________________
ಸಮಗ್ರ ಕಾದಂಬರಿಗಳು ೩೭೯ ಲಕ್ಕ ವಸಿ ವೊತ್ತ ಅಂಗೇ ಮನ್ಯಾಗಿ ನಿಂತಿದ್ದ. ಅವರಿಬ್ಬರು ಎಂಗಸರು ವೊಂಟೋದ ಮ್ಯಾಲೂವೆ, ಊರ ಸಮೀಪಿಸಕ್ಕೆ ಅವಸ್ಥೆ ದೈರ್ಯ ಸಾಲದು. ದಾರೀಲು ಯರು ಸಿಕ್ಕಾರೊ, ಏನು ಕೇಡು ಕಾದಿದ್ದದೊ ಅನನೊ ದಿಗಲು. ಇಂಗೆ ಆಡಿಚೋಡಿ ಆಡಿಕಂಡು ಅರ್ಧಮುಕ್ಕಾಲು ಗಂಟೆ ಕಳದ, ಓಣೀಲಿ ಯಾರ ಸುಳುವೂ ಇಲ್ಲ. ಇಲ್ಲ ಕಳ್ಳ ಎಚ್ಚೆ ಆಕ್ತ ಮೆತ್ತಮೆತ್ತೆ, ಮೆತ್ತ ಮೆತ್ತೆ ತಮ್ಮ ಗುಡ್ಡ ತಾವಿಕೆ ಬಂದ. ಅವನು ಇಂಗೆ ತಮ್ಮ ಗುಡ್ಡಿನ ತಾವಿಕೆ ಬರೋ ವ್ಯಾಲ್ಯಕ್ಕೆ, ಊರು ಮುಕ್ಕಾಲುಮೂರುಮೀಸೆ ನಿದ್ದೇಲಿ ಮುಳುಗಿದಂಗಿತ್ತು. ಈಗ ಮಾತ್ರ ಒಂದು ನರಪಿಳ್ಳೆಯೂ ಎಲ್ಲೂ ಕಾಣಾ ಇನ್ನಿಲ್ಲ. ಈಗ ಮೊದಲಂಗೆ ಆಗಿದ್ದ ಬೊಡ್ಡ ಜ್ವತೆಗಿದ್ರೆ, ಊರ ಬ್ಯಾರೆ ನಾಯಿಗಳು ಬೊಗಳಾಗ ಇದು ಬೊಗಳಿ ರಾದ್ದಾಂತ ಆದದೂಂತ ಎಣಿಸಿ ಬೊಡ್ಡನ್ನ ತನ್ನ ಗುಡ್ಡಲ್ಲೆ ಬಿಗ್ಯಾಗಿ ಕಟ್ಟಾಕಿ, ಕದಕ್ಕೆ ಬೀಗ ಜಡಿದು ಬಂದಿದ್ದ. ಆದ್ರೆ ತಮ್ಮ ಗುಡ್ಡ ಮುಂದುಕೆ ಬಂದು ನಿಂತಗ, ಅದರ ಮುಂದುಗಡೆ ಯಾರೊ ಬುಟ್ಟಿದ್ದ ಮೆಟ್ಟು ಕ್ವಾಡಿ, ಲಕ್ಕನ ಸಂಬ್ರಮವೆಲ್ಲ ಸೋರೋಗಿ, ಗುಡ್ಡ ವೊರಗಡೆ ಬುಟ್ಟಿರೋ ಈ ಜೋಡು ಯಾರು ?... ಯಾರಾರು ವೊಸಬರು ವಳುಗಡೀಕೆ ಬಂದಿದ್ದಾರ?, ಅನ್ನೊ ಸಂಸಯ್ಕೆ ಎಡೆಮಾಡು, ಅಂಗೇ ನಿಂತ. ವಳುಗಡೆ ಸಿವುನಿ ಜ್ವತೆ ಯಾರೋ ಗಂಡಸು ಮಾತಾಡ್ತ ಇರೋವಂಗೆ ಕಾಣಿಸ್ತದೆ.... ಅಯ್ಯ, ಏನಾರ ಅಸುರ್ಪಕೆ ;ಮಗಳೂ ಮೊಗಾನೂವೆ ಕ್ವಾಡಕ್ಕೆ ಆಸ್ಕಾಗಿ ಬಂದಿರಬೌದ?... ಇನ್ನೂ ಸಮೀಪ್ಪಿಸಿ ಕಿವಿಕ್ವಟ್ಟು ಆಲಿಸ್ಥ- ಈಗ ಸಿವುನಿ ಮಾತಾಡಿದ್ದಲು:” ವೋಗಿ ಕೇಸವಯ್ಯಾರೆ- ವೋಗಿ, ನೀವು ಇಂಗೇ ಯಾವತ್ತುವಿ ತಳಕು ವೋಡೀತಲೆ ಬತ್ತಾ ಇದ್ದೀರಿ... ಬಂದಾಗ ಒಂದು ರುಪಾಯಿ, ಎಡು ರೂಪಾಯಿ ಬಿಸಾಕಾದು. ವಾಟ ವೊಡೀತಿರಾದು..... ನಾ ಕ್ಯಾಳಿದ ಸ್ಯಾಲೆ, ಕುಪ್ಪಸ ಇನ್ನೂ ಬತ್ತಾನೆ ಅವೆ...” ನೀವು ಇನ್ನಂದ ಜನ ತಕ್ಕಂಬರದೇ ವೋದರೆ, ನನ್ನ ಗುಡ್ಡ ವಳೀಕೆ ನಿಮ್ಮ ಕೂಡ ಇಲ್ಲ– ಈ ಮಾತ ಮಾತ್ರ ನಿಮ್ಮೆದೆಗೂಡಲ್ಲಿ ಚೆಂದಾಗಿ ಬರೆದಿಟ್ಟುಕೊನ್ನಿ...” ನನ್ನ ತಂಗಿ ಬಾಯಿಂದ ಈ ಮಾತ ಕೇಳಿದಂಗೇನೆ ಲಕ್ಕಂಗೆ ರುದ್ರ ಕ್ವಾಪ ಬಂದುಬುಡು ಈಗ ಕೇಸವಯ್ಯ ಸುಸ್ವರ ಕೇಳುಸ್ತು: “ಇಷ್ಟು ದಿವಸವಾದರೂ ನನ್ನನ್ನ ನಂಬಾನೆ ಇಲ್ಲವಲ್ಲ. ಸಿವುನಿ?... ಹೋದ ಸಲ ನಾನು ಹುಣಸೂರಿಗೆ ಹೋಗಿದ್ದಾಗ ಯಾವ ಅಂಗಡೀಲೂ ಒಳ್ಳೆ