ಪುಟ:ವೈಶಾಖ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಚ | ದೇವರ ಕೋಣೆಯ ಹೊರಗೆ ಹೊಸ್ತಿಲಿನಾಚೆ ಕುಳಿತು ಶ್ರೀಗಂಧ ತೇಯುತ್ತ ರುಕ್ಕಿಣಿ ಯೋಚನಾಮಗ್ನಳಾಗಿದ್ದಳು... ಈಚೀಚೆಗೆ ಏಕೆ ಮಾವಯ್ಯ ತನಗೆ ಮುಖ ಕೊಟ್ಟು ಮಾತನಾಡುವುದಿಲ್ಲ?... ತಾನೇನು ತಪ್ಪು ಮಾಡಿರಬಹುದು?... ತನ್ನ ಮೇಲೆ ಅವರಿಗೆ ಕೋಪವೆ?- ಛ.ಛೇ, ಇರಲಾರದು, ತನ್ನನ್ನು ಸ್ವಂತ ಮಗಳಿಗಿಂತಲೂ ಅತಿಶಯವಾದ ಮಮತೆಯಿಂದ ನೋಡಿಕೊಂಡಿದ್ದಾರೆ!... ಹೀಗಿದ್ದೂ ಅವರ ಅಸ್ವಾಭಾವಿಕ ವರ್ತನೆಗೆ ಕಾರಣ ಏನಿರಬಹುದು?... ಶ್ರೀಗಂಧ ತೇಯುತ್ತ ತೇಯುತ್ತ ಅವರನ್ನೆ ಹೊಸದಾಗಿ ನೊಡುವವಳಂತೆ ಮತ್ತೆ ಮತ್ತೆ ನೋಡಿದಳು. ಕೆಂಪು ಮಕುಟವಿಟ್ಟು, ಕೊರಳಿಗೆ ಚಿನ್ನದ ತಂತಿಯಿಂದ ಬಿಗಿದ ಸಣ್ಣ ರುದ್ರಾಕ್ಷಿಗಳ ಸರ ಹಾಕಿ, ಮೈ ಕೈಗಳಿಗೆ ವಿಭೂತಿ ಧರಿಸಿ, ಹಣೆಗೆ ತ್ರಪುಂಡ್ರ ಆಕ್ಷತೆಗಳನ್ನಿಟ್ಟು ಮಾವಯ್ಯ ನೋಡುವವರ ಕಣ್ಣು ತುಂಬುವಂತೆ ಕುಳಿತಿದ್ದರು. ಅವರನ್ನು ನೋಡುತ್ತಿದ್ದಂತೆ ಎಂತಹ ದೊಡ್ಡ ಮನುಷ್ಯ ಎಂತಹ ಉದಾರ ಮನಸ್ಸು ಇವರದು! ಎಂದು ಅವಳ ಒಳಮನಸ್ಸು ನುಡಿಯಿತು... ರುಕ್ಕಿಣಿಯ ಅಲೋಚನೆ ಹೀಗೆ ಹರಿದಾಗ, ಅವಳ ಮನಸಿನೊಳಗೂ ಏನೋ ತೇದಂತಾಗಿ, ಅವಳ ಹಿಂದಿನ ಬದುಕನ್ನು ಬಿಚ್ಚುತ್ತ ಹೋಯಿತು. ಶಾಸ್ತಿಗಳ ಮಗನೊಡನೆ ಜರುಗಿದ ತನ್ನ ವಿವಾಹವು ತನ್ನ ನೆನಪಿನಂಗಳದಲ್ಲಿ ಸುಳಿಯಿತು. ಅಗ್ರಹಾರ, ಮಲ್ಲರಾಜಪಟ್ಟಣ, ಕೊಣನೂರು, ಕಟ್ಟೇಪುರ, ರಾಮನಾಥಪುರ, ಕೆರಲಾಪುರ, ಕೌಶಿಕ, ಅಂಬಿಗ, ಮೊಸಳೆ ಮುಂತಾದ ಊರುಗಳನ್ನೆಲ್ಲ ಸುತ್ತಿ ಯಾವ ವಧುವನ್ನೂ ಒಪ್ಪದೆ, ಅಂತಿಮವಾಗಿ ರುದ್ರಪಟ್ಟಣಕ್ಕೆ ಬಂದು, ಮಾವಯ್ಯ ಮತ್ತು ಅವರ ಮಗ ಇಬ್ಬರೂ ತಾವೇ ಸರಿ ಎಂದು ಒಪ್ಪಿದ್ದರು... ಮಾವಯ್ಯ ಒಪ್ಪಿದ್ದರಿಂದ ಅವರ ಮಗ ಒಪ್ಪಿದರೆ, ಇಲ್ಲಿ ಅವರ ಮಗ ಒಪ್ಪಿದ್ದರಿಂದ ಮಾವಯ್ಯ ಒಪ್ಪಿದರೆ ನನಗೆ ತಿಳಿಯದು. ಆದರೆ ತಂದೆಯ ಮಾತನ್ನು ಎಂದಿಗೂ ಮೀರದ, ತಂದೆಯ ಮಾತನ್ನು ತನಗೆಷ್ಟು ಅಹಿತವಾದರೂ ನಡೆಸಿಕೊಡುವ ವ್ಯಕ್ತಿ ಅವರ ಮಗ ಎನ್ನುವ ವಿಷಯ ಮುಂದಿನ ದಿನಗಳಲ್ಲಿ ಅನೇಕ ಸಂದರ್ಭಗಳಲ್ಲಿ ತನ್ನ ಗಮನಕ್ಕೆ ಬಂದಿತ್ತು. ಉದಾಹರಣೆಗೆ ತನ್ನ ವಿವಾಹಮಹೋತ್ಸವವನ್ನೇ ತೆಗೆದುಕೊಳ್ಳಬಹುದು. ಮಗನಿಗೆ ಕಂದಾಚಾರಗಳಲ್ಲಿ ನಂಬಿಕೆಯಿಲ್ಲ. ಅತಿಯಾದ ಶಾಸ್ತ್ರಗಳ ಪರಿಪಾಟವನ್ನು ತಪ್ಪಿಸಿ, ಎಷ್ಟು ಅಗತ್ಯವೋ ಅಷ್ಟು ಶಾಸ್ತ್ರಗಳನ್ನು ಮಾತ್ರ ಉಳಿಸಿ, ತಮ್ಮಿಬ್ಬರ ವಿವಾಹ ಜರುಗಲಿ ಎಂದು ಮಗನ ಅಭಿಲಾಷೆ. ಶಾಸ್ತ್ರಗಳಿಗೆ ಕೊಂಚವೂ ಲೋಪ ಬರಬಾರದು ಎಂಬುದು ಮಾವಯ್ಯನ ಹಟ. ಕೊನೆಯಲ್ಲಿ ಮಾವಯ್ಯನ ಇಚ್ಚೆಯೇ ನೆರವೇರಿ ಮದುವೆ