ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಒಮ್ಮೆ ದುರುಗುಟ್ಟಿ ನೋಡಿ, ಸಿಡುಕಿನಿಂದ ಎದ್ದು ನಿಂತು “ಬಾ ಸರಸಿ, ಹೋಗೋಣ” ಎಂದು ಕೊಳದ ಹಬ್ಬುಗೆಗಳನ್ನೇರಿ ಶಾಸ್ತಿಗಳಿದ್ದ ತಾಣಕ್ಕೆ ನಡೆದಳು. ನಂಜೇಗೌಡನೂ ಹಿಂಬಾಲಿಸಿ ಬಂದು, - “ಕೇಳಿದ್ರಾ ಶಾಸ್ತಿಗಳೆ, ಸುದ್ಯಾ?” ಎನ್ನುತ್ತಲೂ ಶಾಸ್ತ್ರಿಗಳು ಏನೂ ಅರಿಯದವರಂತೆ ಹುಬ್ಬೇರಿಸಿದರು. ನಂಜೇಗೌಡ ಬೀಡಿ ಹಚ್ಚಿ ಕೇಶವಯ್ಯನ ತೋಟದಲ್ಲಿ ನಡೆದ ಪ್ರಸಂಗವನ್ನು ವಿವರಸಿದ. ರುದ್ರನ ಪೇಚನ್ನು ಮೌನವಾಗಿ ಆಲಿಸಿದ ಶಾಸ್ತ್ರಿಗಳು, “ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆಯೆ ಅಲ್ಲವೆ, ನಂಜೇಗೌಡರೆ?” ಕಹಿಯಾಗಿ ನುಡಿದು ತಮ್ಮ ಕಾಯಕದಲ್ಲಿ ಮಗ್ನರಾದರು. ಹಾವಿನ ಕತೆ ಕೇಳಿ ಹೆದರಿದ ಸರಸಿ, ರುಕ್ಕಿಣಿಯನ್ನು ಬಿಗಿಯಾಗಿ ಅಪ್ಪಿ, “ಮನೆಗೆ ಹೋಗೋಣ, ಬಾಕ್” -ಪೀಡಿಸತೊಡಗಿದಳು. ಆ ಘಟನೆಯನ್ನು ಕೇಳಿ ರುಕ್ಕಿಣಿಯೂ ಬೆಚ್ಚಿ, ದಿನೇ ದಿನೇ ತಮ್ಮ ಊರು ಯಾವ ಪ್ರಮಾಣದಲ್ಲಿ ಕೆಡಲು ಪ್ರಾರಂಭವಾಗಿದೆ! ಎಂದು ಒಳಗೊಳಗೆ ಕೊರಗಿದಳು. ಮಠದಿಂದ ವೊಂಟ ಲಕ್ಕ ಈ ಕೇರಿಗೆ ಬಿದ್ದು ಆ ಕೇರಿ ಹಾಯ್ದು ವೊಯ್ತಾ ಇಲ್ವಾಗ, ಇನ್ನೂ ಅವ್ರ ತಲೆ ವಳಗೆ ನಂಜೇಗೌಡ್ರೆ ತುಂಬಿದ್ದ... - -ನಮ್ಮೊಲೇರ ಕಂಡ್ರಂತು ಮೊಟ್ಟೆ ವಳುಗೇ ಇಸ ತುಂಬವೆ, ಮ್ಯಾಲೆ ಮಾಲೆ ತುಪ್ಪ ಸುರುಸೊ ಮಾತು, ಅದಕೇ ನಮೋವು ಬೀಗ್ತಾವೆ. ಕೆಲವಂತೂ ಈವಯ್ಯ ಯೋಳಿದಂಗೇ ಕುಣೀತಾವೆ. ಎದೆ ಸೀಳುದ್ರೆ ಮೂರು ಅಕ್ಷರ ಇಲ್ಲೆ ಇರಾದ್ರಿಂದ್ರ ಅವೈ ಯೇನೂ ತಿಳಿಯಕ್ಕಿಲ್ಲ. ಈವಯ್ಯ ಮಾತಿಗೇ ಯಾವತ್ತೂವೆ ಪರ್ದಾನ್ಯ, ಬಸವಣ್ಣೂರು ಅಂಗಂತಾರೆ ಇಂಗಂತಾರೆ, ಯೋಳಿ ಯೋಳಿ ನಮ್ಮೋರೆಲ್ಲ ಮರುಳು ಮಾಡವೆ, ಇದಕ್ಕೆ ತಕ್ಕಂಗೆ ಆ ಸಿವಪಾದಪ್ಪಾರೋ ನಮೋಲಗೇರಿಗೆ ಯಾವತ್ತೂ ಕಾಲಿಕ್ಕಿದೋರೆ ಅಲ್ಲ. ಈವಯ್ಯ ಮಾತ್ರ ಎದ್ದರೆ ಬಿದ್ದರೆ ನಮ್ಮ ಕೇರಿಗೆ ಬತ್ತಾನೆ ಇದ್ದಾನೆ. ಸಾಸ್ತಿಗಳಂತ ಒಬ್ಬಿಬ್ಬು ಇನಾಸಿ, ಉಳಿಕೆ ಬ್ರಾಂಬರೂವೆ ಈವಯ್ಯ ಇಸ್ಯದಲ್ಲಿ ವಳಗೇ ಬೆಡ್ತಾರೆ ಅಂತಾನು ಕ್ಯಾಳಿಲ್ವ? ಊರಲ್ಲಿ ಇವ್ರ ಜನವೇಯ ಇಂದುಗಡಿಂದ ಇನ್ನೊಂದು ಕೊಳಕು ಮಂಡಲ ಅನ್ನಾದ ತಾನೇ ಕಿವ್ಯಾರ ಕ್ಯಾಳಿಲ್ವ?- ಇವು ಉಸುರು ಬುಟ್ಟಿ ಕಡೆ ಹುಲ್ಲೂ