿಂಚಿ ಮಾಯವಾಯ್ತು. ಯಾಕೋ ದೂರ ಸುಸ್ತು, ಅಲ್ಲೆ, ಬ್ಯಾಲದ ಮರದ ಬುಡದಲ್ಲೆ ಮನಗಾನ ಅನ್ನುಸ್ತು. ಕುಂತಿದ್ದಂಗೇಯ ವಕ್ಕಡೀಕೆ ಮಂಟಿಗಂಡಿದ್ದಲು. - ಬೆಟ್ಟದ ಕಡಿಂದ ಬತ್ತಿದ್ದ ರೈತರು “ಇದ್ಯಾಕೆ ಕಲ್ಯಾಣಿ, ಇಲ್ಲಿ ಬಂದು ಬಿದ್ದು ಕಂಡಿದ್ದಾಳು?” ಅಂದುಕೊತ್ತ ಹೋದರು. ಇನ್ನು ಕೆಲವರು ಅವಳ ಕೂಗಿ ಏಳಸಕ್ಕೆ ಪ್ರಯತ್ನ ಮಾಡಿ, “ಇದೇಟು ಯಮನಿದ್ದೆಯಪ್ಪ, ಈ ಮುದುಕಿಗೆ?” ಅಂದುಕೊತ್ತ ಹೋದರು. ಆದ್ರೆ ಅದೇ ಹಾದೀಲಿ ಬೆಟ್ಟದ ಕಿಬ್ಬಿಯಿಂದ ಪುಳ್ಳೆ ಮುರಿದು, ಅದರ ಕಟ್ಟ ಹೊತ್ತುಗಂಡು ಬತ್ತಿದ್ದ ದ್ಯಾವಾಜಿ ಮಾತ್ರ, ಕೊಂಟಿನಂಗೆ ಬಿದ್ದಿದ ಕಲ್ಯಾಣಿ ನೋಡಿ, ಹತ್ರ ವೋಗಿ ಮುಟ್ಟಿ ನೋಡಿದಳು. ದೇಹವಗ್ಗೆ ಶೀತಗಟ್ಟಿತ್ತು. ಬಿರನೆ ಲಕ್ಕನ್ನ ಹುಡುಕ್ಕೊಂಡು ಹೊಂಟಳು. ಅವನು ಶಕುನಿ ಕೊಪ್ಪಲಲ್ಲಿ ಗೋಸು ಸಾಬಹ ಹಿತ್ತಲ ಬೇಲಿಗೆ ಮುಳ್ಳು ತಂದು ಹೊದ್ದಿಸಿದ್ರೂವೆ, ಯಾರೊ ಪರಿಂಗರು, ಸಾಬರ ಹೆಡತಿ ಬೆಳುದಿದ್ದ ತರಕಾರಿ ಕದಿಯಕ್ಕೆ ಅಲಲ್ಲಿ ಮಾಡಿದ್ದ ಕನ್ನವ ಮುಚ್ಚುತ್ತಾ ನಿಂತಿದ್ದೋನು “ಕನ್ನ ಮುಚ್ಚಿ ಮುಗೀತು ಸಾಹೇಬ್ರೆ” ಅಂತ ಅವರ ಹಟ್ಟಿ ಮುಂದುಕೆ ಬರಕ್ಕೂ ದ್ಯಾವಾಜಿ ಅಲ್ಲಿಗೆ ಬರಕ್ಕೂ ಒಂದಾಯಿತು. ದ್ಯಾವಾಜಿ ಕಲ್ಯಾಣಿ ಸತ್ತ ಸುದ್ದಿ ತಿಳಿಸಿದ ಕೂಡಲೆ, ಜಟ್ಟನೆ ಕಲ್ಯಾಣಿ ಸತ್ತು ಬಿದ್ದ ಜಾಗಕ್ಕೆ ದೌಡಾಯಿಸಿದ ಲಕ್ಕ, ತಾಯಿಯ ಹೆಣದ ಮೇಲೆ ಬಿದ್ದು ಒದ್ದಾಡಿದ. ತಟಕ್ಕನೆ ಅವನಿಗೆ ದರುಮನಳ್ಳಿ ಪಾಲಿನ ನೆಲದಲ್ಲಿ ತಾನುನಿಂತಿ ಅಂತ ಅರುವಾಯಿತು. ಇನ್ನೂ ಇಲ್ಲಿ ಒಂದುಗಳಿಗೆ ನಿಂತರೂ ಕೇಡು ತಪ್ಪದು ಅಂದುಕೊತ್ತ, ಅವನ ಹೆಣವ ಹೆಗಳಿಗೆ ಹಾಕ್ಕೊಂಡು ಅವಳ ಹೆಣಕೆ ಪದ್ಧತಿಯಂತೆ “ಕಲ್ಲುಸ್ಯಾವೆ” ಮಾಡಕ್ಕೆ ಬೆಟ್ಟದ ಕಿಬ್ಬಿಯಲ್ಲಿ ಕಲ್ಲುಮಂಟಿ ತಾವಿಕೆ ಸ್ವಂತ. ಇಷ್ಟರಲ್ಲಿ ದ್ಯಾವಾಜಮ್ಮ ಓಡೋಗಿ ಸಿವುನಿಯೊಬ್ಬಳಿಗೇ ಅಲ್ಲದೆ ಹೊಲಗೇರಿಯೋರು ಯಾರಾರು ಸಿಕ್ಕಿದರೂ ಅವರಿಗೆಲ್ಲ, ಕಡೀಕೆ ಊರಿನಾಗೆ ಅವಳಿಗೆ ಯೋಗ್ಯರು ಅನ್ನಿಸಿದೋರಿಗೂ ಮುಕ್ಕಸ, ಸುದ್ದಿ ಮುಟ್ಟಿಸಿದಳು. ಲಕ್ಕ ಅವ್ವನ ಶವಾವ ಕಲ್ಲುಮಂಟೀಲಿ ಉಪಾಯದಲ್ಲಿ ಇಳುಸಿದ. ಅವಳ ಕಾಲುಗಳ ಮಡಿಸಿ, ಕುಂಡರಿಸಕ್ಕೆ ಯತ್ನ ಮಾಡಿದ. ಅವು ಆಗ್ಗೆ ಬಿಗಿತುಕೊಂಡು ಮಡಿಚೋದು ಎಕ್ಕಾಸ ಆಯ್ತು. ಹಂಗೂ ಅರ್ದ ಕುಂತ ಸ್ತಿತೀಲಿ, ಅರ್ದ ನಿಂತ ಸ್ವತೀಲಿ, ಅವಳ ಮಂಟಿವಕ್ಕಡೀಕೆ ವರಿಗಿಸಿ, ಅವಳ