ಪುಟ:ವೈಶಾಖ.pdf/೩೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಸಮಗ್ರ ಕಾದಂಬರಿಗಳು ೩೮೩ ದ್ಯಾವರ ಮ್ಯಲೆ ಭಾರ ಆಕೆ ಆ ಮರ ಅತ್ತಿದೆ. ರೆಂಬೆ ಮ್ಯಾಲೆ ತೆವಳಿ ಕಂಡೋಗಿ, ಒಂದು ಗೂಡ ಬಿಚ್ಚಿಗಂಡು ತಂದೇ ಬುಟ್ಟೆ..... ಸಿವುನಿ ಕಾಕು ಅಕ್ಕಂಡು ವೋಟಗಲಕೂ ಕುಣಿದಾಡಿಬುಟ್ಟು. ವೋಟರಲ್ಲಿ ನಾ ಕೈಲಿ ಇಡಿದಿದ್ದ ಗೂಡ್ಡ ವಳೀಕೆ ಮೊಕ ಆಕಿ ಕ್ವಾಡಿದ ನಾನು, ಮಳೆ ಎರಚಲು ವಳೀಕೆ ಬಡೀದಂಗೆ ಕೆಳೀಕೆ ಮುನ್ನ ಬಾಯಿ ಮಾಡಿ, ಆ ಗೂಡ ನೆಯ್ತು, ತಲೆ ಕೆಳೀಕೆ ಮಾಡಿ, ಆ ಗೂಡ ಮರದ ರೆಂಬೆಗೆ ನ್ಯಾತು ಆಕಿದ್ದ ಆ ಗಿಝಗನ ಹಕ್ಕಿ ಕರಾಮತ್ತೆ ಬೆರುಗಾದೆ. ಆದ್ರೆ ಗೂಢ ವಳುಗಡೆ ಅದು ಮೊಟ್ಟೆ ಆಕಕ್ಕೆ, ಮರಿ ಮಾಡಕ್ಕೆ ನೇಯ್ದಿದ್ದ ಅಗಲಾದ ಜಾಗ ಕಂಡು ನಂಗೆ ಇನ್ನೂ ಚೊಚಿಗೆ ಆಯ್ತು- ಅದರ ವಳಗಡೆ ಕಣ್ಣಾಯ್ಲಿ, ಇನ್ನೂ ಸುಕ್ಸ್ನಾಗಿ ನ್ಯಾಡಿದಾಗ, ಆಗ್ಗೆ ವಳುಗಡೆ ಮರಿಗಳು ಬಾಳಬಾಳ ಮೆತ್ತೆ ಕಿಚಪಚ ಅಂತಿದ್ದದ್ದು ಕೇಳುಸ್ತು... ವೊಟೇ ಅಲ್ಲ, ವಳುಗಡೆ ಆ ಮರಿಗಳೆ ಬೆಳಕು ಕಾಣಲಿ ಅಂತ, ಮಿಣಕುಹುಳುಗೋಳ ಕೆರೆ ಅಂಗಳದಿಂದ ಕಚ್ಚಿಗಂಬಂದು ವಳುಗಡೆ ಅಲಲ್ಲೆ ಅಲ್ಲಲ್ಲಿ ದೀಪ ಕತ್ತಿಸಿದಂಗೆ ಇಟ್ಟಿತ್ತು ಆ ಗಿಜಗನ ಹಕ್ಕಿ'... ನಾನು ಇಾಡಿದ ಮ್ಯಾಲೆ, ಗಿಜಗನ ಗೂಡು ಸಿಕೂಂತ ತಪ್ಪಾಳೆ ತಟ್ಟಂಡು ರಕುಪ್ಪುಳಸ್ತಿದ್ದ ಸಿವುನಿಯೂ ಬಂದು ಆ ಗೂಡ್ಡ ವಳೀಕೆ ನನ್ನಂಗೆ ಬೊಗ್ಗಿ ಸ್ವಾಡಿದ್ದು. - “ಓ, ಪುಟಪುಟಾಣಿ ಮರಿಗಳು, ಎಟು ಚೆಂದಾಗವೆ?.... ಮಿಣಕುಳ ಎಂಗೆ ಪಿಣಿಪಿಣೀಂತಾ ಅವೆ. “ನಂಗಿಂತಲೂವೆ ಕುಸಿಪಟ್ಟು ಕುಣದಾಡಿದ್ದು... “ಅಂಗಾರೆ ಇನ್ನೂ ಈ ಗೂಡ, ನಮ್ಮ ಗುತ್ತಿಗೆ ತಕ್ಕಂಡೋಗಿ ನ್ಯಾತಾಕಳಾವ?” ಕ್ಯಾಳಿದೆ. ತಟಕ್ಕೆ ಸಿವುನಿ, ಕಣ್ಣ ವೋಟಗಲಕೂ ಅಗಲಿಸಿ, “ಬ್ಯಾಡಪ್ಪಾ ಬ್ಯಾಡ. ನಾನು ತಕ್ಕೊಂಡೋಗಿ ಗುದ್ದೊಳಗೆ ಇಟ್ಕಂಡರೆ, ಪಾಪ ಈ ಮರಿಗಳೆ ಅಲ್ಲಿ ಗುಟುಕು ಕ್ವಡೋರು ಯಾರು?... ಬ್ಯಾಡ, ಬ್ಯಾಡಈಗ ನಾನು ಕ್ವಾಡಾಯ್ತು. ನೀನು ಇದ್ದ ತಕ್ಕೊಂಡೋಗಿ ಮೊದ್ದು ಅದು ಎಲ್ಲಿ ನ್ಯಾತಾಡಿತ್ತೊ ಅದೇ ಜಾಗ್ನಲ್ಲಿ ನ್ಯಾತಾಕುಬುಟ್ಟು ಬಾ” ಅಂದ್ಲು. “ನೀನೊಳ್ಳೆ ಗ್ಯಾನ ಕೆಟ್ಟೋಳು ಕಣೆ” ಅಂತ ಗೊಣಗಿ, ಆ ಮರದತ್ರ ವದೆ. ಕೆಳಗಡೆ ನಿಂತು ಕತ್ತ ಅಂತು ಮ್ಯಾಕೆ ಸ್ವಾತ್ತೆ. ಕೈಕಾಲು ವದರು ಬಂದುಬುಡ್ತು! ಅಯ್ಯಯ್ಯಾಪ್ಪಾಂತ ಬೇಳುಗರಿದು, ಇಂದ್ರೆ ಓಡೋಡ್ತ ಬಂದೆ.