ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೬೧ ಚಿಂತೆ ಅವರನ್ನು ಕಾಡಿತು. ಬ್ರಾಹ್ಮಣಕೇರಿಯ ಮಾನಸದಲ್ಲಿ ಈ ರೀತಿ ತಳಮಳ ಉದ್ಭವಿಸಿದಾಗ, ಒಂದು ರಾತ್ರಿ ಕೇಶವಯ್ಯನಿಗೆ ಒಂದು ಕನಸು ಬಿದ್ದಿತು. ಕೇಶವಯ್ಯ ಹಜಾರದಲ್ಲಿ ಮಲಗಿದ್ದಾನೆ. ಅವನ ಜೊತೆಯಲ್ಲಿ ಸಾಲಾಗಿ ಅವನ ಮಡದಿ, ಮಕ್ಕಳು ಮಲಗಿದ್ದಾರೆ. ಇದ್ದಕ್ಕಿದ್ದಂತೆ, ಯಾರೋ ಹಜಾರದ ಬಾಗಿಲನ್ನು ದೈಡ್ ಎಂದು ನೂಕಿ ಒಳಗೆ ಬಂದಂತಾಯಿತು. ಕೇಶವಯ್ಯ ಕಣ್ಣು ಬಿಟ್ಟ. ಅವನು ಕಂಡ ದೃಶ್ಯ ಅವನು ಪುನಹ ಕಣ್ಣು ಮುಚ್ಚವಂತಿತ್ತ!- ಕೆದರಿದ ತಲೆಗೂದಲು, ಮುಖ ಕೈ ಕಾಲುಗಳಿಗೆಲ್ಲ ಬಳಿದ ಅರಿಶಿನ, ಹಣೆಗೆ ರೂಪಾಯಿ ಅಗಲದ ಕುಂಕುಮ, ಅಚ್ಚಬಿಳಿ ಸೀರೆ ಕುಪ್ಪಸ ತೊಟ್ಟು ಉಗ್ರವಾಗಿ ಬಾಯಿ ತೆರೆದು, ರುಕ್ಕಿಣಿಯ ಪ್ರೇತ ತನ್ನತ್ತಲೆ ಬುರು - “ನಾ ಸಾಯಕ್ಕೆ ನೀವೇ ಕಾರಣ; ನಿಮ್ಮ ನ್ಯಾಯವೇ ಕಾರಣ. ನೀವು ಸುಮ್ಮನೇ ಇದ್ದಿದ್ರೆ ನಾನು ಎಲ್ಲೋ ಹೋಗಿ ಬದುಕಿ ಕೊಳದೆ... ನಾನು ಮಾಡಿದ ಪಾಪಕ್ಕಿಂತ ನೂರ್ಮಡಿ ಪಾಪ ಮಾಡಿದವರು ನಿಮ್ಮಲಿದ್ದೀರಿ!- ಹೀಗಿದ್ದೂ ನೀವು ನಾನು ಒಂದು ಬಾರಿ ಎಡವಿದ್ದನ್ನೆ ದೊಡ್ಡದು ಮಾಡಿ, ನನ್ನನ್ನು ನಾಶಮಾಡಿದ್ದೀರಿ... ಈಗ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನಿಮ್ಮ ಕೇರಿಯವರಲ್ಲಿ ಯಾರು ಯಾರು ನನಗೆ ತೊಂದರೆ ಕೊಟ್ಟಿದ್ದೀರೊ, ನೀವು ಪ್ರತಿಯೊಬ್ಬರ ಮೇಲೂ ನನ್ನ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ. ನಿಮ್ಮ ಎದೆಯ ಮೂಳೆಗಳನ್ನೆಲ್ಲ ಮುರಿದು ಒಲೆಯ ಬೆಂಕಿಗೆ ಒಟ್ಟುತ್ತೇನೆ. ನಿಮ್ಮ ಶರೀರದ ರಕ್ತವನ್ನೆಲ್ಲ ನಾನು ತೃಪ್ತಿಪಡುವಷ್ಟು ಹೀರಿ, ಅಂತರ ಶಾಕಿನಿ ಡಾಕಿನಿಯರನ್ನು ನಿಮ್ಮ ರಕ್ತ ಕುಡಿಯಲು ಬಿಟ್ಟು ಆ ನನ್ನ ಪಿಶಾಚಿಬಾಂಧವರನ್ನೂ ಸಂತೃಪ್ತಿಪಡಿಸುತ್ತೇನೆ... ಈಗ ಮೊದಲು ನಿನ್ನನ್ನು ನಾನು ಆಹುತಿ ತೆಗೆದುಕೊಳ್ಳಬೇಕು!- ನಿನ್ನನ್ನು ಕೊಂದ, ನಿನ್ನ ರಕ್ತ ಹೀರಬೇಕು... ಹೋ...” ಎಂದು ವಿಲಕ್ಷಣವಾಗಿ ಅಬ್ಬರಿಸುತ್ತ ಬಂದೆರಗಿ, ಕೇಶವಯ್ಯನ ಎದೆಯ ಮೇಲೇರಿ ಕುಳಿತು, ಕುತ್ತಿಗೆ ಹಿಚುಕಿದಂತಾಗಿ, ಕೇಶವಯ್ಯ ಬೆವೆತು ಕಂಗಾಲಾಗಿ “ಅಯ್ಯೋ, ಕೆಟ್ಟೆ-ಕೆಟ್ಟೆ...” ಎಂದು ಕಿರುಚಿದ. ಆದರೆ ಅವನ ಕಿರುಚಾಟವೆಲ್ಲ ಸದ್ದಿಲ್ಲದ್ದು. ಬಾಯಿ ಪಿಟಪಿಟ ಎನ್ನುತ್ತಿತ್ತೆ ವಿನಹ ಶಬ್ದ ಮಾತ್ರ ಅಲ್ಲಿಂದ ಹೊರಡುತ್ತಿರಲಿಲ್ಲ.... ಎಷ್ಟು ವೇಳೆ ಹೀಗೆ ಕಳೆಯಿತೊ. ಯುಗಯುಗಗಳೇ ಕಳೆದು ಹೋದಂತೆ ಅವನಿಗೆ ಭಾಸ, ತನ್ನನ್ನು ಕೊಂದೇ ಅ ಪ್ರೇತ ತನ್ನೆದೆಯ ಮೇಲಿನಿಂದ ಇಳಿಯುವುದಿಂದು ಅವನು ಭಾವಿಸಿದ್ದ. ಆದರೆ ಅದೇನೋ ಕಡೆಗೊಮ್ಮೆ, ಅದು ಅವನೆದೆಯ ಮೇಲಿಂದ ಛಂಗನೆ ಹಾಗೆ ಮಾಯವಾಯಿತು.... ಕನಸು ಮುಗಿದು ಕೇಶವಯ್ಯನಿಗೆ ಎಚ್ಚರವಾದಾಗ, ಅವನು ಶರೀರಾದ್ಯಂತ