ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೨ ವೈಶಾಖ ಬೆವರಿನಿಂದ ತೋಯ್ದು ಹೋಗಿದ್ದ. ತತ್‌ಕ್ಷಣ ಹೆಂಡತಿಯನ್ನೆಬ್ಬಿಸಿ, ರ ತಾನು ಕಂಡ ಭೀಕರ ಕನಸನ್ನು ಅವಳಿಗೆ ತೊದಲುತ್ತ ತೊದಲುತ್ತ ವರ್ಣಿಸಿದ. ಗಂಡನಿಗೆ ಬಿದ್ದ ಕನಸಿನ ವಿವರ ಕೇಳಿ, ಅವಳೂ ಸಹ ಕಳವಳಗೊಂಡು, “ಇದು ನಮಗೆ ಸಂಭವಿಸಲಿರುವ ದೊಡ್ಡ ಅನಾಹುತದ ಸೂಚನೆ ಇರಬಹುದು” ಎಂದು ನಡುಗಿಹೋದಳು.

  • ಬೆಳಗಾಗುವುದನ್ನೆ ಕಾದಿದ್ದು ಕೇಶವಯ್ಯ ಬ್ರಾಹ್ಮಣರನ್ನೆಲ್ಲ ಒಂದು ಕಡೆ ಸೇರಿಸಿ, ತನಗೆ ಬಿದ್ದ ಕನಸನ್ನು ಅವರೆಲ್ಲರ ಮುಂದೆ ನಿವೇದಿಸಿದ. ಕನಸಿನ ಸ್ವರೂಪ ಅವರೆಲ್ಲರಲ್ಲೂ ಭೀತಿ ಹುಟ್ಟಿಸಿತು. ಮುಂದೇನು ಮಾಡಬೇಕೆಂದು ಚರ್ಚೆ ನಡೆಸಿದರು. ಒಬ್ಬೊಬ್ಬರು ಒಂದೊಂದು ಪರಿಹಾರ ಸೂಚಿಸಿದರೂ ಅಂತಿಮವಾಗಿ ವೆಂಕಣ್ಣ ಜೋಯಿಸರ ಸಲಹೆಯೇ ನಿರ್ಣಾಯಕವಾಯಿತು. ಕಾಣೆಯಾದ ರುಕ್ಕಿಣಿಗೆ 'ಅನಾಥ ಪ್ರೇತ ಸಂಸ್ಕಾರ ಮಾಡಬೇಕೆಂಬುದೇ ಅವರ ಸಲಹೆಯಾಗಿತ್ತು. ಈ ಸಲಹೆಯನ್ನು ಸಕಲರೂ ಒಪ್ಪಿದರು.

ಆ ಪ್ರಕಾರ ವಾರ, ತಿಥಿಗಳನ್ನು ಲೆಕ್ಕಹಾಕಿ, ರುಕ್ಕಿಣಿಯ ಹೆಸರಿನಲ್ಲಿ ಒಂದು ಕಾಷ್ಪವನ್ನಿಟ್ಟರು. ಅದಕ್ಕೆ ರುಕ್ಕಿಣಿಯ ಪ್ರೇತವನ್ನು ಅವಾಹನೆ ಮಡಿದರು. ಅನಂತರ ಅದನ್ನು ಸುಟ್ಟು, ಸಂಸ್ಕರಿಸಿ, ಅದಕ್ಕೆ ಸಕ್ರಮವಾಗಿ ಕ್ರಿಯಾದಿಗಳನ್ನು ನಡೆಸಿದರು. ಅನಂತರ ಎಲ್ಲರೂ ಹಣ, ಧಾನ್ಯಗಳನ್ನು ಕೂಡಿಸಿ, ರುಕ್ಕಿಣಿಯ ಹೆಸರಿನಲ್ಲಿ ಉರಿನವರಿಗೆಲ್ಲ ಊಟ ಹಾಕಿ, ಸಮಾರಾಧನೆ ಮಾಡಿದರು. ಇದರಿಂದ ಪ್ರೇತಕ್ಕೆ ಶಾಂತಿ ದೊರಕಲೆಂಬುದು ಒಂದು ಆಶಯ. ಆ ಪ್ರೇತಕ್ಕೆ ತೃಪ್ತಿಯಾಗಿ ಇನ್ನುಮುಂದೆ ತಮ್ಮನ್ನು ಪೀಡಿಸದಿರಲಿ, ಎಂಬುದು ಇನ್ನೊಂದು ಆಶಯ. ಆದರೆ ಭೂತತೃಪ್ತಿಗಾಗಿ ಬ್ರಾಹ್ಮಣ ಕೇರಿಯ ಮಂದಿ ನಡೆಸಿದ ಕ್ರಿಯಾದಿಗಳಿಂದ ಪ್ಲೇಗು ಜಾಡ್ಯದ ಮೇಲೆ ಯಾವ ಪ್ರಭಾವವೂ ಆದಂತೆ ತೋರಲಿಲ್ಲ. ಅದು ಇನೂ ಉಲ್ಲಗೊಂಡಿತೇ ಹೊರತು ಕಡಿಮೆಯಗುವ ಸೂಚನೆಗಳೇ ಕಾಣಲಿಲ್ಲ.... ಶ್ಯಾನುಭೋಗರು ಪಟೇಲರೇ ಆದಿಯಾಗಿ ಊರಿನ ಎಲ್ಲ ಯಜಮಾನರೂ ಜಪ್ಪಯ್ಯನ ಮಟದಲ್ಲಿ ಶಿವಪದಪ್ಪನವರ ಸಮ್ಮುಖದಲ್ಲಿ ಸಭೆ ಸೇರಿ, ಊರನ ಯರೊಬ್ಬರ ಮನೆಯಲ್ಲೂ ಎಣ್ಣೆಕಂಟು, ಮೆಣಸಿನ ಕಾಯಿ ಘಾಟು ಇದೆಯಲ್ಲ ಮಾಡಬಾರದು, ಒಗ್ಗರಣೆ ಕೂಡ ಹಾಕಬಾರದು, ಎಂದು ಕಟ್ಟು ಮಾಡಿದರು. ಆದರೆ ಊರಿನಲ್ಲಿ ಬಹುತೇಕ ಮಂದಿ “ಅಗ್ರಣೇನು ಹಾಕಬ್ಯಾಡ ಅಂದ್ರೆ ಯಾವ ಮಾತ ತೆಗಿ-“ ಎಂದು ಹೆಂಗಸರು ಒಗ್ಗರಣೆ ಹಾಕಿದ್ದು ಮಾತ್ರವಲ್ಲದೆ, ಮೆಣಸಿನ ಕಾಯನ್ನೂ ಹುರಿದು, ಹುಚ್ಚೆಳ್ಳೆಣ್ಣೆಯಲ್ಲಿ ಕಜ್ಜಾಯ ಮುಂತಾದ ತಿಂಡಿ