________________
ಸಮಗ್ರ ಕಾದಂಬರಿಗಳು ೩೬೫ ಬ್ರಾಹ್ಮಣಕೇರಿಯ ಕೆಲ ಜನರೂ ಸಹ ಊರಿನ ಹೊರಗೆ ಗುಡ್ಲುಗಳನ್ನು ಹಾಕಿ ಅಲ್ಲಿಗೆ ಸಂಸಾರಸಮೇತ ತೆರಳಿದ್ದರು. ಆದರೆ ಜೀವನದಲ್ಲಿ ಅತೀವ ಜುಗುಪ್ಪೆಗೆ ಒಳಗಾಗಿದ್ದ ಕೃಷ್ಣಶಾಸ್ತ್ರಿಗಳು” ಮರಣ ಎಲ್ಲಿ ಹೋದರೆ ತಾನೆ ತಪ್ಪಿತು?ಜಾತಸ್ಯ ಮರಣಂ ಧ್ರುವಂ.... ಅದು ಬರುವುದಾದರೆ, ನಮ್ಮ ಮನೆಯಲ್ಲೇ ಬರಲಿ” ಎಂದು ಧೈರ್ಯ ತಾಳಿದ್ದರು. ಕೇಶವಯ್ಯನಂತಹ ಉಳಿಕೆ ಬ್ರಾಹ್ಮಣರು, “ನಾವೆಲ್ಲರೂ ಊರು ಬಿಟ್ಟಲ್ಲಿ, ಕಳ್ಳಕಾಕರು, ನಮ್ಮ ಮನೆ ಹೆಂಚು ಗಳುಗಳನ್ನೂ ಬಿಡದೆ ಕದ್ದುಕೊಂಡು ಹೋಗುತ್ತಾರೆ” ಎಂದು ಊರಿಗೇ ಅಂಟಿ ಉಳಿದಿದ್ದರು. ಪರಿಸ್ಥಿತಿ ಹೀಗಿರುವಾಗ ಕೇಶವಯ್ಯನ ಹೆಂಡತಿಗೆ ಪ್ಲೇಗಿನ ಗೆಡ್ಡೆ ಎಡತೊಡೆಯ ನಡುವೆ ಕಾಣಿಸಿಕೊಂಡಿತು. ತತ್‌ಕ್ಷಣ ಕೇಶವಯ್ಯ ಮಾನ ಮರ್ಯಾದೆಗೆ ತಿಲಾಂಜಲಿಯಿತ್ತು ಕೃಷ್ಣಶಾಸ್ತ್ರಿಗಳ ಮನೆಗೆ ಧಾವಿಸಿದ. ಅವರ ಬಳಿ ಸರ್ವರೋಗಕ್ಕೂ ಸಿದೌಷಧವೆನಿಸಿದ ಕುಪ್ಪಿ ಮಾತ್ರ ಇದ್ದುದು ಅವನಿಗೆ ತಿಳಿದಿತ್ತು. ಅವನು ಬಂದು ಮನೆಯ ಬಾಗಿಲು ತಟ್ಟಿದಾಗ, ಶಾಸ್ತ್ರಿಗಳು ಸರಸಿಗೆ ಊಟಕ್ಕಿಟ್ಟು, ತಾವು ಕೇವಲ ತುಳಸಿ ದಳ ಸೇರಿಸಿದ ನೀರು ಸೇವಿಸಿ, ಅವಳನ್ನು ತಮ್ಮ ಮಗ್ಗುಲಲ್ಲೆ ಮನಗಿಸಿಕೊಂಡು ಮಹಾಭಾರತದ ಕತೆ ಹೇಳುತ್ತಿದ್ದರು. ಅವಳು ಮಲಗುವಾಗ ಯಾವುದಾದರೊಂದು ಕತೆ ಹೇಳುವ ಪರಿಪಾಠ ರುಕ್ಕಿಣಿಗೆ ತಪ್ಪಿ, ಆ ಸರದಿ ಈಗ ಅವರ ಪಾಲಿಗೆ ಬಂದಿತ್ತು. - “ಕುಂತಿ ಕರ್ಣನ ಬಳಿ ಬಂದು, ನಾನೇ ನಿನ್ನ ತಾಯಿ, ಪಾಂಡವರೈವರೂ ನಿನ್ನ ತಮ್ಮಂದಿರು, ಎಂದು ತಿಳಿಸ್ತಾಳೆ...” ಎಂದು ಹೇಳುತ್ತಿರುವಾಗ, ಹೊರಗೆ ಬಾಗಿಲು ತಟ್ಟಿದ ಶಬ್ದವನ್ನು ಕೇಳಿ, “ತಾಳಮ್ಮ, ಯಾರೋ ಬಾಗಿಲು ತಟ್ಟುತ್ತಾ ಇದ್ದಾರೆ. ಅದೇನು ನೋಡಿ ಬತ್ತೇನೆ. ಆಮೇಲೆ ಈ ಕಥೇನ ಮುಂದುವರಿಸ್ತೇನೆ.” ಮಗುವನ್ನು ರಮಿಸಿ, ಎದ್ದು ಹೋಗಿ ಬಾಗಿಲು ತೆಗೆದು ನೋಡಿದರು- ಕೇಶವಯ್ಯ... ಕೃಷ್ಣಶಾಸ್ತ್ರಿಗಳಿಗೆ ವಿಪರೀತ ಸಿಟ್ಟು ಬಂದು ಬಾಗಿಲನ್ನು ಮುಚ್ಚಿಬಿಡಬೇಕೆಂದಿದ್ದರು. ಆದರೆ ಕೇಶವಯ್ಯನಾಗಿ ಒಳಗೆ ನುಗ್ಗಿ ಅವರ ಕಾಲುಕಟ್ಟಿದ್ದ ಅಷ್ಟರಲ್ಲಿ ಸರಸಿಯೂ ಎದ್ದು ಓಡುತ್ತ ಬಂದು ಮಾವಯ್ಯನ ತೊಡೆಯನ್ನು ತಬ್ಬಿ ನಿಂತಳು. ಅವಳಿಗೆ ಕೇಶವಯ್ಯನನ್ನು ಕಂಡರೆ ಆಗದು. ರುಕ್ಕಿಣಕ್ಕೆ ಎಲ್ಲಿ ಎಲ್ಲಿ, ಎಂದು ಆ ದಿನ ತಮ್ಮ ಮನೆಯೊಳಗೆ ಬಂದವರಲ್ಲಿ ಕೇಶವಯ್ಯನದೇ ಬಲು ಜೋರು ಆ ದಿನದಿಂದ ಅವನ ಮುಖ ಕಂಡ ಕಡೆ ಸರಸಿ ನಿಲ್ಲುತ್ತಿರಲಿಲ್ಲ. ಅಲ್ಲಿಂದ ದೌಡು ಹೊಡೆಯುವಳು. ಹಾಗೇನೆ ಜೋಯಿಸರ ಬಗ್ಗೆಯೂ ಕೂಡ