ಪುಟ:ವೈಶಾಖ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦ ವೈಶಾಖ ಹುಟ್ಟಕ್ಕಿಲ್ಲ ಅಂತಾನು ಅನ್ನಕ್ಕ... ಅದಕೇ ಇದ್ದ ಮ್ಯಾಲೆ ಆಕಳಕ್ಕೆ ಊರೋರು ವಕ್ಕಡೀಕಿಡ್ಲಿ, ಸಾಕ್ಷಾತ್ ಸಿವಪಾದಪಾರೆ ಎದುರಿಕತ್ತರೆ ಅಂತಾನು ಜನ ಆಡಿಕಳಕ್ಕಿಲ್ಲ?... * ಈ ಯೋಚ್ಛೇಲೆ ಎಣ್ಣೆಲಿ ಬಿದ್ದ ನೋಣವಾಗಿ ಬತ್ತಾ ಇರೋನೂವೆ, ನಾಟಕದ ಕೇಸವಯ್ಯ ತನ್ನೋಟಿಗೆ ತಾನು ಯಾವೊ ನಾಟಕದ ಮಟ್ಟು ಹಾಡಿಕತ್ತಾ ಬತ್ತಾ ಇದ್ದೋನ, ಲಕ್ಕನನ್ನ ಕಂಡು, “ಏನೋ ಲಕ್ಕ, ನೀ ಬಲು ಠಕ್ಕ...”- ನಾಟಕದಲ್ಲಿ ಅನ್ನೋತರ ಅಂದ. “ಅದ್ಯಾಕೆ ಸೋಮಿ ಅಂಗಂದೀರಿ? ನಾಯೇನು ಮಾಡ್ಲಿ?” ಕೇಳ ಲಕ್ಕ. ಆದ್ರೆ ಅವಯ್ಯ ಯೇನನ್ನಬೇಕು? “ಕೋಲು ಜೇನು ತಕ್ಕೊಂಬಂದು ಕ್ವಡು, ತಕ್ಕೊಂಬಂದು ಊಹೂಂತು ನಾ ಕೇಳಕೆ ಮುಟ್ಟುಕಂಡು ಯಾವ ಕಾಲ ಆಯ್ತು? ತತ್ತೀನಿ ತತ್ತೀನೀಂತ ಬಾಯಲ್ಲಿ ಮುತ್ತು ಸುರುಸಿ ಸಬೂಬು ಯೋಲ್ಲೀಯೆ ಇನಾಯ್ತಿ, ಮಾಲು ಮಾತ್ರ ನನ್ನ ವೊಡ್ಲು ತುಂಬನಿಲ್ಲ.....” ಸರಾಪಿಗೆ ಆವಯ್ಯ ಕರೀತಿದ್ದ ವರುಸೆ ಅದು!... ಯಾರೂ ಇಲ್ಲೆ ನಾ ಒಬ್ಳೆ ಸಿಕ್ಕಿದರೆ ಕೇಸವಯ್ಯ ಈ ಕುಚಾಷ್ಟ್ರ ತಪ್ಪುತಾನೆ ಇನ್ನಿಲ್ಲ.... ಸಮ್ಮಸುಮ್ಮೆ ಕ್ಯಾಳಾದು. ಅದಕೆ ಪರ್ತಿಯಾಗಿ ನಾ ಇನ್ನೂ ಬಾಯ್ ಬಿಚ್ಚಿಲ್ಲ. ವೋಟರಾಗೆ ಜಾಗ ಖಲಾಸ್ ಮಾಡಾದು... ಇವತ್ತೂ ಅದೇ ವರುಸೆ!... ಯೇಟೇ ಯಾಜ್ಞೆ ಮಾಡಿದ್ರೂವೆ ಈ ವಯ್ಯ ಉದ್ದ ಆಳಾವ ಕಂಡು ಇಡಿಯಾದು ಎಂತೋಯ್ದ ಎಕ್ಕಾಸ!... ಇದು ಆಳ್ವಾದ ಬಾವಿ, ಚರಿಗೆ ಇಳೀಬುಟ್ಟರೆ, ವಳೀಕೆ ವೋಯ್ತಾನೆ ಇರದೆ. ತಳ ಮಾತ್ರ ಸಿಕ್ಕಕ್ಕಿಲ್ಲ. ಹುಲಿಹಾಲು ಮೊಲದ ಗಿಣ್ಣಾದ್ರೂವೆ ಒಂದು ಪಕ್ಷ ತರಬೈದು, ಈವಯ್ಯ ಚಹರೆ ಪಟ್ಟಿ ಅರಿಯಾದು ಎಂತೋರಿಗಾದ್ರೂ ಕಸ್ತೆಯ!... ನಂಜೇಗೌಡ ಲಕ್ಕೆ ಒಂದು ಸರ್ತಿ ಕ್ಯಾಳಿದ್ದ: “ಈವಯ್ಯ ಅದ್ಯಾಕೆ ಗೌಡ್ರೆ ನಾಟಕದ ಕೇಸವಯ್ಯಾರು ಅಂತ ಕರೀತಾರ?'... ಆಗ ಗೌಡ್ರು ಅಂದಿದ್ರು: 'ಈವಯ್ಯ ಮಾತುಮಾತ್ತೂ ನಾಟಕ ಆಡ್ತಾನೇ ಇದ್ದಾರೆ ಕನ್ದ ಲಕ್ಕ-ಅ~... ಚಿಂತಿಸ್ತ ಚಿಂತಿಸ್ತ ಲಕ್ಕ ಮುಂದುಮುಂದಕೆ ಹೆಜ್ಜೆ ಆಕ್ಟ, ಸ್ವಾಮಾರ ಆದ್ರಿಂದ ಆ ಜೀನ ರೈತಾಪಿ ಜನಕೆಲ್ಲಾ ವೊಲಗೆಲಸಕ್ಕೆ ಬಿಡತಿ. ಆ ಜಿನ ಎಲ್ಲಾ ಜನಕೂ ಆರಾಮ. ಎಲ್ಲೋ ಒಂದೊಂದು ಸ್ವಾಮಾರ ಮನೆಗೊಂದಾಳು ವೊಂಟು “ಊರು ಬಿಟ್ಟಿ ಕೆಲ್ಸ ಮಾಡ್ತಿದ್ದದ್ದುಂಟು. ಆಗ್ಗೆ ವೊತ್ತೇರಿತ್ತು. ಆದರೂವೆ ಜನ ಇನ್ನೂ ನಿದ್ದೇಲಿ ತಡರಿ ತಡರಿ ವೋಗೋರಂಗೆ ಅತ್ತಿಂದಿತ್ತಾಗಿ ಇತ್ತಿಂದತ್ತಾಗಿ ತಿರುಗಾಡ್ತಿದ್ರು, ಜಗಲಿಗಳ ಮ್ಯಾಲೆ ಕೆಲವು, ಅಸ್ವತ್ತಕಟ್ಟೆಮ್ಯಾಲೆ ಕೆಲವು, ರಸ್ತೆ ಬದೀಗೆ ಹಾಸಿ ಬಿದ್ದಿದ್ದ ದಿಮ್ಮಿಗಳ