ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೪ ವೈಶಾಖ ಸಿವುನಿ, ಚೋಚಿಗಪಡ-“ಯಾಕಣ್ಣ ಇಂದ್ರೇ ಬಂದೆ?” ಕ್ಯಾಳಿದ್ದು. ಅವಳ ಕ್ಯಾಳಿ ನಾ ಯೇನು ಜಬಾಬು ಕ್ವಡದೆ, “ಬಾ ಇಲ್ಲಿ” ಅಂತ ಅವಳ ಕೈ ಇಡುದು ಆ ಮರದ ಸಮೀಪಕ್ಕೆ ಕರಕೊಂಡೋಗಿ, “ಮಾಕೆ ಅಂತುಗಂಡು ಕ್ವಾಡು” ಅಂದೆ. ಸಿವುನಿ ಕತ್ತೆತ್ತಿ ಅಂತುಗಂಡು ಕ್ವಾಡಿದ್ದಲು. ಒಂದು ಸರ್ಪ ರೆಂಬೆಮ್ಯಾಲೆ ಪರಿದಾಡಿಕಂಡು ಇನ್ನೊಂದು ಗೀಜಗನ ಗೂಡ ವಳೀಕೆ ಬಾಯಕ್ಕಿತ್ತು. ಆ ದುಸ್ಯವ ಸ್ವಾಡಿದ್ದೇ ತಡ. “ಅವ್ವಾಣೆ...” ಅಂತ ಚೀರ, ವೋಟು ದೂರಕೆ ಅಲ್ಲಿಂದ ವಟವೋಡದ್ದು. ನಂಗೆ ಯೇನು ಮಾಡಬೇಕೂಂತ ತಿಳೀನಿಲ್ಲ. “ಬಾ ಸಿವು, ನಮ್ಮ ವೊಲಗೇರಿಗೋಗಿ ಯಾರಾರ ದೊಡ್ವರ ಕರಕಂಬರಾವ” ಅಂತೇಳಿ, ಅವಳ ಅಲ್ಲಿಂದ ವೋಂಡಿಸಿಕಂಬಂದೆ... ನಾವು ಕೆರೆ ಓಣೀಗೆ ಬರೋ ವೋಟರಲ್ಲಿ ನಮ್ಮ ದೊಡ್ಡಮ್ಮ ಮಗ ಮಟ್ಟಾರಿ ಬತ್ತ ಇದ್ದ. ಅವ್ರು ನಂಗಿಂತ ಏಳೆಂಟು ವರ್ಸ ದೊಡೇನು. ದೈಯ್ಯಾರ. ಎಂತಾ ಹಾವನೂ ನಿಸೂರಾಗಿ ವೊಡದಾಕೋನು! ನನ್ನ ಕೈಲಿದ್ದ ಗೀಜಗನ ಗೂಡ ಕಂಡು, “ಇದೇನ ಲಕ್ಕ- ಈಗೀಜಗ ಗೂಡ ಗುತ್ತಿಗೆ ತಕ್ಕಂಡೋಯಾ ಇದ್ದೀರೇನೊ?- ಸಿವುನಿಗೆ ಆಸೆಯಾಗಿಬುಡ್ತು ಅಂತ ಕಾಣಿಸ್ತದೆ...” ಅಂತ ಕ್ಯಾಳ. ನಾನು ನಡುದ ಸಂಗೀನೆಲ್ಲ ವಾಕವಾಗಿ ಯೋಳೆ. ಅನ್ನು ನಮ್ಮ ಭಯವ ಲೆಕ್ಕಕ್ಕೆ ತಕ್ಕಳ್ಳದೆ, “ಈಟೇಯ?- ಬಾ, ಅದೆಲ್ಲಿದ್ದದು ಮರ, ತೋರಸು” ಅಂತ ನಮ್ಮ ವಂದಿಗುಟ್ಟೇನೆ ಬಂದ... ಮಸ್ತಾಗಿ ಗೂಡುಗಳು ನ್ಯಾತಾಕಿದ್ದ ಮರದ ತಾವಿಕೋಗಿ ನಿಂತೆ. ನಮ್ಮೆದೆ ಝಲ್ ಅಂದೋಯ್ತು. ಆ ಘಟಸಪ್, ಒಂದು ಗೂಡೂ ಮರಿಗಳ ಸಾಫ್ ಮಾಡಿ, ಅಂಗೆ ಹರೀತಾ ಹರೀತಾ ಇನ್ನೊಂದು ಗೂಡೂ ಮರಿಗಳ ಸಾಫ್ ಮಾಡಾದರಲ್ಲಿತ್ತು... ಅಣ್ಣ ನಮ್ಮ ದೂರಕೆ ಕರಕೊಂಡೋಗಿ ನಿಲ್ಲುಸಿ. “ಎದರಿಕೊಬ್ಯಾಡಿ, ಅಮ್ಮ ನಿಮ್ಮ ತಾವಿಕೆ ಬರೊಗಂಟ ಬುಡಕ್ಕಲ್ಲ” ಅಂದು ಪುನಾ ಮರದ ಮರದ ಸಮೀಪದ. ಆದ್ರೆ ಅವನ ಕೈಲಿದ್ದ ಕೋಲು ಆ ರಂಬೆ ಎತ್ತರಕೆ ಎಟಿಕಿಸ್ತಾ ಇನ್ನಿಲ್ಲ. ಅದಕೆ ಮರಾನೆ ಅತ್ತಕ್ಕೆ ಸುರು ಮಾಡ್ಡ... ನಾವು ದೂರದಿಂದ ನ್ಯಾಡ್ತಾನೇ ಇದ್ದೂ...