________________
೩೭೬ ವೈಶಾಖ ಆ ಅಳ್ಳದಲ್ಲಿ ಅಲ್ಲಲ್ಲಿ ಊರಿನೋರು ತಿಪ್ಪೆಗುಂಡಿಗಳು. ಒಂದು ತಿಪ್ಪೆಗುಂಡಿಗೂ ಇನ್ನೊಂದು ಗುಂಡಿಗೂವೆ ಇರೋ ಅಳ್ಳಗಳು, ಊರ ಸೊಂತ ಇತ್ತಲಿಲ್ಲದೇ ಇದ್ದ ಮನೆ ಎಂಗಸರು ನಾತ್ರೆನಾಗ ಬಯಿರ್ದೆಸೆಗೆ ಉಪಯೋಗಿಸ್ತಿದ್ದ ತಳ ಆಗಿದ್ದೋ. ಲಕ್ಕ ಓಣಿಮೆಳೆ ಹಿಂದ ಬಂದು ನಿಂತಾಗ, ಊರ ಯಾರೊ ಹೆಂಗಸು ಗುಂಡೀಲಿ ಕುಂತಿದ್ದು, ಇನ್ನೊಬ್ಬಳು ಅವಳ ಜ್ವತೆಗಾತಿ ಸುಮ್ಮಕೆ ತನ್ನ ಸಿನೇಮಿತಗಾತಿ ವಂದ್ದೆ ಬಂದಿದ್ದೋಳು ಅಂತ ಕಾಯ್ತಿದೆ. ಅವಳು ಮಾತ್ರ ಗುಂಡಿ ವೊರಗೇ ನಿಂತು ಒಂದು ಚೊಂಬಲ್ಲಿ ನೀರ ಇಡ್ಕಂಡು, ತನ್ನ ಗೆಣಕಾತಿಯೊಂದೆ ಯಾವುದೊ ಗಾದ ಆಲೋಚೇಲಿ ತೊಡಗಿದಂಗಿತ್ತು. ಲಕ್ಕಂಗೆ ಅವರಿಬ್ಬರೂ ಎಂಗಸರೂಂತ ಕಾಣ್ಯ ಇದ್ದರೂವೆ, ಕತ್ತಲೇಲಿ ಅವರು ಯಾರೂಂತ ಗುರ್ತು ಅತ್ತೂವಂಗಿಲ್ಕಿಲ್ಲ. ವೊರಗೆ ನಿಂತೋಳು ಕೇಳ್ತಾ ಇದ್ದು: “...... ಕ್ಯಾಳಿದ್ಯವ್ವ ನನ್ನ ಗೋಳಿನ ಕತ್ಯ?.... ಒಂದು ಹೆತ್ತೋಳ ಹಂದಿ ಸುಮಾನ್ತಂತೆ. ಈಗ ನಾನು ಮೂರು ಹೆತ್ತಿರೋದರಿಂದ, ನನ್ನ ಗಂಡಂಗೆ ಬಿಡ ಬ್ಯಾಸರ... ಈಗ ನಾ ಯಾನು ಮಾಡಲಿ?” ಗುಂಡೀಲಿ ಕುಂತೋಳು, “ಮಾಡೋದೇನ, ಸಕುನಿ ಕೊಪಲ್ಲೆ ಆ ಮಲೆಯಾಳಿ ಮಾಟಗಾರ ಬಂದವಲ್ಲ. ಅಮ್ಮ ಕಯ್ಲಿ ನಿನ್ನ ಗಂಡ ನಿನ್ನೇ ಮತ್ತೆ ಒಲಿಯೋವಂಗೆ ಮಾಟ ಮಾಡು...” “ಅದಕೆ ಏಟು ದುಡ್ಡ ಕ್ಯಾಳಾನೊ ಯಾನೊ?...” “ಹಯ್ಯೋ, ಕಾರ್ ಸಾದಿಸಬೇಕು ಅಂದಮ್ಯಾಲೆ ಅದೇಟು ದುಡ್ಡಾದರೂವೆ ಮಾಡಿಸನೇ ಬೇಕು..."- ಅಂದೋಳು, ಇದ್ದಕಿದ್ದಂಗೆ ಬೆಚ್ಚಿ, “ಇನ್ನೇನವ್ವ ಗತಿ-ಊರ ಕಡಿಂದ ಯಾನೊ ಅಯ್ಯ ಈ ಕಡೀಕೆ ಬತ್ತಾ ಇರೋವಂಗದಲ್ಲ.... ನಂದಿನೂ ಮುಗಿದಿಲ್ಲ!” ಎಂದು ಚಡಪಡಿಸಿದ್ದು. ಗುಂಡಿ ಮೊರೆ ಓಣೀಲಿ ನಿಂತಿದ್ದೋಳು ದ್ರುಸ್ಟಿಸಿ ನ್ಯಾಡಿ, “ಅವದೂತ-ಅವದೂತಪ್ಪ ಬತ್ತಾ ಅವೈ... ಕುಂತುಗೊ, ಅವನ ಪಾಡಿಗೆ ಅವು ವೋಯ್ತಾನಂತೆ” ಅಂದ್ಲು. ಲಕ್ಕನೂ ಸ್ವಾಡ, ಅವದೂತಪ್ಪನೇಯ ಬತ್ತಾ ಇದ್ದದ್ದು.... ಕಚ್ಚೆ ಪಾವುಡೆ ಒಂದು ಬುಟ್ಟು ಅವನ ಮೈಮ್ಯಾಲೆ ಒಂದು ಅಂಗೈಯಗಲ ಬಟ್ಟೆ ಇನ್ನಿಲ್ಲ! ತಲೆಯಲ್ಲ ಜಡೆ ಕಟ್ಟಿದೆ. ಉದ್ದಾನೆ ಬಿಳಿ ಗಡ್ಡ ಮಾಸಲು ಬಣ್ಣಕ್ಕೆ ತಿರುಗುದೆ