ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೦ ವೈಶಾಖ ಮಾಲು ಬಂದಿರಲಿಲ್ಲ. ಅದಕ್ಕೆ ಬರೋ ಸಂತೆಗೆ ತರೋಣಾಂತ ವಾಪಸು ಬಂದೆ. ಈ ಸರ್ತಿ ಸಪೋಲ್ಲ. ಖಂಡ್ರಾ ತಂದುಕೊಡ್ತೀನಿ...” ಅಂದು ಭಾಷೆಕೊಟ್ಟು, “ಹುಂ-ಈಗ” ಅಂತಾ ಇರೊ ವ್ಯಾಲ್ಯಕ್ಕಾಗಿ ಅಂಡೇಲಿ ಬಿಸಿನೀರು ಕುಡಿಯೋ ಅಂಗೆ ಕುದೀತಿದ್ದ ಲಕ್ಕ, ಇನ್ನು ತಡಕೋನಾರದೆ ಗುಡ್ಲು ಕದವ ದಬದಬ ತಟಕ್ಕೆ ಮುಟ್ಟಿಕಂಡ... ಗುಡ್ಲು ವಳುಗಡೆ, ಕೇಸವಯ್ಯ, ಸಿವುನಿ ಇಬ್ಬರೂವೆ ಗುಬ್ಬಲು ಪರದಾಡಕ್ಕೆ ಸುರುಮಾಡಿದ್ರು, ಇಬ್ಬರೂವೆ ಏನೇನೋ ಪಿಸುಗುಟ್ಟಿಕಂಡರು. ಲಕ್ಕ ತನ್ನ ನಡೀನ ಪಟ್ಟಿಂದ ಮಚ್ಚು ಇರಿದು ಕದ ತಳ್ಳಿ ವಳೀಕೆ ನುಗ್ಗಕೆ ಯತ್ನಿಸ್ತಾ ಇದ್ದ... ವೋಟರಲ್ಲಿ ವಳುಗದಿಂದ ಗಡಿಬಿಡಿ ಎಚ್ಚಾಯ್ತು. ಸಿವುನಿ ಹ್ಯಾಲೆ ಸರಿಮಾಡಿಕೊತ್ತ ಬಂದು, “ಅದ್ಯಾರು, ಈಟೊತ್ನಲ್ಲಿ ಬಂದು ನಮ್ಮ ಗುಡ್ಡ ಕದಾನ ಮುರೀತಿರೋರು?... ನಾ ಒಬ್ಬಳೇ ಇದ್ದೀಂತ ಗುಡ್ಲುವಳೀಕೆ ನುಗ್ಗಕ್ಕೆ ಬಂದಿದ್ದೀರಾ?- ನಾಯೇನು ನಿಮ್ಮ ಬಗ್ಗಿ ಎಣ್ಣಲ್ಲ, ತಿಳಿಕ್ಕೊ... ಅದ್ಯಾಕಂಗೆ ಒಂದೇ ಸಮನೆ ಕದವ ಆಕ್ಕೊಂಡು ದಬ್ಬಿರಿ?- ವಸಿ ತಡಕನ್ನಿ, ನಾನೇ ಕಡ ತೆಗೀತೀನಿ. ಸುಮ್ಮೆ ಕಡಯಾಕೆ ಮುರುದೀರಿ!...” ಬಾಗ್ಲ ತಗದು ಸ್ವಾಡಿದ್ರೆ-ಅಣ್ಣ ಲಕ್ಕ... ಒಡನೆಯೆ, “ಅಣ್ಣ...” ಚೀರಿದಳು. ವೋಷ್ಟರಲ್ಲಿ ಸಿವುನಿ ಇಂಡುಗಡಿಂದ ಕಳ್ಳೆಜ್ಜೆ ಆಕ್ತ ಮೆತ್ತಗೆ ಕೆಸವಯ್ಯ ನುಸ್ಸು ಪರಾರಿಯಾಯ್ತ ಇದ್ದದ್ದ ಕಂಡ ಲಕ್ಕ. ಅಲ್ಲು ಮುರಿ ಕಡೀತ, ಮಚ್ಚುಗತ್ತಿ ಎತ್ತ ಇಡುದು ಅಮ್ಮ ಅಟ್ಟಿಸ್ಕಂಡು ಗಾನ ಅಂತ, ಲಕ್ಕೆ ನುಗ್ಗಕ್ಕೊಂಟ, ವೋಟರಲ್ಲಿ ಲಕ್ಕನ್ನ ಕ್ವಾಡ್ ಗಳಿಗೇಲಿ ತಬ್ಬಿಬ್ಬಾಗಿ ನಿಂತಿದ್ದ ಸಿವುನಿ, ತಟಕ್ಕೆ ಅಮ್ಮ ಅಡ್ಡಗಟ್ಟಿ ನಿಂತು. “ಮೊದ್ಲು, ನನ್ನ ಕ್ವಚ್ಚಾಕಿಬುಟ್ಟು ಮುಂದೆ ನೀ ಕಾಲಿಡು” ಅಂದಾಗ, ಲಕ್ಕ ಬೆರುಗಾಗಿ ಕೈ ಸೋತು, - “ನಿಂಗೇನು ಬಂದಿತ್ತೇ ಕೇಡು-ಇಂಗೆ ಆ ಅರುವಯ್ತ ಕುಟ್ಟೆ ಆದ್ರೆ ಮಾಡಕ್ಕೆ?” ಅಂದ. ಸಿವುನಿ ಮೊಕದಲ್ಲಿ ಚಾಮುಂಡಿಯೇ ಮೂಡಿದ್ದು, ಬಾಂಡಲೀಲಿ ಮೆಣಸಿನಾಯಿ ಫಟಫಟ ಸಿಡಿಯೊ ಅಂಗೆ ಸಿಡಿದ್ದು. “ಏನಂದಿ?- ನಂಗೇನು ಬಂದಿತ್ತು ಕೇಡು ಅಂದ್ಯಾ?... ಇನ್ನೆನ ಬರಬೇಕಾಗಿಲ್ಲ. ಅಪ್ಪಯ್ಯ?- ನೀನು ಗ್ರಾಸ್ತ, ಆ ಆರುತಿ ತಂಟೆಗೋಗಿ ಊರ ಬುಟ್ಟು ಕಡದೋದೆ. ಅವ್ವನ್ನೂ ಪಳೇಗೌಮಾರಿ ತತ್ತಿಗಂಡೋಯ್ತು. ಅಯ್ಯ