________________
ಸಮಗ್ರ ಕಾದಂಬರಿಗಳು ೪೩ ಮಾಂಸವ ಕಿತ್ತಿದ್ದಂತೆ... ಆ ದುಸ್ಯ ನ್ಯಾಡಿದ್ದಂಗೆ, ಇನ್ನೊಮದು ಉಲಿ ಸಮೀಪದಾಗಿ ಯೆಲ್ಲೋ ಅವುತಿರಬೇಕೂಂತ ಬಯಲಿದ್ದು, ಆ ಜಾಗದಿಂದ ಕಾಲುಕಿತ್ತರಂತೆ!... ಸತ್ತ ಉಲಿಯ ಎತ್ತಿನ ಗಾಡಿಗೆ ಆಕ೦ಬಂದು ಅದರ ಚರ್ಮ ಅಸೀಬೇಕೂಂತ ಅವಿಗೆ ಇಪರೀತ ಆಸೆ ಆಯ್ತಂತೆ. ಆದ್ರೆ, ಆಳುಗಳ ಕುಮ್ಮಕ್ಕು ಕಮ್ಮಿ, ಊರಿಂದ ಎಚ್ಚ ಆಳ ಕರಕಂಬಂಧು ಉಲಿ ಸಾಗಿಸಾದು ಅಂದುಕಂಡ್ರಂತೆ... ಈ ಸುದ್ಯ, ಆ ತಳಹೋಗಿದ್ದ ಅಂಚಿಕಡ್ಡಿ ಈರಪ್ಪ ಜೈನಿಗರ ಅನಂತಯ್ಯ ನೂವೆ ನಿನ್ನಂಗೆ ಹ್ಯಾಪ ಮಾರೆ ಅಕ್ಕಂಡೇ ತಂದಿದ್ದ. ಆ ನಾತ್ರೆ ಹಾಲಿಗೆ ಎಪ್ಪಾಕಿ, ಅಣತೆ ನಂದಸ್ತಿದ ವೊತ್ತಲ್ಲಿ ಬಂದು, ಕದ ತಟ್ಟಿ ತೆಗುಸಿ, ಯೋಳಿ ವೋದ್ರು...ಆಗ ನಾನೇನು ಎದುರಿ ಹೇತುಗಂಡು ಕಯ್ಯ ಕಾಲು ಸೋತು ಕುಂತನ್ಯಾ?... ನ್ಯಾಡ್ಡ, ಆ ಎಮ್ಮೆಗಳೆ ಆಯಿದು ಕರ ಇದ್ದೂ, ಅವೈಯ ಚೆಂದಾಗಿ ಸುಸೂಸೆ ಮಾಡ್ಡೆ, ಬೆಳುಸಿ ದೊಡೋವ ಮಾಡೆ- ಎಂಗೋ ರತ ನಡೀತು... ಈಗೇನ ಸೊರೋದು?... ಈಗ್ಯೂ ವೋಟೆಯ. ಅಯಿದು ಎಮ್ಮೆ ವೋದರೂವೆ ಅವು ಮೂರು ಕರ ಬುಟ್ಟೋಗವೆ. ಉಳುಕಂಡಿರೋ ಈ ಮೂರು ಕರುಗಳೇ ಇಂದ್ರೆ ಆ ಕರುಗಳ ಸಾಕ್ಷಂಗೇ ಸಾಕೀನಿ, ಬೆಳುಸಿ ದೊಡ್ಗವ ಮಾಡ್ತೀನಿ... ಇದ್ಯೆ, ನೀ ಯಾಕ್ಲ ಚಿಂತೆ ಮಾಡೀ?- ತಿನ್ನು, ತಿನ್ನೂಂತ ರೊಟ್ಟಿ ತಿಂದು, ನೀರು ಕುಡದು, ಬಂಡಮ್ಮನ ಅಟ್ಟಿಯಿಂದ ವೊರ ಬೀದಿಗೆ ಬಂದ ಲಕ, ಆ ಮಾತಾಯ ತನ್ನ ಮಯ್ಯ, ಮನಸು ಏಡರ ತುಂಬಾನು ತುಂಬುಹೊತ್ತ ಲಕ್ಕ ಎಜ್ಜೆ ಆಗ್ತಿದ್ದ. ಆ ಯೋಚ್ಛೇಲಿ ವಂದಿಗೇ ನೆರಳಿನಂಗೆ ಉದ್ದಕೂ ಬತ್ತ ಇದ್ದ ಬೊಡ್ಡನ ಕಡೀಕೆ ಲಕ್ಕನ ಗ್ಯಾನ ಆರೀನೆ ಇಲ್ಲ. ಬುಂಡಮಾರ ಅಟ್ಟಿ ಬುಟ್ಟು ಇನ್ನೂ ರವೋಟು ದೂರಾನು ವೋಗಿಲ್ಲ. ಸಣ್ಣ ಸಣ್ಣಗೆ ಅನಿ ಇಡ್ತಿದ್ದ ಮಳೆ ಬತ್ತಾ ಬತ್ತಾ ಗಟ್ಟಿಸಕ್ಕೆ ಮುಟ್ಟುಕತ್ತು. ಇನ್ನೂ ಜಗಲಿ ಮ್ಯಾಲೆ ನಿಂತಿದ್ದ ಬುಂಡಮ್ಮಾರು, “ಲೋ ಲ... ಲಕ್ಕ ಲೋ, ಇಂದ್ರೆ ಬಾಗ್ಲ. ಮಳೆ ಗಟ್ಟಿಸ್ತಾ ಅದಲ್ಲೊ?... ನೆಂದೋಯ್ತಿಯೆ - ಇತ್ತಾಗೆ ಓಡಾಗ್ಲ-ಮಳೆ ನಿಲೋಗಂಟ ನಮ್ಮ ಅಟ್ಟಲಿ ಕುಂತಿದ್ದ ವೋಗೀವೆ,” ಕೂಗ್ದಾಗ ಬೆಳ್ಳಿ ಲಿಂಗದ ಕಾಯಿ ಅವರ ಎದೆ ಮ್ಯಾಲೆ ಅಳ್ಳಾಡ್ತಿತ್ತು. ಲಕ್ಕೆ ತಿರುಗಿ ನ್ಯಾಡಿದೋನು, “ನಮ್ಮ ಗುಡ್ಲಿಗೇ ವೋಂಟೋಯ್ತಿನಿ ಅಮ್ಮಾ... ಅಮ್ಯಾಕೆ ಪುನಾ ಬತ್ತೀನಿ,”