________________
ಸಮಗ್ರ ಕಾದಂಬರಿಗಳು ೩೬೩ ಪದರ್ಥಗಳನ್ನೂ ಕರಿದರು. ಬ್ರಾಹ್ಮಣ ಮಹಿಳೆಯರೂ ಸಹ, ಕೆಲವು ದಿನ ಹೇಗೊ ಪ್ರಯಸದಿಂದ ತಡೆದಿದ್ದವರು, “ಇದೇನು ಕಟ್ಟು-ನಮ್ಮೆ ಜಮಾನರಿಗೆ ಊಟಕ್ಕೆ ಹಪ್ಪಳ, ಸೆಂಡಿಗೆ, ಉಪ್ಪುಮೆಣಸಿನಕಾಯಿ ಇತ್ಯದಿ ವ್ಯಂಜನಗಳು ಇಲ್ಲದಿದ್ದರೆ, ಅನ್ನದ ತುತ್ತು ಅವರ ಗಂಟಲೊಳಗೇ ಇಲಿಯಲ್ಲ!...ಊಟ ಮುಗಿದ ಬಳಿಕ, ಬೆಣ್ಣೆ ಮುಟ್ಟೋರೆ, ಚಕ್ಕುಲಿ, ಕೋಡುಬಳೆ, ಖಾರದ ಅವಲಕ್ಕಿ, ಇಂಥ ಯಾವುದಾದರೂ ಕುರುಕು ತಿಂಡಿ ಇದ್ದೇ ಇರಬೇಕು, ಒಂದೊಂದು ಸಲ ಆಪೇಕ್ಷೆಪಟ್ಟು ಹೀರೇಕಾಯಿ ಬೋಂಡವನ್ನೊ, ಈರುಳ್ಳಿ ಬೋಂಡವನ್ನೂ ಮಾಡು ಅಂತ ಹೇಳೋದು ಉಂಟು. ವಸ್ತುಸ್ಥಿತಿ ಹೀಗಿರುವಾಗ, ಯಾರೂ ನಡೆಸಲಿಕ್ಕಾಗದ ಈ ಕಟ್ಟುಪಾಡಿಗೆ ನಮ್ಮ ಯಜಮಾನರು ಹೇಗೆ ಒಪ್ಪಿಗೆ ಕೊಟ್ಟರೊ?”- ಎಂದು ಮೂಗು ಮುರಿದು ಊರಿನ ಯಜಮಾನರು ನಿರ್ಣಯಿಸಿದ್ದ ಕಟ್ಟುಪಾಡನ್ನು ಗಾಳಿಗೆ ತೂರಿದರು. ಕಟ್ಟು ಮಾಡಿದ ಕೆಲವು ಮುಖಂಡರೇನೋ “ಊರಿಗೆ ಇಂಥ ವಿಪತ್ತು ಬಂದಾಗಲೂ ಬಾಯಿಚಪಲ ಬಿಡೋಲ್ಲರಲ್ಲ, ಇವರಿಗೆ ದೊಡ್ಡಾಪತ್ತು ಬರ” ಎಂದು ಎಗರಾಡಿದರು. ಆದರೆ ಈ ಕಟ್ಟುಪಾಡನ್ನು ಮುರಿಯುವುದರಲ್ಲಿ ಊರಿನ ಎಲ್ಲ ಕೇರಿಗಳ ಮಹಿಳೆಯರದೂ ಸಮಪಾಲು ಇದ್ದುದರಿಂದ, ಊರಿನ ಯಜಮಾನರುಗಳು ಕೇವಲ ಗೊಣಗುವುದರಲ್ಲಿಯೇ ತಮ್ಮ ಪ್ರತಾಪ ತೋರಿ ತೆಪ್ಪಗಾಗಬೇಕಾಯಿತು!. ಊರಿನಲ್ಲಿ ಎಣ್ಣೆಯ ಕಂಟು, ಮೆಣಸಿನಕಾಯಿಯ ಘಾಟು ಅಧಿಕಗೊಂಡಂತೆ ಪ್ಲೇಗು ಉಪದ್ರವದ ಬರಾಟೆಯೂ ಹೆಚ್ಚಿತು. ರೋಗ ತಗಲಿದವರಿಗೆ ಉದರ ಉಪಶಮನಕ್ಕಾಗಿ ಕೆಲವರು ಹಳ್ಳಿಯ ವೈದ್ಯರು ಕೊಟ್ಟ ನಾರುಬೇರುಗಳನ್ನು ತೇದು ಲೇಪ ಹಾಕಿದರು. ಕೆಲವರು ಕತ್ತೆಯ ಹಾಲನ್ನು ಕುಡಿಸಿದರು. ಆದರೂ ಊರಿನ ಎಲ್ಲ ಕೇರಿಗಳಲ್ಲಿಯೂ ತೆಳ್ಳತೆಳ್ಳಗೆ ಹೆಣಗಳು ಬೀಳುತ್ತಲೇ ಇದ್ದವು ಈಗಲೀಗ ಊರಿನಲ್ಲಿ ಇರುವುದು ಸೂಕ್ತವಲ್ಲವೆಂದು ಅನೇಕರು ಊರಿನಾಚೆ ಗುಡ್ಲುಗಳನ್ನು ಕಟ್ಟಿ ವಾಸಿಸಲಾರಂಭಿಸಿದರು. ಕೆಲವರು ಗೋಮಾಳದಲ್ಲಿ ಗುಡ್ಡುಗಳನ್ನು ನಿರ್ಮಿಸಿದರೆ, ಇನ್ನು ಕೆಲವರು ತಮ್ಮ ತಮ್ಮ ಹೊಲಗಳಲ್ಲಿ ಎತ್ತು ಕರು ಮೇಯಿಸಲು ಹುಲ್ಲು ವೊಚುಡಿ (ತೆವರಿ)ಗಳಲ್ಲಿ ಗುಡ್ಲುಗಳನ್ನು ಕಟ್ಟಿದರು. ಅಂಥ ವಿಷಮಪರಿಸ್ಥಿತಿಯಲ್ಲೂ ಬೇರೆ ಬೇರೆ ಜಾತಿಯವರು ಪ್ರತ್ಯೇಕ ಪ್ರತ್ಯೇಕ ಜಾಗಗಳಲ್ಲಿ ತಮ್ಮ ತಮ್ಮ ಗುಡ್ಲುಗಳನ್ನು ನಿರ್ಮಿಸಿ, ಸಾಮಾನುಗಳ ಜೊತೆಗೆ ತಮ್ಮ ದನಕರು, ಎತ್ತು, ಎಮ್ಮೆ, ಆಡು ಕುರಿ ಕೋಳಿ ಇತ್ಯಾದಿಗಳನ್ನು ಕೊಂಡೊಯ್ದಿದ್ದರು.