ಪುಟ:ವೈಶಾಖ.pdf/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೫೭ ಎಂದು ಜವನಿ ಏಳುತ್ತಿರುವಂತೆ, ಹೊಸ ಗಡಿಗೆಯೊಂದರೊಳಗೆ ಇಲಿಯೊಂದು ಹೇಗೋ ಒಳಗೆ ಬಿದ್ದು ಒದ್ದಾಡುತ್ತಿತ್ತು. “ಇದರ ವಂಸ ನಿರ್ವಂಸವಾಗ! ಆಳುಗೇರಿಯೋವು ಯಪಟೆ ಎಚ್ಚಬುಟ್ಟವೆ...” ಎಂದು ಸಾಪಳ ಹಾಕುತ್ತ, ಆ ಗಡಿಗೆಯನ್ನೆತ್ತಿಕೊಂಡುವೋಗಿ ಬೀದಿಗೆ ದಬ್ಬಾಕಿದಳು. ಗಡಿಗೆಯನ್ನು ಮೇಲೆತ್ತುವಾಗ ಇಲಿ ಇನ್ನೂ ಒದ್ದಾಡಿತ್ತಿದ್ದು, ತುಸು ಎತ್ತಿನಲ್ಲೆ ಅದರ ಚಲನೆಯೆಲ್ಲ ನಿಂತು, ಅದು ತಟಸ್ಥವಾ ಅಂಗಾತ ಬಿದ್ದುಕೊಂಡಿತು. “ಇದೇನು ಕತೆ. ಮೂರು ಜಿನದಿಂದ್ಧೂವೆ ಮೂಲೇಲಿ ಮೂಡಕಲಲ್ಲಿ, ಅಲ್ಲೊಂದು ಇಲ್ಲೊಂದು ಇಲಿ ಸತ್ತು ಬೀಳ್ತಾನೆ ಅವೆ. ನಾನೂವೆ ಅಮ್ಮ ಗುಡಿಸಿ ಇತ್ತಲ ಚೋರಿ ಆಕಿ ತೆಪ್ಪಗಾದೆ- ಈಗ ಇನ್ನೂಒಂದು ಇಲಿ ಗಡಿಗೇಲಿ ಸ್ವತ್ತು ಬಿದ್ದದೆ. ನಾನು ಆವತ್ತೇನಿಗಾ ಮಡಗಡೆ ವೋದ್ದು ತಪ್ಪಾಯ್ತು. ಇವೊತ್ತು ನ್ಯಾಡನೆಕಾಗೆ ಬಂದು ಇದ್ದ ಎತ್ತಿಗೊಂಡೋಯ್ತದೊ ಎಂಗೆ ಅಂತಾವ” ಎಂದು ಆ ಸತ್ತ ಇಲಿಯನ್ನು ಹಟ್ಟಿಯ ಬೀದಿಗೆಸೆದು, ಜಗಲಿಯ ಕಂಬ ಹಿಡಿದು ನೋಡ್ತಾ ನಿಂತಳು. ಅವಳು ನಿಂತಿದ್ದ ಹಾಗೆಯೇ ಒಂದು ಕಾಗೆ ಎಲ್ಲಿಂದಲೋ ಅರಿಬಂತು. ದೂರದಲ್ಲಿ ಕುತುಕೊಂಡು, ಕುಪ್ಪುತ್ತ ಕುಟ್ಟುತ್ತ ಬಂದು ಆ ಸತ್ತ ಇಲಿಯನ್ನು ಸಮೀಪಸಿತು. ಅಲ್ಲೇ ಕುಳಿತು ಸೂಕ್ಷವಾಗಿ ತನ್ನ ಬೇಟಿಯನ್ನು ಪರಿಶೀಲಿಸಿತು. ಕೊನೆಗೆ ಅದಕ್ಕೆ ಏನೆನ್ನಿಸಿತೊ, ಆ ಇಲಿಯನ್ನು ಮುಟ್ಟದೆ “ಕಾ, ಕಾ” ಎಂದು ಕರ್ಕಶವಾಗಿ ಕೂಗುತ್ತ ಹಾರಿರೋಯಿತು. ಇನ್ನೊಂದು ಕಾಗೆ ಬಂತು. ಮತ್ತೊಂದು ಬಂತು ಆದರೆ ಯಾವ ಕಾಗೆಯೂ ಆ ಇಲಿಯನ್ನು ಮುಟ್ಟಲಿಲ್ಲ.... ಆ ಬೀದಿಯ ಮೇಲೆ ಆ ಇಲಿಯ ನೇರಕ್ಕೇ ಗುರಿರಯಿಟ್ಟು ಹಾರುತ್ತಿದ್ದ ಒಂದು ಹದ್ದು, ಆ ಸತ್ತ ಇಲಿಯ ಮೇಲೆ ಎರಗುವಂತೆ ಸರನೆ ಇಳಿದು ಬಂದದ್ದು, ಅದೂ ಸಹ ಇಲಿಯನ್ನು ಮುಟ್ಟದೆ, ಕೆಳಗೆ ಇಳಿದುಬಂದಷ್ಟೇ ಕ್ಷಿಪ್ರವಾಗಿ ಹಾರಿಹೋಯಿತು! ಜವನಿಯ ಮನಸ್ಸಿನಲ್ಲಿ ಇನ್ನು ಸಂದೇಹ ಉಳಿಯಲಿಲ್ಲ-ಕೂಡಲೆ ಹಟ್ಟಿಯೊಳಗಡೆ ಓಡಿ, ನಡೆದ ಸಂಗತಿಯನ್ನು ಗಂಡನಿಗೆ ನಿವೇದಿಸಿ, “ಸತ್ತ ಇಲಿನ ಕಾಗೆ, ಅದ್ದು ಯಾವೂ ಮುಟ್ಟನಿಲ್ಲ. ನಾನೂ ಕ್ವಾಡ್ತಾನೆ ಇದ್ದೆ-ಇದು ಪಳೇಗು...” ಎಂದಳು, ಕೈಕೈ ಹಿಸುಕಿಕೊಳ್ಳುತ್ತ, “ಅಯ್ಯೋ, ಇನ್ನೇನ ಗತಿ. ನಮೂಗ್ಗೆ ಪಳೇಗಿನ ಸೋಂಕು ತಟ್ಟಿದಂಗೆ ಕಾಣ್ಯದಲ್ಲ!” ಎಂದೆನ್ನುತ್ತ, ಏದುಸಿರು ಬಿಡುತ್ತ ನಿಂತಳು. ಅವಳ ಗಂಡ ಈ ಸುತ್ತಿ ಕೇಳಿ ಗಾಬರಿಯಾದ. ಆದರೆ ಈ ಸುದ್ದಿ ಊರಿನಲ್ಲಿ ಪ್ರಕಟವಾಗಬಾರದೆಂಬುದೇ ಅವನ ಹೆಬ್ಬಯಕೆ. ಯಾಕೆಂದರೆ,