________________
೩೬೮ ವೈಶಾಖ ಕೊನೆ ಪ್ರಯತ್ನ ಮಡ್ತೀನಿ.” ಶಾಸ್ತ್ರಿಗಳು ಕೊಡುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ನಿಂತರು. “ನಿಮ್ಮ ದಮ್ಮಯ್ಯ ಅಂತೀನಿ, ಶಾಸ್ತಿಗಳೆ, ದಯಮಾಡಿ ಕೊಡಿ. ಇದರಿಂದ ಒಂದು ಜೀವ ಉಳಿದರೂ ಉಳಿಯಬಹುದು.” ಒಂದು ಜೀವ ಉಳಿಸುವ ಮತೆತ್ತಿದಾಗ, ಶಾಸ್ತ್ರಿಗಳ ಅಂತಃಕರಣ ಕಲಕಿತು. ಇದರಿಂದ ಆ ಜೀವ ಉಳಿಯುತ್ತದೊ ಇಲ್ಲವೊ, ಕೊಡದೇ ಹೊದರೆ, ಜೀವ ಹೋಗುವಾಗ ಇದ್ದ ಒಂದು ಪದಾರ್ಥವನ್ನು ಕೊಡದೇ ಹೋದೆನಲ್ಲ, ಎಂಬ ಅಪರಾಧಭಾವ ಮಾತ್ರ ಉಳಿದುಬುಡುವುದು... ಈಗಲೇ ತನ್ನ ಪಾಪದ ಹೊರೆ ದೊಡ್ಡದಾಗಿದೆ. ಅದಕ್ಕೆ ಇದೂ ಒಂದನ್ನು ಯಾಕೆ ಸೇರಿಸಲಿ?... ಶಾಸ್ತ್ರಿಗಳು ಒಳಗೆ ಹೋಗಿ ಮರದ ಸಂದೂಕಿನಿಂದ ಕುಪಿ ಮಾತ್ರೆ ತೆಗೆದು, ತಂದು ಕೊಡುತ್ತ, “ಇದನ್ನ ಮಾತ್ರ ಜೋಪಾನವಾಗಿ ಹಿಂದಿರುಗಿಸಬೇಕು... ಇತರೆ ರೋಗಗಳಿಗೆ ಹೇಗೊ ಕಾಣೆ. ಆದರೆ ಜ್ವರಕ್ಕೆ ಮಾತ್ರ ಇದು ರಾಮಬಾಣ. ಇದನ್ನ ಅನೇಕ ಸಲ ಉಪಯೋಗಿಸಿ ನೋಡಿದ್ದೇನೆ. ಯಾಕೆ, ಮೊನ್ನೆ ನಮ್ಮ ಸರಸಿಗೇ ಜ್ವರ ಬಂದಿದ್ದಾಗ, ಇದನ್ನ ಉಪಯೋಗಿಸಿದೆ. ಎರಡೇ ದಿನದಲ್ಲಿ ಜ್ವರ ನಿಂತುಬಿಟ್ಟಿತಲ್ಲ!.....” “ಇದರ ವಿಚಾರ ನೀವು ಯೋಚನೆ ಮಾಡಬೇಡಿ. ಒಳ್ಳೇದಾಗಲಿ, ಕೆಟ್ಟದಾಗಲಿ-ಮಾರನೆ ದಿನವೇಯೆ, ನಿಮ್ಮ ವಶಕ್ಕೆ ಇದನ್ನ ತಂದು ಒಪ್ಪಿಸ್ತೇನೆ” ಎಂದು ಆಶ್ವಾಸನೆ ಕೊಟ್ಟು, “ತುಂಬ ಉಪಕಾರವಾಯಿತು” ಎಂದು ಹಲ್ಲುಕಿರಯುತ್ತ ಕೇಶವಯ್ಯ ನಿರ್ಗಮಿಸಿದ. ಕೆಲವು ದಿನಗಳು ಕಳೆದಿದ್ದವು. ಒಂದು ಮಧ್ಯಾಹ್ನ ಕೇಶವಯ್ಯನು ಶಾಸ್ತಿಗಳ ತೋಟಕ್ಕೆ ಬಂದವನೇ, “ನಿಮ್ಮ ಕುಪಿ ಮಾತ್ರೆಯಿಂದ ಬಹಳ ಅನುಕೂಲವಾಯಿತು. ಶಾಸ್ತಿಗಳೆ. ಅದರಿಂದಲೇ ನನ್ನ ಹೆಂಡತಿ ಜೀವ ಉಳೀತು. ಇದನ್ನ ತೇದು ಲೆಪ ಹಾಕಿದ ಹಾಗೆ ಹಾಗೇನೆ ಪ್ಲೇಗಿನ ಗಂಟು ಮರಿಹೋಯ್ತು... ನಿಮ್ಮ ಋಣ ಹೇಗೆ ತೀರಿಸಬೇಕೊ ತಿಳಿದು.” ದೈನ್ಯ ತುಂಬಿ ಹೇಳಿದ. “ಸಂತೋಷ ಇನ್ನು ಆ ಕುಪ್ಪಿ ಮಾತ್ರೆ ಅಗತ್ಯವಿಲ್ಲವಲ್ಲ?” ಶಾಸ್ತ್ರಿಗಳು ಕೇಳಿದರು. “ಅದನ್ನೆ ಹೇಳಲಿಕ್ಕೆ ಬಂದೆ. ಯಾವಾಗ ರೋಗ ಗುಣಮುಖವಾಯಿತೊ, ನಿಮಗೆ ಅದನ್ನ ಹಿಂದಿರುಗಿಸೋಣ ಎಂದುಕೊಳ್ಳುವುಷ್ಟರಲ್ಲಿ, ನಾನು ಮನೇಲಿ