ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦ ವೈಶಾಖ ತಮ್ಮ ಗುಡ್ಡಿಗೋಗಿ, ಕಂಬಳೀಯ ಮೊಖದ ತುಂಬ ಎಳುದು ಬಿಡ್ಕಂಡ. ಅವನವ್ವ ಅಡಿಗೆಕ್ಸಾಣೇಲಿ ಎಸೆರೆತ್ತುತ ಇದ್ದೋಳು, “ಇದ್ಯಾಕ್ತ, ಲಕ್ಕ, ಜೊರಗಿರ ಬಂದಿದ್ದಾತೇನ?”... ಕೇಳಿದ್ದು. ಲಕ್ಕನಿಂದ ಉತ್ತರವೇ ಇಲ್ಲ... ಕಂಬಳಿ ಉಡುಕಂಡು ಕಪ್ಪರ ಜೋಳಿನಂಗೆ ಬಿಡ್ಕಂಡು ಅವ್ವ ಅದೇಟೇ ಸಾಸ ಮಾಡಿದ್ರೂವೆ ಆ ಕಂಬಳಿ ಕಿತ್ತು ಮಯ್ಯ ಮುಟ್ಟಿ ಕ್ವಾಡಕ್ಕೆ ಅನುವು ಊಡ್ತಾನೆ ಇಲ್ಲಿಲ್ಲ... ತಾವಿಬ್ರೂ ಈ ಪರಿ ಜಗ್ಗಾಡ ಇರೋನೂವೆ, ನಮ್ಮ ಗುಡ್ಡ ಮೋರಗ್ನಿಂದ “ಕಲ್ಯಾಣಿ... ಕಲ್ಯಾಣಿ... ನಿನ್ನಗ ಲಕ್ಕೆ ಬಂದಿದ್ದಾನೇನೆ?” ಅಂದದ್ದು ಕ್ಯಾಳಿ ನನ್ನ ತೊಳ್ಳೆ ನಡುಗೋಯ್ತು. ಅವ್ವ ಕಂಬಳಿ ಕೀಳಾದು ನಿಲ್ಲುಸಿ, - “ಯಾರು?” ಅಂದು ಮುಂಚೂರಿಕೋಗಿ, “ನೀವಾ- ಬುಂಡಮಾರೆ?... ನಾ ಯಾರೋ ಅಂತಿದ್ದೆ!” ಅಂದದ್ದು ಕ್ಯಾಳಿಸ್ತು. “ಅದಿಲ್ಲ, ನಿನ್ನಗ ಲಕ್ಕೆ ಬಂದಿದ್ದಾನೊ, ಇಲ್ಲೋ?” -ಬುಂಡಮ್ಯಾರೇಯ... ಇನ್ನೇನಪ್ಪ ಗತಿ? “ಬಂದ ಕನವ್ವ ಜೊರಾ ಬಂದಿರಾ ಅಂಗದೆ. ಕಂಬಳಿ ವೊದ್ದು ನಡುಗ್ತಾ ಮನಗ.” “ಜೊರವೂ ಇಲ್ಲ, ಚಳಿಯೂ ಇಲ್ಲ. ನನ್ನೆಮ್ಮೆಗಳ ಕಾಡಲ್ಲಿ ಕಳುದು, ಇಲ್ಲಿ ಬಂದು ಯಾಸ ಆಕ್ತಾ ಅವೈ. ಎದ್ದು ಈಚೆಗೆ ಬಲ್ಲಾ-ಕಂಡಿವಂತೆ!” ಬುಂಡಮಾರ ಗುಡುಗು ನಮ್ಮ ನೆರಿಕೆ ಗುಡ್ಲುನೂವೆ ಅಲುಗಾಡಿಸ್ತು. ಗುಡ್ಡ ಮ್ಯಾಲೆ ಹಬ್ಬಿ ಮನಗಿದ್ದ ಸಕ್ಕರಗುಂಬಳದ ಕಾಯ್ದಳು ನನ್ನ ತೊಳ್ಳೆವಳುಗೆಲ್ಲ ಉಳ್ಳಾಡಿದಂಗಾಯ್ತು.... ಮೊಖ ಸುತ್ತಿದ್ದ ಕಂಬಳ್ಯ ಸರುಸಿ ಕಿಂಡಿ ಮಾಡಿ ಕ್ವಾಡ್ಡೆ. ಬುಂಡಮಾರು ಗುಡ್ಡು ಬಾಗ್ಲಲ್ಲಿ ಬಕ್ಕಂಡು ನಡ ನಿಗುರಿ ಸೊಂಟದ ಮ್ಯಾಲೆ ಬಲದಾ ಕಕ್ಕಿಟ್ಟು, ಏಡು ಕಟವಾಯೂವೆ ಎಲಡಿಗೆ ರಸ ಸೋರುಸ್ತ, ರುಕ್ಕಿಣದ್ವಾರ ಅಟ್ಟ ವಳುಚೋರಿ ಗ್ವಾಡೆಗೆ ನ್ಯಾತಾಕಿದ್ದ ಪಟದ ಚಾಮುಂಡೇಶ್ವರಿ ತಾಯಾಗಿ ನಿಂತಿದ್ರು... ಇನ್ನು ನನ್ನ ಬ್ಯಾಳೆ ಕಾಳು ಇವರ ಮುಂದೆ ಬೇಯಕ್ಕಿಲ್ಲ ಅನ್ನುಸ್ತು, ಜಟ್ಟೆ ಕಬಳಿ ವದುರಿ, ಎದ್ದೋಗಿ, ಅವರ ಮುಂದೆ ತಲೆತಗ್ಗುಸಿ, ಕುರಿಮರಾಗಿ ನಿಂತೆ... “ನಂಗಾಗ್ಗೆ ಸ್ವತ್ತಾಗದೆ. ನೀನು ಕಾಡಲ್ಲಿ ನನ್ನೆಮ್ಮೆ ಕಳುದು ಬಂದಿರಾ ಇಸ್ಯ. ನಿನ್ನ ಜೊತೆ ಬಂದಿದ್ದ ಎಮ್ಮ ದನ ಕಾಯೋ ಹೈಕಳು ಎಲ್ಲಾ ನೂವೆ ಯೋಳಿ