ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೪೧ ವೋದೋ”- ತಟತಟ್ಟೆ ಬುಂಡಮ್ಮ ಈ ತರ ಅಂದಕೂಡ್ಲಿ, ಲಕ್ಕ ಕಣ್ಣೀರು ಸುರುಸ್ತ ಕದ್ದು ಕದ್ದು ಅವ್ವನ ಮೊಖ ಕ್ವಾಡಿದ್ದ. ಅವ್ರು ಎದುರಿಕೆಯಿಂದ ಬಿಳುಚಿ ಬಿಳಿ ಹಾತೆ ಉಳುವೆ ಆಗಿದ್ದು. ಕಣ್ಣಿಂದ ನೀರು ಬಳೆ ಮರಳಿ ಏಡು ಕೆನ್ನೇನೂವೆ ವದ್ದೆ ಮುದ್ದೆ ಮಾಡಿತ್ತು... ಬುಂಡಮ್ಯಾರು ಅವ್ವನ ಕುಟ್ಟೆ ಗದರಿದ್ರು. “ನೀ ಯಾಕಮ್ಮಿ ಅ... ವೋಗಿರಾವು ನನ್ನೆಮ್ಮೆ” ಅಂದು ಲಕ್ಕನ ಕಡೀಕೆ ತಿರುಗಿ- “ಊ, ಆದ್ದು ಆಗೋಯ್ತು . ಕಾಡಲ್ಲಿ ಹಿಂದ್ರೆ ಒಂದು ಸರ್ತಿ ಅದಂಗೆ ಅವು ಉಲಿ ಬಾಯ್ದೆ ವೋಗಿರಬೇಕು... ಈಗ ನೀ ಅಳ್ತಾ ನಿಂತ್ರೆ ಯಮಪುರಿಗೋದ ನನ್ನೆಮ್ಮೆ ಯೇನಾರ ಇಂದೈ ಬರಾದುಂಟ?... ಬಾ, ಬಾ, ಅಟ್ಟೇಲಿ ಮಸ್ತಾಗಿ ಕೇಮೆ ಗುಡ್ಡೆ ಅಕ್ಕಂಡು ಕುಂತದೆ” – ಯೋಳ್ತಾ ಯೋಳ್ತಾ ಮುಂದುಮುಂದೆ ಅಡಿ ಕಿತ್ತರು. ಲಕ್ಕನೂವೆ ಎದುತ್ತ ಎದುರಾನೆ ಬುಂಡಮ್ಮಾರ ಇಂದಿಂದೆ ವೊಂಟ... “ನಿಮ್ಮ ಕಾಲಿಗೆ ಬೀಳೀನಿ. ನಾ ಬೇಕಾದರೆ ಸಾಯೋತಂಕ ನಿಮ್ಮಟ್ಟಿ ಜೀತ ಮಾಡ್ತೀನಿ. ನನ್ನ ಮಗನ್ನ ಮಾತ್ರ ಪಂಚಾತಿ ಮುಂದೆ ನ್ಯಾಯಕೆ ಕುಂದರಿಸ ಬ್ಯಾಡಿ, ಬುಂಡಮ್ಮಾರೆ...” ಕರುಳು ಕಿತ್ತುಗಂಡು ಅವ್ವ ಬೇತುಗತ್ತಿದ್ದು... ಕ್ಯಾಳಿಸಿದ್ರೂವೆ ಕ್ಯಾಳದ್ದೇ ಇದ್ದೋರಂಗೆ, ಒಂದು ಕಯ್ದೆ ಬಗ್ಗಿದ ನಡ ಇಡುದು, ಇನ್ನೊಂದು ಕಯ್ಯಾಗಿದ್ದ ಕೋಲು ಊರಾ, ಪುಟ್ಟ ಪುಟ್ಟೆಜ್ಜೆ ಇಡ್ತಾ ಬುಂಡಮಾರು ನಡುದೇ ಬುಟ್ರು... ಅಟ್ಟಿ ಮುಟ್ಟುತ್ತಿದ್ದಂಗೆ ಬುಂಡಮ್ಮಾರ ಮಗ ಚೆನ್ನೂರ ಜಗುಲಿ ಮ್ಯಾಲೆ ಕುಂತು, ಚಿಮಣಿಗೆ ಭಂಗಿ ಸೊಪ್ಪು ತುಂಬಿ, ಅದರ ಮುಂಬೈ ಕೆಂಡ ಆಕ್ಕಂಡು, ಚಿಮಣಿ ಇಂದೈ ಚೂರು ಬಟ್ಟೆ ಸುತ್ತು, ಈ ಪರ್ಪಂಚದಲ್ಲೇ ನಿಲ್ಲದೇ ಇರೋ ನಂಗೆ, ಅರ್ಧಧ್ರ ಕಣ್ಣು ತೆರೆದು ದಂ ಎಳೀತಿದ್ದ. ಬುಂಡಮಾರು ಒಂದು ಪದಾರ್ತ ಅನ್ನೂವಂಗೆ ಒಂದ್ಬಲ ಅವನ್ನೋಡಿ, ಮೊಖಾವ ಒಂದು ತರ ಮಾಡಿ, ಅಟ್ಟ ಮುಂದಿನ ಕದ ಜಾಡುಸಿ ವಳುಕ್ಕೆ ನಡುದ್ರು ಅಟ್ಟಿ ವಳುಗಡೆ ಕಾಲಿಡ್ತಿದ್ದಂಗೆ, ಅಯಿದು ಎಮ್ಮೆಗಳು ಇಲ್ಲದೇಯ ಕೃಟ್ಟಿಗೆ ಬಣಬಣ ಅಂತಿತ್ತು. ಅದ ಕಂಡು, ಈ ತೆಪ್ಪಿಗೆ ತಾನೇ ಕಾರಣ ಅನ್ನುಸಿ, ಲಕ್ಕ ಬಳಬಳ ಅತ್ತ. ಅಮ್ಮ ಮೂಗಿನ ಸೊರಸೊರ ಕ್ಯಾಳುಸಿ, ಬುಂಡಮ್ಮ ಇಂದ್ರೆ ತಿರುಗಿ, “ಬೇಕೂಫ- ಎಣ್ಣೆಂಗಸಿನ ಜಪಾತಿ ಆಳಿದ್ದೀಯಲ್ಲೊ! ಅದೇನ ಅಗೋದ್ದು ಈಗ?... ಉರುಳಿ ಬೇಯ್ದಿಟ್ಟಿಮ್ಮಿ, ಅಂಗಳದ ಮೂಲೆ ವಳುಕಲ್ನಲ್ಲಿ ಅಗ್ನಿ ನುಣ್ಣಗೆ ಆಡುಸಿ, ಉಳಕಂಡಿರೋ ಆ ಮೂರು ಎಮ್ಮೆ ಕರುಗಳಿಗೂವೆ ಒಂದೊಂದು