________________
ಸಮಗ್ರ ಕಾದಂಬರಿಗಳು ೩೭. ನಾನಾಗ ಸರೋತ್ನಲ್ಲಿ ಜಲಾಬಾದ್ ಅವಸ್ತಾಗಿ ಬುಂಡಮಾರು ಎದ್ದು ನ್ಯಾಡ್ತಾರೆ: ವಚೇರಿ ಮೂಲೆಲ್ಲಿ ತನ್ನ ಪಕ್ಕದಾಗ ಕೊಕ್ಕುರುಸಿ ಬಿದ್ದಿದ್ದ ಸೊಸೆ ಮಂಗರ ಮಾಯ!... ಜಟಜಟ್ಟೆ ದೀಪ ಕತ್ತಿಸಿ, ಅಟ್ಟಿಸಂದಿ ಸಂದೀಲೂವೆ ತಡಕಾಡಿದ್ರಂತೆ. ಮುಂಚೋರಿ ಬಾಗಿಲೆ ಬಂದು ದೀವಿಗೆ ಇಡುದು ನ್ಯಾಡಿದ್ರಂತೆ. ಕದ ಸುಮ್ಮೆ ಮುಚ್ಚಿದಂಗಿತ್ತು. ತಾವೆ ಮನಕ್ಕಳೊವಾಗ ಭದ್ರ ಮಾಡಿದ್ದ ತಾಪಾಳು ಮಾತ್ರ ತಕ್ಕಂಡಿತ್ತಂತೆ! ಇನ್ನು ಕಣಿ ಕ್ಯಾಳಾದೇನದೆ?... ಆ ತಾಟಗಿತ್ತಿ ಅಟ್ಟಿ ಆಚೆ ವೋಗರಾದಂತೂ ದಿಟವೇ ದಿಟ. ಯಾರದೊ ಅಟ್ಟೇಲಿ ಕ್ಯಾಸರಕೋಗಿ ಬಿದ್ದವೆ, ಬೆಳಕರೀತ್ತೆ, ತನ್ನ ಪಾಡಿಗೆ ತಾನು ಎದ್ದು ಬತ್ತಾಳೆ ಅರಾಮಿ ರಂಡೆ- ಬಯ್ಯಕತ್ವ ತಾಪಾಳಾಕಿ, ಸಿವಾಂತ ಚಾಪೇಲಿ ತಮೋಟಿಗೆ ತಾವು ಮುದುರಿಕಂಡ್ರಂತೆ... ವೊಲಗೇರಿ ಇನ್ನೂ ಕೋಲಿ ಕೂಗೇ ಇನ್ನಿಲ್ಲ. ಆಟೋತ್ತಿಗೇ ಎದ್ದು ಬಂದು ಬುಂಡಮ್ಯಾರಟ್ಟಿ ಕದ ತಟ್ಟಿದ ಲಕ್ಕ, “ಸೊಸೆ ಬಂದಳೇನೋ ಅಂದುಕೊತ್ತ ವಳುಗೆ ಕಾಲಿಟ್ಟ ಕೂಡ್ಲೆ ಯಾವ್ಯಾವ ಮಾತ ಪೋಣಿಸಿ ಬೈದು, ಅಮ್ಮ ಹೈರಾಣ ಮಾಡೇಕೂಂತ ನಾ ಬಂದ್ರೆ... ನೀನಾ?”... ಕದ ತಾಗೀತಾ ಒಂದು ಕೈಯ ತಲೆ ಮ್ಯಾಲೆ ಇಟ್ಟುಗಂಡು ಬುಂಡಮ್ಮಾ... ಆಗ ಲಕ್ಕ ಇನ್ನೂ ಚಿಕ್ಕೋನು. ಮಟಕೋಯ್ತಿದ್ದ ತೆಪ್ಪುಸಿ ಅವನಯ್ಯ ಇವ್ರ ಅಟ್ಟೇಲಿ ಜೀತಕಿರುಸಿದ್ದ. ಎಮ್ಮೆ, ಕರ...ಎಲ್ಲಾ ನೂವೆ ಗೊಂಂದ ಬಿಚ್ಚಿ, ಇತ್ತಲ ಗೂಡಗಳೆ ಅವ ಬಿಗುದು, ಕಸಬರಲಿಂದ ಕ್ವಟ್ಟಿಗೆ ತೊಡುದ ಲಕ್ಕ-ಬುಂಡಮ್ಮಾರ ಮಾತಿನ ಸನಗು ಚಿಂಕರಾನು ಅರ್ತ ಆಗದೆ!... ಬುಂಡಮ್ಮ ಹಾಲು ಕರೆಯಕ್ಕೆ ಬಂದರು. ಲಕ್ಕ ಇನ್ನೇನು ಕರ ಬುಡಬೇಕು, ವೋಟರಲ್ಲಿ ಆಚೆ ಅಟ್ಟಿ ತಿಮ್ಮರಾಯಿ ಎಡತಿ ಸಾಕಿ ಸುದ್ದಿ ತಂದಿದ್ದು; “ನಮ್ಮಟ್ಟಿ ಜಗುಲೀಲೆ ಮೊಕ್ಕಾಂ ಮಾಡಿದ್ದ ಕಂಚುಗಾರ ಸಾಬಿ ನೆನ್ನೆ ನಾನಾ ಫೇರಿ ಕಿತ್ತವೆ. ನಮ್ಮೆಜಮಾನ್ನು ಹೋಲದ ಕಡೀಕೋಗಕ್ಕೆ ಎದ್ದೂರು ಅಟ್ಟಿ ಮುಂದಿನ ಬಾಗಿಲ ತೆಗುದಾಗ ಜಗುಲಿ ಖಾಲಿ ಇದ್ದದ್ದು ಕಂಡು, ನನ್ನ ಕೂಗಿ “ಸ್ವಾಡೆ ಸಾಕಿ, ಒಂದು ತಿಂಗಳಿಂದ ಮಾಸಾಚ್ಯಸ್ತನ ತರಾನೆ ಇಸಿದ್ದ ಈ ಕಂಚುಗಾರ ಸಾಬಿ ಎಂಥ ಚಕ್ಕರ್ ಕ್ವಿಟ್ಟು ಎದ್ದವನೆ!... ನಾ ನಿಂಗೆ ಮೊದ್ದೇ ಯೋಳೆ ಅಮ್ಮ ನಮ್ಮ ಜಗುಲೀಗೆ ಸೇರುಸಬ್ಯಾಡ, ಸೇರುಸಬ್ಯಾಡಾಂತ. ನೀ ಕ್ಯಾಲ್ಸಿಲ್ಲ. ಊರಲ್ಲಿ ಯಾರಾರು ಏಟ್ಟು ಪಾತ್ರೆಗಳ ಕಲಾಯ್ ಮಾಡಕ್ಕೆ ಕ್ವಿಟ್ಟು ಕಳಕಂಡರೂ ನಾ ಕಾಣೆ!' ಅಂದ್ರು... ಒಂದು ಇತ್ತಾಳೆ ಬೋಸಿ, ಒಂದು ಅರಕನ