ಪುಟ:ವೈಶಾಖ.pdf/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೪ ವೈಶಾಖ ಮುಕ್ಯ. ಅದ ಅಸಿಯಕ್ಕೆ ಅವುಳು ಬುಡ್ತಾಯಿಲ್ಲ. ಚಿನ್ನದ ಕರಡಿಗೇಲಿ ಲಿಂಗು ಇದೆ. ಸ್ವಾಮಿನ ಎದೆಮ್ಯಾಲೆ ಮಡಿಕ್ಕಂಡೆ ಕೈಲಾಸ ಸೇರಬೇಕೂಂತ ಆಸೆ ಅವಳೆ, ಇನ್ನು ಉಳಿಕಂಡದ್ದು ಚಿನ್ನದ ಅಡಿಕೆ. ಆ ಅಡಿಕೆ ನೀನು ಮಾಡಿಸಿಕ್ಸಟ್ಟ ಜಿನದಿಂಝವೆ, ಅವಳು ನಮ್ಮ ಮಟಕ್ಕೆ ಬರೋವಾಗ್ಲೆಲ್ಲ ಅಕ್ಕಂಡೆ ಬತ್ತಿದ್ದು, ಆ ವಡವೆ ಕಂಡರೆ ಅವಳೆ ತನ್ನ ಪಿರಾಣಕ್ಕಿಂತಲೂ ಎಚ್ಚ ಪಿರೀತಿ... ಇವಿಷ್ಟೂವೆ ಅವುಳ ಜೇಲೆ ಗುದ್ದಕೋಗ್ಲಿ ಬುಡು. ಸಾಯೋ ವೊತ್ನಲ್ಲಿ, ಆ ಜೀವಾವ ನೋಯಸಬ್ಯಾಡ” ಅಂದರು... ಸ್ವಾಮಿಗಳೇ, ಇರಲಿ ಅಂದಮ್ಯಾಲೆ ನಂಜೇಗೌಡ ಯೇನ ಮಾಡಾನು?ಗಮ್ಮನೆ ವಬ್ಧ, ಆ ಉಳಿಕೆ ವಡವೆಗಳ ಅಂಗೆ ಅವುಗಳ ಮೈಮ್ಯಾಲೇ ಬುಟ್ಟ.... ಆಯಮ್ಮ ಸಾಯೋ ವತ್ನಲ್ಲಿ ನಡೆದ ಈ ಯಾವಾರಾನೆಲ್ಲ ನನ್ನಂಗೆ, ಆ ಮಾರಿಗುಡೀಗೆ ಸೇಕ್ತಾ ಇರವಲ್ಲ, ಆ ಪೋಲಿಮುಂಡೆಯೊವೊವೆ, ಅಲ್ಲೆ ನಿಂತು ನ್ಯಾಡ ಇದ್ದೂ - ಸರಿ. ಅವಕೆ ಆಸೆ ಆಯ್ತು. ನೀ ಯೋಳಿದಂಗೆ, ರಾತ್ರಿನಾಗ ಇಲ್ಲಿಗೆ ಬಂದ್ರು, ಗುದ್ದ ಆಗದ್ರು, ಎಣದ ಮ್ಯಾಲಿನ ವಡವೇನೆಲ್ಲ ಅಸಿಕಂಡರು, ಫೇರಿ ಕಿತ್ತರು.....” ಎಂದು ಇವರಿಸಿ, “ಹೆತ್ತ ತಾಯ ಲಾಡಿ ಬಿಟ್ಟೋ ಲೌಡಿ ಮಕ್ಕಳು” ಅಂತ ಖಾರವಾಗಿ ಬೈದು, ಬಾಯ್ದೆ ತುಂಬಿದ ಎಲಡಿಕೆ ರಸವ ಪಿಚ್ಚನೆ ಉಗಿದ್ದು. “ಇಂತಾ ಸೊಳೆಮಕ್ಕಳ ಸಾಕ್ಕಂಡು ಊರೆ ನಿಪಾತ ಮಾಡ್ತಾ ಅವ್ರಲ್ಲ, ಆ ಗೌಡ?- ಈಗ ಅವನಿಗೇಯ ಒಳುಗೆ ದಸಿ ಊಟಲ್ಲ...” ಎಂದ ಲಕ್ಕ. - “ಉಲಿ ಸವಾರಿ ಮಾಡಕ್ಕೊಂಟರೆ, ಒಂದಲ್ಲ ಒಂದು ದಪ ಅದು ನಮ್ಮೇ ತಿನ್ನುದೆ ಬುಟ್ಟಾದೇನೊ?” ದ್ಯಾವಾಜಮ್ಮ ಇಷ್ಟು ಯೋಳಿ ಮೊಂಡುತಾ ಇದ್ಲು. ಲಕ್ಕ “ಈ ಆಳುಗೇರಿಯೋರ ಸುದ್ದಿ ಆಳಾಗೋಗ್ಲಿ. ಅಯ್ಯ ಎಂಗವೆ-ವಸಿ ಯೋಳು, ದ್ಯಾವಾಜತ್ತೆ?” ಕಾತರದಿಂದ ಕೇಳ. “ಅವನ್ಯಾರೊ ನೋಡಿದೋರು?- ಸದಾ ರಾಚನ ಈಚಲು ಪ್ಯಾಟೇಲೊ ಬ್ಯಾರೆ ಯಾವುದಾರ ಈಚಲುವನದಲ್ಲೊ ಕುಡುದು ಅದೆಲ್ಲಿ ಬಿದ್ದಿದ್ದಾನೊ ಯೇನು ಕತೆಯೊ!... ನಿಮ್ಮವ್ವ ತೀರಿಕಂಡ ಮ್ಯಾಲಂತೂ ನಿಮ್ಮ ಗುತ್ತಿಗೆ ಮೊಕ ತೋರುಸೋದೆ ಅಪರ್ಪ. ಅವುನು ಗೇಯೋದೆಲ್ಲ ಅವನ ಸರಾಪಿಗೇ ಸಮ ಆಯಿರಬೇಕು- ಆಪಾಟಿ ಕುಡುದೆ; ಅವನೊಂದು ಸತ್ಯ ಕೂಟವೆ ಕನ ಬುಡು. ಕುಡುದು, ಕುಡುದು ಸಾಯಕ್ಕೆ ಜರನೆ ಜರಿಕಂಡೋಯ್ತಾ ಅವೈ, ನಾವೇನೂ ಅವ್ರ ಅಸೆ ಇಟ್ಟುಕಳೊವಂಗಿಲ್ಲ ಇನ್ನು...”