________________
೩೫೬ ವೈಶಾಖ ಕಣ್ಣೀರು ಸುರುಸ್ತಾ ನಿಂತ್ತು. ನಂಜೇಗೌಡ್ರು ಲಕ್ಕ ತನ್ನ ಅವ್ವಂಗೆ ಕಲ್ಲುಸ್ಯಾವೆ ಮಾಡೋದ ಕ್ವಾಡಕ್ಕೆ ಬಂದೋರಲ್ಲ. ಪಾರೆಸ್ಟ್ ಗಾರ್ಡು ರಾಮಯ್ಯ ತನ್ನ ಮಾಮೂಲು ಸತ್ಯಾಗಿ ಬಟವಾಡ ಆಗಲ್ಲ ಅಂತ, ಕಾಡಲ್ಲಿ ಕದ್ದು ಗಂಧದ ಮರಗಳ ಕಡಿಯಕ್ಕೆ ಅವಕಾಸ ಕ್ವಿಟ್ಟಿರನಿಲ್ಲ. ಅದಕ್ಕೇನೆ ಊರಲ್ಲಿ ರಸಕವಳ ಮೆದ್ದಿಸಿ, ಕಾಂಚಣ ಏನು ಕ್ವಡಬೇಕು ಅನ್ಮಾದು ಇನ್ನೂ ಬಗೆ ಅರೀದೆ, ಅದರ ತಿರ್ಮಾನಕ್ಕಾಗಿ ತಮ್ಮ ಮೊಲಕ್ಕೆ ಬಂದು, ಗಾರ್ಡಿನ ಜ್ವತೆ ಚರ್ಚೆ ಮಾಡ್ಕ, ಬ್ಯಾಲದ ಮರದ ಕೆಳೆ ಕುಂತರು. ಕಲ್ಲು ಸ್ಯವೆ ಮಾಡ್ವಾಗ ಲಕ್ಕ ದೂರದ ವೊಲದಲ್ಲಿ ತನ್ನ ತಂಗಿ ಸಿವುನಿ ಮೊಗ ತಗಂಡು ನಿಂತಿದ್ದ ನೃಡಿದ್ರೂವೆ, ನಂಜೇಗೌಡ್ರು ಸಮಾಪದಲ್ಲೆ ಕುಂತಿದ್ರಿಂದ, ಅವಳತ್ರಕ್ಕೆ ತಾನು ಸ್ವಾಗೋದಾಗ್ಲಿ, ತನ್ನತ್ರಕ್ಕೆ ಅವಳು ಬರೋದಾಗ್ಲಿ ಸಧ್ಯಾನೇ ಇರನಿಲ್ಲ... “ಇವರ ಮನೆ ಕಿಸಾಂತರಾಗ, ನನ್ನ ಸೊಂತ ತಂಗಿ ಕುಟ್ಟು ಮಾತಾಡಕ್ಕೆ ಆಸ್ಪದ ಕ್ವಡಲ್ಲರಲ್ಲ! ಅಂತ ಕ್ಯಾಣದಿಂದ ಗೊಣಗ ಅವನು ಮಾಡ್ತಿದ್ದ ಕಲ್ಲುಸ್ಯಾವೆ ತನ್ನವ್ವನ ಮೊಕ ಮುಚ್ಚಿದಮ್ಯಾಲೆ, ತಲೆಗೆ ದಪ್ಪ ಮರದ ಐದಾರು ತುಂಡು ಬಡಿಗೆಗಳ ಕ್ವಟ್ಟು, ಅದರ ಮ್ಯಲೆ ಒಂದು ದಪ್ಪಾನೆ ಬುಂಡುಗಲ್ಲ ಯೇದ್ದ. ೩೮ ಕುಂಬಾರಗೇರಿಯಲ್ಲಿ ಮರಿಸೆಟ್ಟಿ ಬೆಳಿಗ್ಗೆ ಎದ್ದವನೆ, ತನ್ನ ಎಡತಿ ಜವನಿಯನ್ನು ಕರೆದು, “ಜವನಿ, ಇವೊತ್ತು ಕಂಪಲಾಪುರದ ಸಂತೆಗೆ ನಾ ವೋಗಕ್ಕಿಲ್ಲ” ಎಂದು ತಿಳಿಸಿದ. - “ಯಾಕೆ?- ನೆನ್ನೆ ಹೇಳಿದೆ, ಕಂಪಲಪುರದ ಸಂತೆ ವೊಸ ಮಡಕೆಗಳ ತಕ್ಕೊಂಡೋಯ್ತಿನಿ ಅಂತಾವ?” ಜವನಿ ಮೂಗಿನ ತುದಿಗೆ ಬೆರಳಿಟ್ಟುಕೇಳಿದ್ದಳು. “ನಾತ್ರ ವೊಯ್ತಿನಿ ಅಂದಿ. ಆದ್ರೆ ಈಗ್ಯಾಕೊ ಮಯ್ಯನಲ್ಲಿ ವೈನ ಕಾಣ್ಯ “ಅಂದ್ರೆ, ಜರಗಿರ ಬಂದಿದ್ದತ?” “ಇರಬೌದು, ಯಾಕೋ ಎದ್ದೇನಿಂದ ಬೋ ಸುಸ್ತು.” “ಊ. ಜರ ಬಂದಿರೋವಂಗದೆ. ನೀವು ಸುಮ್ಮಕೆ ಅಟ್ಟಲೆ ಮನಕ್ಕ. ನಾನು ಮಡಿಕೆಗಳ ಕಂಪಲಪುರದ ಸಂತೆ ತಕ್ಕಂಡೋಗಿ ಮಾರಿಕೊಂಬತ್ತೀನಿ”