ಪುಟ:ವೈಶಾಖ.pdf/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೨ ವೈಶಾಖ ಕುಕ್ಕರುಗಾಲಲ್ಲಿ ಕುಂತು ರುದ್ರ ಲಾಟೀನಿ ಅಳ್ಳದ ವಳೀಕೆ ಇಡಿದಿದ್ದರಿಂದ, ಗುದ್ದದ ವೊರೀಕೆ ಕತ್ತಲೆ ಮತ್ತೆ ಅದೀಕತ್ತು... “ಎಣ ಕಾಣಿಸ್ತಾ ಇದ್ದದೇನೋ?” ಮೆತ್ತಗೆ ಕೇಳಿದ ರುದ್ರು. “ಇನ್ನೂ ವಸಿ ತಗೀಬೇಕು- ಅಂದೋನು ರಂಗ, ಲಕ್ಕನ ಕುತೂಲ ಎಚ್ಚತ್ತಾ ಇತ್ತು. ಕಡೆಗೊಮ್ಮೆ ವಳಗ್ನಿಂದ ಗುರುಮಲ್ಲು, “ಈಗ ಸಿಕ್ಕಿದಂಗೆ ಕಾಣಿಸ್ತದೆ. ಲಾಟೀನ ನಮ್ಮ ಕೈಗೇ ಕ್ವಟ್ಟುಬುಡೊ, ರುದ್ರ” ಎಂದು ಕೇಳ, ರುದ್ರ ಲಾಟೀನ ಅವನ ಕೈಗೆ ಕ್ವಟ್ಟು ಬೀಡಿ ಕತ್ತಿಸ್ಥ, ಲಾಟೀನು ಈಸುಕೊಂಡ ಬಳಿಕ ಗುದ್ದದ ವಳಗಿದ್ದ ಮಂದಿ, ಇನ್ನು ಎಚ್ಚೆತು ಒಳಗೇಯ ಕಾಲ ಕಳೀನಿಲ್ಲ. ಅವರು ವೊರೀಕೆ ಬತ್ತಿದ್ದಂಗೆ, ರುದ್ರ ಎಗ್ಗಿದ ದನೀಲಿ, “ಸಿಕ್ಕಿತೇನೋ”- ಕೇಳ, ಅವರೆಲ್ಲಾರೂವೆ, “ಸದ್ಯ, ಸಿಕ್ತು ಕನೋ ರುದ್ರ, ತಕೊ, ಮಡಗಿರು- “ಅವನಕೈಲಿ ಕ್ವಿಟ್ಟು, ಜಟಜಟ್ಟೆ ಗುದ್ದದಿಂದ ವೊರೀಕೆ ತೆಗದಿದ್ದ ಮಣ್ಣ ಪುನಾ ಅದರೊಳೀಕೆ ತುಂಬಕ್ಕೆ ಸುರುಮಾಡಿದ್ರು. ಅದು ಮುಗಿದ ಕೂಡ್ಲೆ ಗುಟ್ಟು ಗುಟ್ಟಾಗಿ ಮಾತಾಡ್ತ ಅವರೆಲ್ಲರೂವೆ ಆ ಜಾಗವ ಖಾಲಿ ಮಾಡಿದ್ರು. ಲಕ್ಕಂಗೆ ಚೋಚಿಗ... ಅವರು ಗುದ್ದ ಯಾಕೆ ತೋಡಿದ್ರು- ಆ ಮಾರಿಗುಡಿ ಅಣ್ಣದೀರಿಗೆ ಅಲ್ಲೇನು ಸಿಕ್ತು?... ಅಮ್ಮ ಈ ಸಮಸ್ಯೆ ಪರಿಯಾರ ಸಿಕ್ಕಕ್ಕೆ, ಮುಂದೆ ನಾಕು ಜನ ತಕ್ಕತ್ತು. ದ್ಯಾವಾಜಮ್ಮ ಈ ನಾಕು ಜಿನವೂವೆ ಇತ್ತ ಕಡೆ ಸುಳುದೇ ಇರನಿಲ್ಲ. ಐದನೆ ಜಿನ ಆದಮ್ಯಾಲೆ, ಅವಳು ಬಂದಾಗ ನಡೆದದ್ದೆಲ್ಲ ಅವಳೆ ತಿಳಷ್ಟ ಲಕ್ಕ. ದ್ಯಾವಾಜಮ್ಮ ಉರಿದುರಿದು ಬಿದ್ದು: - “ಬೊಡ್ಡಿ ಹಕ್ಕಳು, ಸತ್ತ ಎಣಾನು ಬುಡೊಲ್ಲರಲ್ಲ– ಈ ಆಳಮುಂಡೆ ಜಲ್ಯ, ಆಸೆ ತಂದು ಉಟ್ಟಿದ್ದದೇ ವೊರತು ಆಯುಸ ತಂದು ಉಟ್ಟಿಲ್ಲ...” “ದ್ಯಾವಾಜಮ್ಮ ಅದೇನು ಯೋಳಿದ್ದು ಅನ್ನೋದು ಅರ್ತ ಆಗದೆ,” “ಅಂಗಂದ್ರೆ ಯೇನ?” ಅಂತ ಕೇಳ.