________________
ಸಮಗ್ರ ಕಾದಂಬರಿಗಳು ೩೮೧ ಇದ್ರೂವೆ, ನಮ್ಮ ಬಾಗಕ್ಕಿಲ್ಲದಂಗೆ, ಎಲ್ಲೊ ಕುಡುದು, ಎಲ್ಲೊ ಬಿದ್ದು, ನಮ್ಮ ಗುಡ್ಡನ್ನೇ ಸೇರಾ ಇಲ್ಲ.... ನಾನೊಬ್ಬಳೆ ಇಲ್ಲಿ ಈ ಕೈಕೂಸ ಮೊಡ್ಡಿಗೆ ಕಟ್ಕಂಡು ಎಂಗೆ ಬದುಕಬೇಕು?... ನನ್ನ ಎದೇಲಿ ಬ್ಯಾರೆ ಹಾಲು ಸುಂಡೋಗಿ ಮೊಗ ಗಳಿಗೊಂದು ಸಲ ಕಜೆ ತಗೀತದೆ. ಅಂಗೂವೆ ಕೂಲಿಗೆ ವೋಯ್ತಿದೆ. ಆದರೆ ಮೊಗ ಕಜೆ ತಗೀತಿದ್ದ ನ್ಯಾಡಿ, ಒಂದು ಸರ್ತಿ ಕರದೋರು ಇನ್ನೊಂದು ಸರ್ತಿ ಕಂಬಕ್ಕೆ ಕರೀತಿರಿಲ್ಲ... ಇಂಗಾಗಿ.” ಸಿವುನಿ ತನ್ನ ಮಾತ್ರ ಇನ್ನೂ ಮುಗಿಸೇ ಇನ್ನಿಲ್ಲ. ವೋಟ್ರಲ್ಲಿ ಲಕ್ಕನ ಕಣ್ಣು ಒಂದು ಸಲ ಗುಡ್ಡ ವಳುಗಡೆ ತಡಕಾಡು, ಕೂಸು ವಕ್ಕಡೀಕೆ ನಿದ್ದೆ ಮಾಡ ಬಿದ್ದಿತ್ತು. ತನ್ನ ವಳುಗಿನ ಪಿರೀತಿನೆಲ್ಲ ತುಂಬಿ ತುಂಬಿ ಒಂದ್ಬಲ ಆ ಕಂದ ಕಣ್ಣಲ್ಲಿ ಮುದ್ದಾಡಿ, ತಾನು ತಂದಿದ್ದ ಬಿಸ್ಕತ್ತು ಮೊಟ್ಟ, ಗಿಲಕಿಗಳ ಕೆಳಕ್ಕೆ ಬಿಸಾಕಿ, ಮುಂಬೈ ಒಂದು ಮಾತು ಆಡ್ಡೆ, ಸಿವುನೀಯ ಪುನಾ ಕತ್ತೆತ್ತೂ ಕ್ವಾಡ್ಡೆ, ಕಣ್ಣೀರು ಕಚ್ಚಿ, ಲಕ್ಕ ತಮ್ಮ ಗುತ್ತು ಮುಂದುಗಡಿಂದ ಕಾಲು ಕಿತ್ತ... ಸಿವುನಿ ಗುಡ್ಡು ಬಾಗ್ಲಲ್ಲಿ ನಿಂತು, “ಅಣ್ಣಾ-* ಅಂತು ಕೂಗಿದ್ದು.... ಗುಡಿ ವಳುಗಡೆ ಗಂಟೆ ಬಾರಿಸ್, ಏಟೋ ವೊತ್ತು ಅದರ ಸಬ್ದ ಕೇಳ್ತಾನೆ ಇರೋವಂಗೆ, ಲಕ್ಕನ ಅಂತರಾಳಲ್ಲಿ ಹಾದಿ ಉದ್ದಕೂವೆ, ತಂಗಿ, “ಅಣ್ಣಾ- ಅಂತ ಕೂಗದ್ದು, ಬೋಕಾಲ ವೊರೀತಾನೆ ಇತ್ತು... ಇಂದ್ರೆ ತನ್ನ ತಂಗಿ ಸಿವುನಿ, 'ಅಣ್ಣ' ಅಂದ್ರೆ ಇಗ್ಗಿ ಈರೇಕಾಯಿ ಆಯ್ತಿದ್ದ ಲಕ್ಕ. ಆದ್ರೆ ಈಗ?... ಅಯ್ಯೋ, ನನ್ನ ತಂಗಿ ಕೆಟ್ಟೋದ್ಲು. ಕಂಡಕಂಡೋರ್... ತೂ-ಅಂತಾವ ಎಜ್ಜೆ ಎಜ್ಜೆಗೂ ಅವ್ರ ಜೀವ ಮುಕ್ತಾ ಇತ್ತು.... ಸಿವುನಿ ಎಂಗವಳೆ ಅಂತ ಅವೊತ್ತು ತಾನು ಕಾಳಿದಾಗ, ದ್ಯಾವಾಜಿ ಯಾಕೆ ಒಂದು ತರಾ ಮಾತಾಡಿದ್ದು ಅನ್ನೋದು ಈಗ ಅವಸ್ಥೆ ಅರ್ತವಾಗ ಅದೆ!... ಯಾವುದು ಯೇನಾರ ಆಗ್ಲಿ, ನನ್ನ ತಂಗಿ ಸಿವುನಿ ಈ ಸ್ತಿತಿಗೆ ಬತ್ತಾಳೇಂತ ನಾನು ಸೊಪ್ಪನದಲ್ಲೂ ಎಣಿಸಿರನಿಲ್ಲ.... ಚಿಕ್ಕಂದಿನಲ್ಲಿ ನಾನು ಸಿವುನಿ ಇಬ್ಬರೂವೆ ಒಂದೆ ತಣಿಗೇಲಿ ಉಣ್ಣುತ್ತಿದ್ದೊ. ಒಂದೇ ಚಾಪೇಲಿ ವತ್ತೊತ್ತಿಗೇ ಮನಗುತ್ತಿದ್ದೂ, ಅವಳು ಯವಾಗೂವೆ ನನ್ನ ಮ್ಯಲೆ ಒಂದು ಕಾಲೆತ್ತಿ ಅಡ್ಡಗಾಲು ಆಕ್ಕಂಡೇ ನಿದ್ದೆ ಮಡ್ತಿದ್ದು. ಒಂದೊತ್ನಲ್ಲಿ ನಂಗೆ ಎಚ್ಚರಾಗಿ ಅವಳ ಕಾಲ ವಚೋರಿಕೆ ಸರಿಸಿ ಇಟ್ಟು ಮನಗಿದೆ, ಪನಾ ಅವಳ ಪುಟ್ಟ ಕಾಲು ತುಸ ವ್ಯಾಲ್ಯದಲ್ಲೆ ನನ್ನ ನಡೀನ ಮ್ಯಾಲೆ ಅಜರಾಯ್ತಿತ್ತು..... ಬಿಡುವು ಸಿಕ್ಕದಂಗೆ ನಾವಿಬ್ರೂವೆ ಚವಕಾಬಾರ ಆಡ್ತಿದ್ದದ್ದೇಟು! ಅಣೆಕಲ್ಲು ಅಡಿದ್ದೇಟು! ಉಲಿಮನೆ ಆಟ ಆಡಿದ್ದೇಟು!