ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೮೯ ಆಗಬೇಕಾಗಿತ್ತೇನೊಪ, ಆ ಪೊರೆ ಬುಟ್ಟೋದ ಸರ್ಪವ ಕಚ್ಚಿಗಂಬರಬೇಕಾಗಿತ್ತು. ಆಗ ನಿನ್ನ ಸಾಸ ಮೆಚ್ಚಿಗಂಡು ಬೇಸ್ ಅಂತ ನಿಂಗೆ ಸಾಬಾಸ್‌ಗಿರಿ ಕೂಡಿದೆ” ಅಂದು ನಕ್ಕ. ಬೊಡ್ಡ, ಲಕ್ಕ ಯೋಳಿದ್ದ ಅರ್ತ ಆಗ್ಗೆ, ಅವನ್ನೇ ಕತ್ತು ಕೊಂಕುಸ್ತಾ ಸ್ವಾತ್ತು ಮೂಢಲ್ಲಿ ಸ್ವಾಮಿ ಆಗ್ಗೆ ಆಳುದ್ದ ಏರಿದ್ದ. ಮರ ಗಿಡ ಆಸುರೆಲೆ ಮ್ಯಾಲೆಲ್ಲ ಇಬ್ಬನಿ ಬಿದ್ದಿತ್ತು. ಸ್ವಾಮಿ ಮೊಕ ಕಾಥೆದ್ದಂಗೆ ಆ ಇಬ್ಬನಿ ಫಳಫಳಳಾಂತ ವೊಳೆಯಕ್ಕೆ ಸುರು ಆಯ್ತು..... ಲಕ್ಕ ಇಂಗೆ ಕಾಡಲ್ಲಿ ವೊಯ್ತಾ ಇರೋನೂವೆ, ಉಚ್ಚೆಗೆ ಅವಸರಾಗಿ ಒಂದು ಮೆಳೆ ಮೊಗ್ಗಲಿಗೋಗಿ ಕುಂತ. ಆ ಮೆಳೆ ಪಕ್ಕದಾಗೊ ಒಂದು ಬೊಸರಿ ಮರ. ಆ ಮರದಿಂದ ಒಂದು ಕಟ್ಟಿರುವೆ ಗೊದ್ದಗಳ ದೊಡ್ಡ ದಂಡು ಸಾಲುಗಟ್ಟಿ ಎತ್ತಾಗೊ ವೊಂಟಿತ್ತು. ಆ ದಂಡು ಲಕ್ಕ ಕುಂತಿದ್ದ ಜಾಗದಲ್ಲಿ, ಅವನ ಕಾಲಿ ಸೋಕೋವಷ್ಟು ಸಮೀಪಾಗಿ ಅರೀತಿತ್ತು. ಆದ ಕಂಡು ಲಕ್ಕ ದಿಗ್ಗನೆದ್ದು ಅಲ್ಲಿಂದ ವಸಿ ಅಂತರಜೋಗಿ ಕುಂತ, ಇಂದ್ರೆ ಇಂತದೆ ಒಂದು ಕರಿಗೊದ್ದ ಅವನಕಾಲ ಕಚ್ಚಿತ್ತು. ಏಟು ವೊದರಿದರೂ ಬುಡದೇ, ಕೊನೀಕೆ ಅಮ್ಮ ಲಕ್ಕ ವೊಸಗಾಕಿ ಸಾಯಿಸಬನೇಬೇಕಾಯ್ತು. ಅಲ್ಲಿಗಂಟ ಅದು ಬುಟ್ಟಿಕ್ಕಿಲ್ಲ. ಕಚ್ಚಗಂಡೇ ಇತ್ತು! ಆಮ್ಯಾಕೂ ಕಾಲ್ನಲ್ಲಿ ಬಾಯಿ ಬಡಿಕೊಳೊ ವೋಟು ಉರಿ, ಉರಿ!... ಆ ಜಾಗ ಬುಟ್ಟು ಚಿಗದು ಕುಂತೋನು ಸುಮ್ಕೆ ಮಾಡಕ್ಕೆ ಬ್ಯಾರೆ ಕೇಮೆ ಇಲ್ಲದೆ ಈ ಗೊದ್ದಗಳು ಇಂಗೆ ಈಟುದ್ದ ದಂಡಕಟ್ಟಿ ಯುದ್ಧ ಮಾಡಕ್ಕೊಂಟ ಸಿಪಾಯಿಗಳಂಗೆ, ಎತ್ತಾಗಿ ಪಯಣ ವೊಂಟವೆ? ಅಂತ ಜೋಜಿಗ ಪಡ್ಡ, ಉಚ್ಚೆ ಚೋರ್ ಅನ್ನುಸ್ತ, ಅಂಗೇನೆ ಆ ಗೊದ್ದಗಳ ಮ್ಯಾಲೆ ಕಣ್ಣರಿಸ್ಸಾ ವೋದ. ಅಂಗೆ ದಸ್ಸಿ ಅರಿಸ್ಟಾಗ ಅವಂಗೆ ಇನ್ನೂ ಜೋಜಿಗ ಕಾದಿತ್ತು ಆ ಕಟ್ಟಿರುವೆ ಗೊದ್ದಗಳ ದಂಡು ಸುಮಾರು ದೂರದಲ್ಲಿ ಒಂದು ಸಪ ಮ್ಯಾಲೆ ಉದ್ದಕೆ ಅತ್ತಿಗಂಡು ಅದರ ಮೈಮ್ಯಲೆ ಇಂಕರ ಜಾಗಾನು ಬುಡದಮಗೆ ಪಟ್ಟಾಗಿ ಕಚ್ಚಿಗಂಡಿದ್ದೂ! ಆ ಭಾಗಿ ಸರ್ಪ ರೋಸ ಅತ್ರಿ, ಮೊಳದುದ್ದ ಸೆಡೆ ಎತ್ತಿ, ಎತ್ತೆತ್ತಾಗೊ ರೊತ್‌ರೊತ್ತನೆ ನೆಲಕ್ಕೆ ಬಡಿದು ಆದಸ್ಸು ಗೊದ್ದಗಳ ಸಾಯಿಸ್ತ ತನ್ನ ರೊಸ ತೀರಿಸಿಗತ್ತಿತ್ತು... ಆದರೆ ಬತ್ತಾ ಬತ್ತಾ ಕಟ್ಟಿರುವ ದಂಡಿನ ಕಡಿತವ ಸೈಸಕ್ಕಾಗದೆ ಸುಸ್ತಾಯ್ತ ಕೊನೀಕೆ, ಲಕ್ಕ ಸ್ವಾಗ್ತಿದ್ದಂಗೇಯ, ಆ ಘಟಸರ್ಪ ಮಿಸುಗಾಡಕ್ಕಗದೆ ತೆಪ್ಪಗೆ ವಕ್ಕಡೀಕೆ ಬಿದ್ದು ಕತ್ತು. ಅಂತು ಈಟು ಸಣ್ಣ ಪ್ರಾಣಿಗೋಳು ಒಟ್ಟಾಗಿ ಎಂತಾ ಭಾರಿ ಗೋದಿ ನಾಗರಾವ ಸಯಿಸಿಬುಟ್ಟೋ?.... ಏಟು ಆಚರ್ಯ ಇದು?....