________________
ಸಮಗ್ರ ಕಾದಂಬರಿಗಳು ೩೮೭ ಲಾಟೀನು ಬೆಳಕಲ್ಲಿ ಕೈದೊಣ್ಣೆಯ ಕುಟ್ಟಿಕುಟ್ಟು ಸದ್ದು ಮಾಡ್ತ ಕಾಡುಹಾದೀಲಿ ಲಕ್ಕ ಸಾಗ್ಲ. ಜೀರುಂಡೆಗಳ ಜೀರ್ ಜೀರ್ ಸಬ್ದ ಆ ಅರಣ್ಯಪ್ರದೇಷ್ಣ ಒಡಲೆಲ್ಲ ತುಂಬಿಕಂಡಿತ್ತು..... “ಅಯ್ಯನ್ನ ಸ್ವಾತ್ತೆ ಬಂದುಬುಟ್ಟೆಲ್ಲ; ಅಯ್ಯನ್ನ ಸ್ವಾತ್ತೆ ಬಂದುಬುಟ್ಟಿಲ್ಲ. “ಅವ್ರ ಜೀವ ಉಲ್ಕಕತ್ತು... ರಾಚನ ಈಚಲು ಪ್ಯಾಟೆ ವೋಗಬೇಕೂಂತ ಏಟೋ ಸಲ ಮನಸುಮಾಡ್ಡ. ಆದ್ರೆ, ಅಯ್ಯ ನನ್ನ ಸ್ವಾಡಿದ್ರೆ-ನನ್ನ ಬೊಯ್ತಿದ್ದ; ಇಲ್ಲ, ಆಳಿದ...”ಈಚೀಚೆ ಅಂಗೆ ಬೊಸ್ಕೊ ಸಕುತಿನೂ ವೊಂಟೋಗದೆ. ಸುಮ್ಮಕೆ ಕುಂತು ಅಳೋದೊಂದೇಯ ಈಗ ಅವ್ರ ಕೈಲಿ ಕಿಸಿಯೋದು”- ಯಾವುದೊ ಮಾತಿನ ಸಂದೀಲಿ, ದ್ಯಾವಾಜಮ್ಮ ಯೋಳಿದ್ದು ಗ್ಯಾಪನ ಆಯ್ತು..... ನನ್ನಯ್ಯ ಬೊಯ್ದಿದ್ದರೆ ತಾನೆ ಯೇನು-ಅದ್ರಿಂದ ನಂಗೇನು ಮುಕ್ಕಾಯ್ತಯ್ತು?... ಆದ್ರೆ ಆ ದೊಡ್ಡ ಗಂಡಸು ಆಟುದ್ದ ಸರೀರದ ಚೋಟುದ್ದ ಮಾಡಿ ದುಕ್ಕಡಿಸಿ ದುಕ್ಕಡಿಸಿ ಅಳೋದ ಮಾತ್ರ ನಾ ಸೈಸನಾರೆ!... ಲಕ್ಕ ಇಂಗೆ ಚಿಂತೆ ಮಾಡ್ತ ವೋಯ್ತಿದ್ದಾಗ, ಇದ್ದಕಿದ್ದಂಗೆ ಎಚ್ಚರಿಕ ದೂರದಲ್ಲಿ ಕಾಡಿನ ಮೊಟ್ಟೆ ವಳುಖ್ಯಿಂದ ಜ್ವಾಲೆ ಕಿತ್ತುಗತ್ತು. ತಟಕ್ಕೆ ಲಕ್ಕಂಗೆ ಅದು ಕೊಳ್ಳಿದೆವ್ವಾನೇ ಇರಬೇಕು ಅನ್ನಿಸ್ತು, ಅತ್ತಾ ಜನ ಯೋಳೋವಂಗೆ ಮುನೀಶ್ವರ ಸಂಚಾರ ವೋಂಟಿದ್ದಾನೊ?- ಚಿಕ್ಕೋನಾಗಿದ್ದಾಗ ಲಕ್ಕ ದೆವ್ವ, ಪಿಚಾಚಿ ಅಂದ್ರೆ ಎದುರಿಕೊತ್ತಿದ್ದು ದಿಟ. ಆದ್ರೆ ಈಗ ಇದ್ಯಾವುದಕ್ಕೂ ಎದರೂ ಗಂಡಲ್ಲ!.... ಇದು ನಂಗೇನು ಮಾಡಾದು ಅಂತ ಧೈರ್ಯವಾಗಿ ಮುಂದುವರೀತಿದ್ದ. - ಭೂಗಿಲೆದ್ದ ಬೆಂಕಿ ಜ್ವಾಲೇಯ ಸ್ವಾಡ, ಲಕ್ಕ ಸಾಗ್ತಾ ಇರೋನೂವೆ ಒಂದು ಮರದ ಬೊಡ್ಡೆಮ್ಯಾಲೆ ಒಬ್ಬ ಮನುಸ ಕುಂತಿದ್ದದ ಕಂಡು ಬೆಚ್ಚ, ಇದು ಭೂತದ ಚಾಷ್ಟ್ರ ಇರಬೌದ? ಅಂತ ಅವನ ಮನಸು ಅಳುಕು. ಆದ್ರೆ ಅತ್ರಕ್ಕೆ ಬತ್ತಿದ್ದಂಗೆ, ಅವ್ರು ದೆಯ್ಯವೂ ಅಲ್ಲ ಪಿಚಚಿಯೂ ಅಲ್ಲನಮ್ಮೂರ ಬುಡುಬುಡಿಕೆ ದಾಸಯ್ಯ ಅಂತ ಗ್ವತ್ತಾಗಿ, ಲಕ್ಕಂಗೆ ಸರಾಗ್ವಾಗಿ ಉಸಿರಾಡುವಂಗಾಯ್ತು!. “ಈಟೋತ್ನಲ್ಲಿ ಇಲ್ಲೇನು ಮಾಡ್ತ ಕುಂತಿದ್ದೀರಯ್ಯ?” ಅಂತ ಸಾಜವಾಗಿ ಕೇಳ. “ಸ್, ಗಟ್ಯಾಗಿ ಮಾತಾಡಬ್ಯಾಡ, ಹಾಲುಹಕ್ಕಿ ನುಡೀತಾ ಅದೆ. ನಾನು ಜಾಬು ಕಡ್ತಾ ಇದ್ವಿ...” ಅಂದ.