ಪುಟ:ವೈಶಾಖ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೬೭ ಅಭಿಲಾಷೆ...ಆದ್ದರಿಂದ ಕುಪ್ಪಿ ಮಾತೇನ ಜ್ವರಕ್ಕೆ ಉಪಯೋಗಿಸೋದು ಮಾತ್ರ ಅವರಿಗೆ ಗೊತ್ತಿತ್ತು. ಅದಷನ್ನೆ ಅವರಿಂದ ನಾನು ಕಲಿತಿರೋದು... ಇದನ್ನ ಅನೇಕ ರೋಗಗಳಿಗೆ ಉಪಯೋಗಿಸಬಹುದು ಎಂದು ಅಜ್ಜ ನಮ್ಮ ತಂದೆಯ ಸಂಗಡ ಹೇಳುತ್ತಿದ್ದರಂತೆ- ಒಂದೊಂದು ಖಾಯಿಲೆಗೆ ಒಂದೊಂದು ಅನುಪಾನ. ನೀರು, ಹಾಲು, ಮೃತ- ಹೀಗೆ ಬೇರೆ ಬೇರೆ ಅನುಪಾನದಲ್ಲಿ ಇದನ್ನು ಪ್ರಯೋಗಿಸಬೇಕಂತೆ. ಅದರಲ್ಲೂ ಇಂಥಿಂಥ ರೋಗಕ್ಕೆ ಇಷ್ಟಿಷ್ಟು ಸುತ್ತು ತೇಯಬೇಕು ಎಂದು ಕ್ರಮವಂತೆ... ಅಜ್ಜನಿಂದ ನನ್ನ ತೀರ್ಥರೂಪರು ಎಷ್ಟು ವಿಚಾರ ಕೇಳಿಸಿಕೊಂಡಿದ್ದರೆ ವಿನಾ, ಇದನ್ನು ಯಾವ ರೋಗಕ್ಕೆ ಯಾವ ಕ್ರಮದಲ್ಲಿ, ಹೇಗೆ ಪ್ರಯೋಗಿಸಬೇಕು ಎಂಬ ವಿವರಗಳನ್ನು ಅರಿಯಲು ಪ್ರಯತ್ನ ಮಾಡಲಿಲ್ಲ..... ಆದ್ದರಿಂದ “ನೀವು ಹೇಗಾದರೂ ದೊಡ್ಡ ಮನಸ್ಸು ಮಾಡಬೇಕು. ನನ್ನಾಕೆಯನ್ನು ಮಕ್ಕಳ ತಾಯಿಯಾಗಿ ಉಳಿಸಬೇಕು...” ಕೇಶವಯ್ಯ ಗೋಗರೆಯುತ್ತಲೇ ಇದ್ದ. “ನೋಡಪ್ಪ ಕೇಶವಯ್ಯ, ಪ್ಲೇಗ್ ಜಾಡ್ಯಕ್ಕೆ ಈ ಕುಪ್ಪಿ ಮಾತ್ರೆನ ಹೇಗೆ ಉಪಯೋಗಿಸಬೇಕು ಅನ್ನೋದು ನನಗಂತೂ ದಿಟವಾಗಿಯೂ ತಿಳೀದು. ಅದಕ್ಕೆ ಯಾವ ಅನುಪಾನವೊ, ಎಷ್ಟು ಸುತ್ತೋ...” ಶಾಸ್ತಿಗಳೆ ಹೃದಯ ಕೊಂಚ ಕರಗಿದುದನ್ನು ಗಮನಿಸಿ, ಕೇಶವಯ್ಯ ಕಣ್ಣೀರು ಸುರಿಸುತ್ತ, “ಹಾಗಿದ್ದರೆ, ತಾವು ಇಷ್ಟು ಉಪಕಾರ ಮಾಡಿ..” ಎಂದು ಬೇಡಿದ. “ಏನು?” “ಆ ಕುಪ್ಪಿ ಮಾತೇನ ನನ್ನ ಕೈಲಿ ಕೊಡಿ. ನಾನು ಯರನ್ನಾದರೂ ಕೇಳಿ ಉಪಯೋಗಿಸ್ತೀನಿ.” - “ಈ ಊರಿನಲ್ಲಿ ಅಲ್ಲ, ಇದರ ಉಪಯೋಗ ಈ ಸುತ್ತಿನಲ್ಲಿ ಯಾರಿಗೂ ಗೊತ್ತಿಲ್ಲ.” “ಹೋಗಲಿ. ಅದನ್ನ ನನ್ನ ಕೈಲಿ ಕೊಡಿ. ಇದರಿಂದ ಜೇನುತುಪ್ಪದ ಅನುಪಾನದಲ್ಲಿ ಗಂಧ ತೇದು ಆ ಪ್ಲೇಗಿನ ಗಂಟಿಗೆ ಲೇಪ ಹಾಕ್ತಿನಿ...” ಶಾಸ್ತ್ರಿಗಳು ದ್ವೇಷದಿಂದಲೇ ನಕ್ಕರು. “ಜ್ವರಕ್ಕೆ ಉಪಯೋಗಿಸೊ ಅನುಪಾನವನ್ನ ಪ್ಲೇಗಿಗೆ ಉಪಯೋಗಿಸ್ತೇನೆ, ಎನ್ನುತ್ತೀಯಲ್ಲ?” “ಹೇಗೊ ಗಂಡ ಅನ್ನಿಸಿಕೊಂಡಮೇಲೆ ಅವಳನ್ನ ಉಳಿಸಿಕೊಳ್ಳಲಿಕ್ಕೆ