________________
೩೯೨ ವೈಶಾಖ ಅವನ ವಳುಗೆ ಈಗ, ಚಿಕ್ಕೋನಾಗಿದ್ದಾಗ ಊರ ಓಕುಳಿ ಹಬ್ಬದಲ್ಲಿ ತಮಟೆ ಬಾರುಸ್ತ ಮೈಮ್ಯಾಲೆ ಯಾವುದೋ ದೇವತೆ ಬಂದೋನಂಗೆ, ಜಗ್ಗುಣಕ, ಜಗ್ಗುಣಕ ಕುಣೀತ ಊರೋರೆಲ್ಲ ದಂಗುಮಾಡಿದ್ದ ಹೈದ ಲಕ್ಕ ಮೂಡಿದ್ದ.... ಈ ಕುಸಾಮತ್ನಲ್ಲೆ ಲಕ್ಕ ನಡೀತಾ ಇದ್ದ. ಬೊಡ್ಡನೂವೆ ಕುಲುಕುಲುಕ್ತ ಅವನೊಂದ್ಧತೆ ಬತ್ತಾನೆ ಇತ್ತು. ಅಮ್ಮ ನಡೀತಿದ್ದಂಗೆ ಒಂದು ಸೋರೆಕಟ್ಟ ಧೂಪದ ಮರದ ಮ್ಯಾಲೆ ಕುಂತು ಹಾಡು: ಉಪ್ಪುಲ ಸೆಟ್ಟಿ ಉಪ್ಪುಲ ಸೆಟ್ಟಿ ನೀ ತರೆ ನಾ ಮುದ್ರೆ ಲಕ್ಕ ಕತ್ತೆತ್ತಿ ಕ್ವಾಡ್ಡ, ಬೂದುಬಣ್ಣದ ಆ ಪುಟಾಣಿ ಹಕ್ಕಿ ಧೂಪದ ಮರದ ರೆಂಬೆ ಮ್ಯಾಗ್ನಿಂದ ಸುರಂತ ಹಾರು. ಅವ್ರ ದ್ರುಸ್ಟಿ ಅದರಾಗೆ ನೆಟ್ಟು, ಆ ಸೋರೆಕಟ್ಟ ಅಲ್ಲಾರಿ, ಇಲ್ಲಾರಿ, ಎತ್ತೆತ್ತಗೊ ಹಾರೊಯ್ತು .... ಲಕ್ಕ ಅಂಗೇ ಇನ್ನೂ ಮ್ಯಾಕ್ಕೆ ಕತ್ತೆತ್ತಿದ. ಆಕಾಸ ತೋಲುದಂಗಿತ್ತು. ಅಲ್ಲೊಂದು ಗರುಡಾಳ ಪಕ್ಷಿ ತೇಲ್ಲಾ ಹಾರಾಡಿತ್ತು. ಲಕ್ಕನ ಮನಸೂವೆ ಅದರ ವಂದಗುಟ್ಟಗೇಯ ತೇಲ್ಲಾ ವಾಲ್ತಾ ಹಾರಾಡಕ್ಕೆ ಮುಟ್ಟಿಗಂತು. ಅದರಾಗೆ ದ್ರುಸ್ಸಿ ನೆಟ್ಟು ಲಕ್ಕ ತಳತಳಾಲ್ವಾಗಿ ಎಣ್ಣೆಯ ಮುಂದಮುಂಬೈಟ್ಟ.