________________
೨೨ ವೈಶಾಖ ಬಚ್ಚಲು ಕ್ವಾಣೆ ವೊಕ್ಕಿದೋರು, ಆ ಭಕ್ತ ಆ ಅಟ್ಟಿ ಬುಟ್ಟು ಆಚೆ ಹೈಂಗೊ ವರೂವೆ ಕ್ವಾಣಿಂದ ಈಚೆ ಕಡೀನೆ ಇಲ್ಲ! ಈ ಪರಸಂಗ ಗೆಪ್ತಿ ಆದಂಗೆಲ್ಲ ಲಕ್ಕೆ ಬಿದ್ದುಬಿದ್ದು ನಗಾಡ್ಡ. ಆದ್ರೆ ನಂಜೇಗೌಡ ವಳುಖ್ಯಿಂದ ಬತ್ತಿದ್ದ ಕಂಡು ನಗ ನಿಲ್ಲುಸಿ, ಗಂಬೀನ್ವಾಗಿ ಕುಂತರೂವೆ, ಲಕ್ಕನ ಮೊಗಲ್ಲಿ ನಲೀತಿದ್ದ ಸುಮಾನವ ಗೌಡ ಗುರಿತಿಸ್ಟೇ ಇನ್ನಿಲ್ಲ “ಏನ್ಮ ಲಕ್ಕ, ಈಪಾಟಿ ಸುಮ್ಮಾನದಲ್ಲಿದ್ದೀಯಲ್ಲ?” ಕೇಳಿದ. “ಏನಿಲ್ಲ ಗೌಡ್ರೆ, ಹಿಂದಿಂದು ಯಾವೊ ಸಂಗ್ತಿ ನೆಪ್ಪಾಯ್ತು, ನಗ ಬಂತು. ವೋಟೇಯ” ಎಂದ. ಅದೇನು ಸಂಗ್ತಿ ಅಂತ ಗೌಡ ಕೇಳೇ ಇಲ್ಲೀಂತ ದೇವರೆ ಪ್ರಾರ್ತನೆ ಮಾಡ್ತಿದ್ದ ಲಕ್ಕ, ಅದಕ್ಕೆ ತಕ್ಕ ಹಾಗೆ ಗೌಡರಿಗೂ ಅಂಥ ಚಿಲ್ಲರೆ ವಿಷಯವನ್ನು ಹೆಕ್ಕಿ ತಿಳಿಯುವ ಕಾತರವೂ ಇರಲಿಲ್ಲ. ಅವನಿಗೆ ಕಾತರವಿದ್ದುದು ತನಗೆ ಪ್ರತಿನಿತ್ಯ ಅಗತ್ಯವಾದ ಔಷದಿ'ಯನ್ನು ಆಗಿಂದಾಗ ಮುಗಿದಂತೆ ಒದಗಿಸಲು ಲಕ್ಕೆ ಒಪ್ಪುವನೋ ಇಲ್ಲವೊ, ಎಂಬುದರಲ್ಲಿ... ಲಕ್ಕೆ ಒಂದು ಮಾದರಿಯ ಹೈದ. ತನಗೆ ಸರಿ ಕಂಡಿದ್ದೇ ಅವು ಒಪ್ಪೋದು. ಇದು ಗೌಡಂಗೆ ಗೊತ್ತಿದ್ದರಿಂದ ಲಕ್ಕನ್ನ ಇನ್ನೊಮ್ಮೆ ನೇರವಾಗಿ ಕೇಳಲು ಸಂಕೋಚ, ಬಾಯ ತೆಗೀತಾನೆ. ಆಮೇಲೆ ಏನೋ ಅಲೋಚಿಸಿದಂತೆ ಮುಚ್ಚತಾನೆ-ತೆಗೀತಾನೆ, ಮುಚ್ಚುತಾನೆ... ಗೌಡ ಹೀಗೆ ಪೇಚಾಡುತ್ತಿದ್ದುದು ಲಕ್ಕನಿಗೂ ಕಸಿವಿಸಿಯಾಗಿ, “ಹಂಗಾರೆ ನಾ ವೋಯ್ತಿನಿ, ಗೌಡ್ರೆ” ಎಂದು ಎದ್ದ. “ಹುಂ, ಹೋಗಿ ಬಾ. ನಾನೂವೆ ನಮ್ಮ ಸ್ಯಾನುಬೋಗು, ಕೆಸವಯ್ಯಾರು, ಆ ಕಿಸ್ಪಸಾಸ್ತಿಗಳು ಇವೆಲ್ಲಾರ ತ್ವಾಟಗೊಳ ಕಡೆ ಅಂಗೇ ಕಾಲಾಡಿ ಬತ್ತೀನಿ” ಎನ್ನುತ್ತ ನಾಲ್ಕು ದಾಪು ಹಾಕಿ, ಏನೋ ನೆನೆದಂತೆ ಹಿಂದಿರುಗಿ ಬಂದು, ಬೆಣ್ಣೆಯಿಂದ ಕೂದಲು ತೆಗೆಯುವ ಹಾಗೆ, ಮೆದು ದನಿಯಲ್ಲಿ ನಂಜೇಗೌಡ, “ನೀ ತಂದು ಕಟ್ಟ ಔಸದಿ ಇನ್ನೊಂದು ಎಂಟು ಜನ ಆಗದು ಕನೂ ಲಕ್ಕ, ಅಮ್ಮಾಕೆ ಮುನಾ ನೀನೇ ತಂದು ಆಡಬೇಕು... ಬುದ್ದಿಯೋರೂವೆ ಲಕ್ಕನೇ ನಂಬಿಕಸ್ತ ಅವ್ರ ಕೈಲೇ ತರಿಸೊಂದವರೆ... ಅಂಗೇಯ ನೀ ತಂದಾಗ್ಲೆಲ್ಲ ನಮ್ಮಟದಲ್ಲೇ ಉಂಡೋಗಲಿ ಅಂತಾನು ಅಂದ್ರು” ಎಂದ. - ನಾ ತರನಾರೆ ಆ ಗಬ್ಬುನಾತ ತಡಿನಾರೆ ಅನ್ನಾ ಮಾತ ನಾಲಿಗೆ ತುದಿಗಂಟ ಅರಿಕಂಬಂದು ಮುಂಬೈ ದಾಟನಾರೈ, ಅಡಗಟ್ಟೆ ಕಟ್ಟಾಗ ಗದ್ದೆ ಪಾತಿ ನೀರು ಚೂರೂ ತಟಾಯಕ್ಕಿಲ್ವಲ್ಲ -ಅಂಗೆ, ತಟಕ್ಕೆ ಬಂದಾಯ್ತು... ತನ್ನ ಅಯ್ಯಂಗೂ ತನಗೂವೆ ವಾರ ಒಪ್ಪಂದ ಇದೆ ಇಚಾರಲ್ಲಿ ಕಮ್ಮ ನಡುದೇ ಇತ್ತು...