________________
ಸಮಗ್ರ ಕಾದಂಬರಿಗಳು ೩೫. “ಸೀ ಆಕಿದ್ರೆ ನಾಯ್ಸಳೆ ಕಜ್ಜಿ ಆಯ್ತುದೆ ಅಂತಾರಲ್ಲ, ಬುಂಡಮ್ಮಾರೆ?” – ಯೋಳಿ, ನಗಾಡ, ನಗಾಡ್ತಾನೆ ಆಲುಂಡಿಗ್ಯ ಚೂರುಚೂರಾಗಿ ಗುಳು ಗುಳುಂ ನುಂಗಕ್ಕೆ ಸುರುವಾದ. ಬುಂಡಮ್ಮಾ ಒಂದು ಕಯ್ಯ ಸ್ವಂಟದ ಮ್ಯಾಲಿಟ್ಟು, ಇನ್ನೊಂದರಿಂದ ನಡುಮನೆ ಪಟ್ಟಿ ಇಡಿದು “ಅದ್ಯಾಕ್ಷ, ಅಂಗಂದೀಯೆ? -ಸೀ ತಿಂದ್ರೆ, ನಮ್ಮಂತಾ ಮನುಸರೂವೆ ಸಕ್ಕರೆ ಕಾಯ್ದೆ ಬತ್ತದೆಂತ ಕೊಪ್ಪಲ ಪಂಡಿತಯ್ಯೋರು ಯೋಳೋದ ನೀನೂ ಕ್ಯಾಳಿಲ್ಲವೇನ್ದ?” – ಇಂಗೆ ಅನ್ತಾ ಅನ್ತಾ ಬಂಡಮ್ಮ ತನ್ನ ಕಣೋಳಗೇ ನಗಾಡ್ತಿದ್ದು. ಹಾದಿ ಉದ್ದಕ್ಕೂ ಲಕ್ಕನ ಮನಸಿನ ತುಂಬ ಆ ಬುಂಡೆಮ್ಮೆ ಇಜ್ಜುಂಬುಸ್ಸಾ ಇದ್ದು, ವಯಸಾಗಿ ನಡ ಬಗ್ಗೆ ದೂವೆ, ಆ ಮುದುಕಿ ಮಾತ್ಯಾತಿಗೂ ತುಳುಕ್ಕಾ ಇದ್ದ ತುಂಟಾಟಾವ ಯಾವ ಅರೇದ ಎಣ್ಣಿನಲ್ಲೂ ಲಕ್ಕ ಕಂಡಿಲ್ಲ. ಮಾತ್ನಲ್ಲಿ ಯಾವ ಫಲಾತನ ಮಗಂಗೂ ಅವರು ಸೋತೋಳೇ ಅಲ್ಲ! - ಬದುಕಲ್ಲೂ ಅಸ್ತೇಯ.... ಇನ್ನೂ ಚಿಕ್ಕೋಳಾಗಿದ್ದಾಗ್ಗೆ ಗಂಡ ಸತ್ತೋಗಿದ್ದ. ಸಾಲದ್ರೆ ಒಂದು ಕಮ್ಮಿ ಕೂಸು ಬ್ಯಾರೆ ಬುಟ್ಟೋಗಿದ್ದ. ವಾರಕ್ಕೆ ಕ್ವಿಟ್ಟಿದ್ದ ಏಡೂವರೆ ಎಕ್ರೆ ಜ್ವಲ. ವಾಸಕ್ಕೆ ಇದ್ದ ಒಂದಟ್ಟಿ, ಏಡು ಎಮ್ಮೆ, ಒಂದು ಎಮ್ಮೆಕರ. ಆ ಎಮ್ಮೆ ಕರೆದು ಯೇಪಾಕಿ, ಮೊಸರ ಕಡುದು, ಬೆಣ್ಣೆ ಉಂಡೆ ತಗುದು, ಅನ್ನ ಸಂತೆ ಜಿನ ಟವನ್ನಿಗೆ ಆರೇಳು ಮೈಲಿ ವೊತ್ತುಗಂಡೋಗಿ, ಆದ ಮಾರಿಬಂದ ದುಡ್ಡಲ್ಲಿ. ಮೊಗ ಸಾಕಿ ದೊಡ್ಡದು ಮಡಿದ್ದು.. ಅವು ವಯಸಿಗೆ ಬಂದ ಅಂತಲೂವೆ, ಬ್ಯಾರೆ ಊರಿಂದ ಚೆಂದುಳ್ಳಿ ಎಣ್ಣನೆ ತಂದು ಲಗ್ನ ಮಾಡಿದ್ದು. ಅವಳ ಗಾಚಾರಕೆ, ಆ ಉಡುಗಂಗೆ ಲಾಗಾಯಿತ್ತಿಂದ್ರೂವೆ ಭಂಗಿ ಕುಡಿಯೊ ಚಟ ಅಂಟಿಗಂಡು, ಅವು ಎಡತೀಯ ಬಾಳಿಸಿಲ್ಲ. ಅವು ಪ್ರಾಯಕ್ಕೆ ಬಂದಾಗ, ಒಬ್ಬ ಗೋಸಾಯಿ ಎತ್ತಾಕಡಿಂದಲೋ ಬಂದು ಇವರ ಜಗುಲಿ ಮ್ಯಾಲೆ ಟಿಕಾಣಿ ಊಡಿದ್ರಂತೆ. ಆವಯ್ಯನೆ ಈ ಹೈದಂಗೆ ಭಂಗಿ ಕುಡಿಯೋದ ಪಾಟ ಮಾಡಸಿದ್ದೂಂತ ಊರಲ್ಲೆಲ್ಲ ಗುಲ್ಲು... ಅಮ್ಮಿಗೀಗ ಮನೆ ಬ್ಯಾಡ, ಮಟ ಬ್ಯಾಡ, ಎಡತಿ ಬ್ಯಾಡ, ಅವ್ವ ಬ್ಯಾಡ, ಯಾರೋ ಬ್ಯಾಡ... ಸದೊಂಬತ್ತು ಕಾಲ ಭಂಗಿ ಕುಡುದು ಕೊಂಟಿನಂಗೆ ಬಿದ್ದು ಕಂಡಿರೋದೆ ಕೇಮೆ! ಅವ್ವ ಜುಲುಮೆ ಮಾಡಿ ಉಣ್ಣು ಬಾ ಅಂದಾಗ, ಆ ಗೆಣೆಕಾರಂಗೆ ಮನಸಿತ್ತಾ ಬಂದ; ಮನಸಾಗ್ನಿಲ್ಲ-ಜಪ್ಪಯ್ಯ ಅಂದರೂವೆ ಜಗುಲಿ ಬುಟ್ಟೇಳದೆ