________________
- ೨೪ ವೈಶಾಖ
ಅಡಿಕೆ ಮರಗಳಿಗೂ ವೀಳೆಯದೆಲೆ ಹಂಬುಗಳಿಗೂ ಕಟ್ಟು ಬಿಗಿಯುವ ಕಾಠ್ಯ ಮುಗಿಯುತ್ತ ಬಂದಿತ್ತು. ಕೊನೆಯ ಒಂದೆರಡು ಮರಗಳಿಗೆ ಅವರನ್ನೂ ಕಟ್ಟು ಬಿಗಿಯುತ್ತಿರುವಾಗಲೆ, “ಮಾಮ, ಮಾಮ- ನಾನು ತೋಟಕ್ಕೆ ಬಂದಿದೀನಿ” ಎನ್ನು ಎಳೆ ವಯಸ್ಸಿನ ದನಿಯನ್ನು ಕೇಳಿ ಕೃಷ್ಣಶಾಸ್ತ್ರಿಗಳು ಹೊರಳಿ ನೋಡಿದರು, ಲಂಗವನ್ನು ಮೇಲೆತ್ತಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬರುತ್ತಿದ್ದ ಸರಸಿ, ಅವಳನ್ನು ಹಿಂಬಾಲಿಸಿ ತಲೆ ತುಂಬಾ ಸೆರಗು ಹೊದೆದ ರುಕ್ಕಿಣಿ- ಇಬ್ರನ್ನೂ ಗಮನಿಸಿ, “ಇವಳನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ರುಕ್ಕಿಣಿಯನ್ನು ಪ್ರಶ್ನಿಸಿದರು. “ಹಟಮಾರಿ, ಎಷ್ಟು ತಡೆದರೂ ಕೇಳಲಿಲ್ಲ” ತಪ್ಪು ಮಾಡಿದವಳಂತೆ ರುಕ್ಕಿಣಿ ಮೆಲ್ಲನೆ ಉಸಿರಿದಳು. ಸರಸಿ ಈ ರೀತಿ ಇಚ್ಛೆ ಬಂದಾಗ ತನ್ನ ತಾಯಿಯೊಡನೆಯೂ ರುಕ್ಕಿಣಿಯೊಡನೆಯೂ ತೋಟಕ್ಕೆ ಧಾವಿಸುತ್ತಿದ್ದುದು ಇದೇ ಮೊದಲೇನಲ್ಲ. ಅವಳು ಬಂದಾಗಲೆಲ್ಲ ಶಾಸ್ತ್ರಿಗಳು ಹುಸಿ ಬೇಸರ ತೋರಿದರೂ ಅನಂತರ ಅವಳನ್ನು ಮುದ್ದಿಸುತ್ತಿದ್ದುದರಿಂದ ಸರಸಿಯು ಅವರ ಮಾತಿಗೆ ಕಿಂಚಿತ್ತೂ ಸೊಪ್ಪು ಹಾಕದೆ, ತೋಟದಲ್ಲೆಲ್ಲ ಸಡಗರದಿಂದ ಓಡಾಡುವಳು, ಆಳುಗಳ ಕೆಲಸವನ್ನು ಸರಸಿ ನೋಡುತ್ತ ನಿಂತಾಗ ಮನೆಗಾಗಿ ರುಕ್ಕಿಣಿಯು ವೀಳೆಯದೆಲೆಗಳನ್ನು ಬಿಡಿಸಲು ಪ್ರಾರಂಭಿಸಿದರು. ಶಾಸಿಗಳು ಕೊನೆಯ ಮರದ ಹಂಬಿಗೆ ಕಟ್ಟು ಬಿಗಿಯುತ್ತಿರುವಾಗ ತೋಟವನ್ನು ಪ್ರವೇಶಿಸಿದರು ವೆಂಕಟೇಶ ಜೋಯಿಸರು. “ಇನ್ನು ಮುಗೀಲಿಲ್ಲವೆ ತೋಟದ ಕೆಲಸ?” ಎಂದವರೆ “ಹಾಕಿಕೊಳ್ಳಲಿಕ್ಕೆ ಒಂದೆರಡು ಎಲೆ ಬಿಡಿಸಿಕೊಳ್ಳಲೆ?” ಎನ್ನುತ್ತ, ಶಾಸ್ತಿಗಳ ಒಪ್ಪಿಗೆಗೆ ಕಾಯದೆ, ಸಮೀಪದ ಮರಕ್ಕೆ ಬಳಸಿದ್ದ ಹಂಬಿನಿಂದ ನಾಲೈದು ವೀಳೆಯದೆಲೆಗಳನ್ನು ಕಿತ್ತು, ಸೊಂಟಕ್ಕೆ ಸಿಕ್ಕಿದ್ದ ಬಟ್ಟೆಯ ಚೀಲದಿಂದ ಗೋಟಡಿಕೆ ತೆಗೆದು ಬಾಯಿಗೆ ಎಸೆಯುತ್ತ, ಹಿತ್ತಾಳೆಯ ಉದ್ದನೆ ಸುಣ್ಣದ ಡಬ್ಬಿಯಿಂದ ಸುಣ್ಣವನ್ನು ಹೆಬ್ಬೆರಳಿನ ಉಗುರಿನಿಂದ ಮೀಟಿ ತೆಗೆದು ಎಲಗೆ ಹಚ್ಚುತ್ತಿರುವಂತೆಯೆ, ಶಾಸ್ತ್ರಿಗಳು ಬಿದಿರೇಣಿಯಿಂದ ಕೆಳಗಿಳಿದು ಕೊಳದತ್ತ ಹೆಜ್ಜೆ ಹಾಕುವುದನ್ನು ಗಮನಿಸಿ, ತಾವು ಅವರನ್ನು ಹಿಂಬಾಲಿಸಿದರು. ಶಾಸ್ತ್ರಿಗಳು ಕೊಳದ ಮೆಟ್ಟಿಲುಗಳನ್ನಿಳಿದು ಕೈಕಾಲಿನ ಕೆಸರು ತೊಳೆದು ಮೇಲೆ ಬರುವವರೆಗೆ ವೆಂಕಟೇಶ ಜೋಯಿಸರು ಮೇಲುಗಡೆಯ ಮೆಟ್ಟಿಲು