ಪುಟ:ವೈಶಾಖ.pdf/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೦ ವೈಶಾಖ ಕುಂತೇ ಇದ್ದ. ಬಾಣದಲ್ಲಿ ಅಲ್ಲೊಂದು ಚುಕ್ಕಿ ಮೂಡಿದರೂವೆ ಚಿಂತಿಸ್ತಾ ಕುಂತೇ ಇದ್ದ. ನಂಜೇಗೌಡ ಎಡತಿ ತಾನು ಕಂಡಂಗೆ ಸಾಧುಪ್ರಾಣಿ, ಮೂಗೆಂಗೆ ದುಡಿಯಾದಂದೇ ಅವಳಿಗೆ ಸ್ವತ್ತು. ಅವುಳ್ಳ ಈ ಗೌಡ ಸಣ್ಣಸಣ್ಣ ಇಚಾರಕೆಲ್ಲ ಕ್ಯಾತೆ ತಕ್ಕಂಡು ವೋಡದು ಫಜೀತಿ ಮಾಡಿ, ಅಣ್ಣುಗಾಯಿ, ನೀರುಗಾಯಿ ಮಾಡಿದ್ದು ಊರಿಗೆಲ್ಲ ಗ್ರತ್ತಿದ್ದ ಇಸ್ಕಾನೆ!... ಗೌರಮ್ಮ ಏಡನೇ ಎಡತಿ. ಇನ್ನೂ ಚಿಕ್ಕಪ್ರಾಯ. ತಾನು ಬ್ಯರೆ ಎಂಗಸರ ಕುಟ್ಟೆ ಏಟೇ ಅಡಿದರೂವೆ ಗೌರಮ್ಮ ಮಾತ್ರ ಬಿಚ್ಚಾಲೆ ಗೌರಮ್ಮ ನಂಗೇ ಇರಬೇಕು ಅಂತ ಗೌಡ್ರ ಇರಾದೆ... ಅವಳು ಯಾವ ಗಂಡಸ್ಸ ಕುಟ್ಟೂ ಮಾತಾಡಬ್ಯಾಡದು. ಒಂದು ಪಕ್ಷ ಮಾತಾಡಬೇಕಾಗಿ ಬಂದ್ರೂವೆ ಮೊಕದಲ್ಲಿ ನಗ ಇರಬಾಡದು. ಮೊಕ ಯಾವತ್ತೂವೆ ಸಿಣಿಸಿಣಿ ಅಂತಿರಬೇಕು. ವೋಟೆ ಅಲ್ಲ.... ಬಾವೀಲಿ ನೀರು ಸೇದಿ ಅಟ್ಟಿಗೆ ತತ್ತ ಇದ್ದಾಗ, ಯಾರಾರು ಗಂಡಸು ಎದುರೆ ಬಂದ್ರೆ ಅವನ್ನ ಕತ್ತೆತ್ತ ಕೂಡ ಕ್ವಾಡಬ್ಯಾಡದು. ಅಪ್ಪಿತಪ್ಪಿ ಕ್ವಾಡಿದ್ರೆ, ಆಗ ಗೌಡ ಯಾರ ಜಗಲೀ ಮ್ಯಾಲಾರು ಕುಂತಿದ್ದು ಇದು ಕಣ್ಣಿಗೆ ಬಿದ್ದರೆ, - ಆ ನಾನಾಗ ಗೌರಮ್ಮನ ಗತಿ ಮುಗಿದಂಗೇಯ... “ಏನೇ ಭೋಷಡಿ, ಮಿಂಡಾಟ ಆಡಕ್ಕೆ ಸುರು ಮಾಡಕಂಡೈನೆ?” ಅಂತ ಗುಡುಗಿ, ಅರಿಕಡ್ಡಿಯೊ, ಇಡಗಲು ಮುಂಡಿಯೊ, ಕಯ್ಕೆ ಯೇನು ಸಿತ್ತೋ ಅದರಲ್ಲಿ ಚೆಂದಾಗಿ ತರಿದು, ಅವಳೆ ಉಟ್ಟಿದ ಜಿನವ ಕಾಣಿಸಿಬುಡ್ತಿದ್ದ! ಏನಿದು ಅನ್ನಾಯ- ಯಾವತ್ತೂವೆ ಒಳ್ಳೆಯೋರಿಗೆ ಜೀವೃ ಸಲೀಸಿಲ್ವಲ್ಲ?... ವೋಟೆ ಅಲ್ಲ. ಒಳ್ಳೆಯೋರು ಬ್ಯಾಗಬ್ಯಾಗ ಸ್ವಾಮಿಪಾದವ ಸೆರುಬುತ್ತಾರಲ್ಲ!ಕೆಟ್ಟೋರು ಮಾತ್ರ ನಿಂಬಳಾಗೆ, ಯಾವ ದೊಡ್ಡ ಆಪತ್ತೂ ಇಲ್ಲದೇಯ ಬೋ ಜಿನಗಂಟ, ಒಳ್ಳಿ ದಿಮಾಕ್ಕಿನಿಂಧೆ ಬದುಕಿದ್ದಾರಲ್ಲ?... ನಂಗೊಂದೂ ವೊಳೆಯಕ್ಕಿಲ್ಲ. ದ್ಯಾವಾಜಮ್ಮ ಎಂಗೊ ಜನದ ಕಣ್ಣರೆಪ್ಪುಸಿ, ನಮ್ಮವು ಮಾಡ್ತಿದ್ದಂಗೆ, ಒಂದೊಂದು ದಪ ನನ್ನ ಕ್ವಾಡಕ್ಕೆ ಬತ್ತಾಳಲ್ಲ-ಆಗ ಅವುಳೂ ಅಂಗೇ ಅಂತಳೆ: “ಇದ್ಯಾವ ನ್ಯಾಯವ ಲಕ್ಕ? ಈ ಪ್ಲೇಗ್ ಮಾರಿ ಬಡಿಕಂಡು ವೋಗಿರೋರಲ್ಲಿ ಸುಮಾರು ಮಂದಿ ವಯೋರೇಯ..... ಆ ಬುಂಡಮ್ಮನಂತ ಪುಣಾತಿಗಿತ್ತಿ ಸತ್ತು. ನಂಜೇಗೌಡನಂತೋರು, ಗಂಗಪ್ಪನಂತೂರು, ಕೇಸವಯ್ಯನಂತೋರು ಇನ್ನೂವೆ ಬದುಕ್ಕಂಡು ಅವರಲ್ಲ-ಇದಕೇನು ಯೋಳಾವ?”... ಈ ಪ್ರಶ್ನೆ ಲಕ್ಕನ್ನ ಕಾಡ್ತಾನೆ ಇತ್ತು. ಅದರಾಗೂ ಬಂಡಮ್ಮ ಸತ್ತದ್ದ ತನ್ನ