ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೦ ವೈಶಾಖ ಇಲಿಗಳು ಹೀಗೆ ಸತ್ತುಬೀಳುವುದರ ಜೊತೆಗೆ ಪ್ರತಿರಾತ್ರಿ ಬೆಟ್ಟದ ಚಿತ್ರ ಮೂಲಕ ಕೋಟೆಯಿಂದ ಹೆಣ್ಣು ಆಳುವಂತಹ ಸದ್ದು ಕೇಳಿಸುತ್ತಲೆ ಇದ್ದುದರಿಂದ ದರುಮನಳ್ಳಿಯ ಜನ ಊರಿಗೆ ಬಂದಿರುವ ಈ ವಿಪತ್ತಿಗೂ ಬಸುರಿಯಾದ ರುಕ್ಕಿಣಿ ಕಾಣೆಯಾದುದಕ್ಕೂ ಸಂಬಂಧ ಕಲ್ಪಸಿ ಭೀತರಾದರು. ಊರಿನಲ್ಲಿ ಯಾರೊ ಅಂದರು: “ರುಕ್ಕಿಣವ್ವನ ಆ ತರ ಗೋಳುಕಿಚ್ಚು ಉಯ್ಯದಿದ್ದರಿಂಧೆ, ಊಗ್ಗೆ ಈ ಪಳೇಗ್ ಉಪದ್ರ ಕಾಣಿಸಿರಾದು. ಇವರೆಲ್ಲ ಬೋ ಸುದ್ದಿ ಅನ್ನೋವಂಗೆ, ಪಾಪ ಆ ಬಡಪಾಯಿ ಮ್ಯಾಲೆ ನ್ಯಾಯ ಅಕ್ಕಂಡರು-ಅದರಾಗೂ ಆ ಬ್ರಾಂಬರು ಅವಳ ತಲೆ ಬೋಳುಸಿ ಕತ್ತೆ ಮ್ಯಾಲೆ ಕುಂದರಿಸಿ ಉರಿಂದ ಓಡುಸ್ತೀವಿ ಅಂದಲ್ಲಅ ಆ ಪುಣಾತಿಗಿತ್ತಿ, ತನ್ನ ಎಣವೂ ಸಿಕ್ಕದಂಗೆ, ಚಿತ್ರಮೂಲನ ಕ್ವಾಡಿಗೋಗಿ ಸತ್ತಿರಬೇಕು. ಅವರು ಮಾಡಿದ ತಪ್ಪಿಗೆ ಈಗ ಊರಿಗೆ ಊರೇ ಅನುಭೋಗಿಸಬೇಕಾಗಿ ಬಂದದೆ!... ಪರ್ತಿ ರಾತ್ರೆ ಆ ಎಣ್ಣು ಅಲ್ಲಿಂದ ಸೋಕ ಮಾಡಾದು ಕೇಳಿಸಕ್ಕಿಲ್ಲವ?- ಅವಳ ಕಿಚ್ಚು ನಮ್ಮೂರ ಸುಡದ ಬುಡಕ್ಕಿಲ್ಲ.” ಒಬ್ಬರಿಗನ್ನಿಸಿದ್ದು ಇನ್ನೊಬ್ಬರಿಗೂ ಅನ್ನಿಸಿ, ಬ್ರಾಹ್ಮಣರ ವರ್ತನೆಯ ಬಗ್ಗೆ ಜನರಲ್ಲಿ ವಿರೋಧ ವ್ಯಕ್ತವಾಗತೊಡಗಿತು. ಇದರಿಂದ ಹೆದರಿದ ವೆಂಕಣ್ಣ ಜೋಯಿಸರು ನಂಜೇಗೌಡನ ಸಂಗಡ, “ಇದೇನು ನಂಜೇಗೌಡರೆ, ರುಕ್ಕಿಣಿ ನಾಪತ್ತೆಯಾದ್ದಕ್ಕೆ ನಾವು ಬ್ರಾಹ್ಮಣ ಕೇರಿಯೋರು ಮಾಡಿದ ತೀರ್ಮಾನವೆ ಕಾರಣ, ಎಂದು ಊರಿನೋರು ನಮ್ಮ ಮೇಲೆ ದೂರು ಹೊರಿಸ್ತಾ ಇದಾರಲ್ಲ?- ಇದಕ್ಕೆ ನೀವು ಏನು ಹೇಳೀರಿ?” ಎಂದು ಪ್ರಸ್ತಾಪ ಮಾಡಿದರು. “ಹಯ್ಯೋ, ಗೋಕುಲಾಷ್ಪಮೀಗೂ ಇಮಾಂ ಸಾಬೀಗೂ ಯಾವ ಸಮ್ಮಂದವ?- ಬುಡಿ, ದೋಯಿಸರೆ... ಜನದ ಮಾತ ಕೇಳ್ತಾನೆ ಇರಿ... ನಿಮ್ಮ ಕೈಯ ಇಡಕಂಡೋಗಿ ಅಮೇದ್ಯ ತುಣಿಸಿಬುಡ್ತಾರೆ.” ನಂಜೇಗೌಡ ಹುರಿದುಂಬಿಸಿದರೂ ವೆ೦ಕಣ್ಣಜೋಯಿಸರ ಪಡಸಾಲೆಯಲ್ಲಿ ಸೇರಿದ್ದ ಬ್ರಾಹ್ಮಣರಿಗೆ ಧೈರ್ಯವುಂಟಾಗಲಿಲ್ಲ. ನಂಜೇಗೌಡ ಗುಳ್ಳೆ ನರಿಯಂತಹ ಮನುಷ್ಯ. ಅವನದ್ದು ಹಿಂದೆ ಒಂದು ಮಾತು, ಮುಂದೆ ಇನ್ನೊಂದು ಮಾತು. ಆ ಗುಂಪಿನಲ್ಲಿ ನಮ್ಮನ್ನ ಬೈದು, ಇಲ್ಲಿ ಬಂದು ನಮ್ಮನ್ನ ಉಬ್ಬಿಸ್ತಾ ಇದಾನೆ... ಊರಿನ ಬಹುಮಂದಿಯ ವಿರೋದ ಕಟ್ಟಿಕೊಂಡರೆ, ಮುಂದೆ ನಮ್ಮ ಮಕ್ಕಳು, ಮರಿ ಬಾಳ್ವೆ ಮಾಡೋದಾದರೂ ಹೇಗೆ? ಎಂಬ