ಪುಟ:ವೈಶಾಖ.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨ ವೈಶಾಖ ಅಂದ್ಲು. “ಅದ್ರೇನಂತೆ, ತಕ್ಕೊಟೇನು- ಚೂಜಿ ಇದ್ದದಾ?” “ಓ, ಮಡಗಿ, ತಂದು ಊಟೇನು”- ಬುಂಡಮ್ಮ ಚೂಜಿ ತಂದುಕ್ಸಟ್ಟಳು. “ತಾಳಿ, ತುಂಬೆ ಸೊಪ್ಪ ಕಿತ್ತುಗಂಬತ್ತೀನಿ...” ಲಕ್ಕ ಎಜ್ಜೆ ತೆಗೀತಿರೂನೂವೆ, “ನಿನ್ನ ತುಂಬೆ ಸೊಪ್ಪು, ಸುಣ್ಣ ಏಡೂ ಲಡಿಯಾಗಿಟ್ಟಿನ್ನಿ.” ಒಂದು ಇತ್ತಾಳೆ ಬಟ್ಲ ತಂದು, ಅದ್ರೆ ತುಸ ಸುಣ್ಣ ಆಕಿ, ತುಂಬೆ ಸೊಪ್ಪ ರಸವ ಅದರೊಳೀಕೆ ಇಂಡಿ ಕಲುಸಕ್ಕೆ ಸುರುವಾದ್ದು. “ಈ ಪಟ್ಟು ಸರೋಯ್ತು ” ಅಂದ ಲಕ್ಕ, ಎಮ್ಮೆ ಕರೀನ ನಾಲಗೆಯ ಈಚೆ ಇರುದು, ನಾಲಗೆ ಕೆಳಗೆ ಬೆಟ್ಟುಗಾತ್ರ ಊದಿ ನಿಂತಿದ್ದ ಕಪ್ಪಾನೆ ರಕ್ತನಾಳ್ವ ಚೂಜೀಲಿ ಕಿತ್ತಿ, ಕೆಟ್ಟ ರಕ್ತಾನೆಲ್ಲಾನೂವೆ ಈಚೆ ಕಡುಸ್ಟ, ಜಟ್ಟೆ, ತುಂಬೆರಸ ಗೋಟಾಯಿಸ್ಥ, ಮಿಸಣಾಮ ಬುಂಡಮ್ಮ ಆ ಎಮ್ಮೆ ಕರೀನ ನಲಿಗೆ ಅಡೀಕೆ ಮೆತ್ತಿದ್ದು, ಲಾಜಾದಲ್ಲಿ ತಲೆ ವಗೀತಿದ್ದ ಎಮ್ಮೆ ಕರ ಸಮಾಧಾನಕೆ ಬಂದಂಗೆ ಕಂಡು!... - ಎಮ್ಮೆಕರ ನೆಟ್ಟಗಾದ್ರೆ ಬುಂಡಮ್ಮಗೆ ಕುಸ್ಯಾಯ್ತು. ಕುಸ್ಯಾದಾಗ ಬುಂಡಮ್ಮನ ನೈಾಡಬೇಕು!... ಎಂಬತ್ತೂ ಎಚ್ಚಿನ ಸಿವರಾತ್ರೀಲಿ ಕಟ್ಟುವಾಸ ಇದ್ದು, ಜಾಗ್ರಣೆ ಸಿವಪೂಜೆ ಮಾಡಿ, ವಯಸ್ಕ ಬಾರಕೆ ನಡ ಬಲ್ಲೋಗಿದ್ದ ಮುದುಕಿ. ಮೊಕದಲ್ಲಿ ಸೀರೆನೆರಿಗೆ ತರ ಮಡಿಕೆಮಡಿಕ್ಕಾಗಿರೊ ಚರ್ಮ, ಏಡು ಕಟವಾಯಿಂದ್ಲವೆ ಸದಾ ಸೋರಾ ಇರೋ ಎಲಡಿಕೆ ರಸ... ಈ ಮುದುಕಿ ನಕ್ಕಾಗ, ಅವಳ ಕಣ್ಣಿನ ಜ್ವತೆಗೆ ಅವಳ ಮೊಕದ ಮಡಿಕೆ ಮಡಿಕೇನೂ ನಕ್ಕಂಗಾಗೋದು!... ಆ ದ್ಯಾವರು, ಕುಸೀನೆ ಉಂಡೆ ಮಾಡಿ, ಈಯಮ್ಮ ರೂಪವ ತಿದ್ದಿರಬೇಕು, ಅಂದುಕತ್ತಿದ್ದ ಲಕ್ಕ... ಆಗ ಬುಂಡಮ್ಮ, - “ಬಾರ ಲಕ್ಕ, ರೊಟ್ಟಿ ತಿವಂತೆ”- ಬುಂಡಮ್ಮ ಎಲಡಿಕೆ ರಸವ ಪಿಚಕ್ಕೆ ಉಗುದು, ಪಿರೀಂದ ಕರೆದ್ಲು. “ಬ್ಯಾಡಿ ಬುಂಡಮ್ಮಾರೆ.” ಯೋಳಿ, ಜೊತೆ ತನ್ನ ಕಯ್ಯನೂ ಆಡುಸಿ, ತನಗೆ ಬ್ಯಾಡ ಅನ್ನಾದ ಸೂಚಿಸ್ಥ. “ಇದ್ಯಾಕಿವತ್ತು ಇಂಗಾಡೀ?- ತಿಳುದೋರು ಯಾಳಾದು ಗೃಲ್ವ?” “ಅದೇನ ಬುಂಡಮಾರೆ”? “ನೋಡ್ಲ- ಗುಟುಕಿದ್ರೆ ಮಿಟುಕು, ಮಿಟುಕಿದ್ರೆ ಮಿಂಡಾಟ!... ಕಾಣದೆ ಮಾಡದ್ದಾರ ಇರೀಕರು ಗಾದ್ಯ?... ಮೊದ್ದು ಮೊಟ್ಟೆಗೆ ಇಟ್ಟು, ಅದರ ಮುಂದೆ ನಿನ್ನ ವೋಡಾಟ ಪಾಡಾಟಯೆಲ್ಲಾ... ಬಾ, ಬಾ,” -ಮುದುಕಿ ಒಂದು ಕಯ್ಯ