________________
ವೈಶಾಖ ಆರು ದಿನಗಳ ಪರ್ಯಂತ ವೈಭವಯುತವಾಗಿ ನಡೆಯಿತು... ವಿವಾಹವೇನೋ ಜರುಗಿತು. ತನಗಾಗಲೆ ಹದಿನೈದು ವರ್ಷಗಳಾಗಿದ್ದರೂ ಮೈ ನೆರೆದಿರಲಿಲ್ಲ. ತನ್ನ ತಂದೆ ತಾಯಿ ತನ್ನ ಬಾಲ್ಯದಲ್ಲಿ ಅಂದರೆ ತನಗೆ ಸುಮಾರು ಒಂಬತ್ತು ವರ್ಷವಾಗಿದ್ದಾಗಲೇ ಇಬ್ಬರೂ ಆರು ತಿಂಗಳ ಅಂತರದಲ್ಲಿ -ಮೊದಲು ತೆಂಗಿನ ಮರದಿಂದ ಬಿದ್ದು ತನ್ನ ತಂದೆ, ಅದೇ ಕೊರಗಿನಲ್ಲಿ ಹಸಿಗೆ ಹಿಡಿದು ಅಲ್ಲಿಂದ ಆರೇ ತಿಂಗಳೊಳಗೆ ಉಸಿರೆಳೆದಿದ್ದ ತಾಯಿ ತನ್ನನ್ನು ತಬ್ಬಲಿ ಮಾಡಿ ಹೋಗಿದ್ದರು. ಅಲ್ಲಿಂದ ಮುಂದೆ ತನ್ನ ಅತ್ತಿಗೆಯ ಕೃಪಾಶ್ರಯದಲ್ಲಿ ಬೆಳೆಯಬೇಕಾಗಿ ಬಂದ ಕಾರಣ, ತಾನು ಮುಂದೆ ಮೂರು ವರುಷ ಋುತುವಾಗಲೇ ಇಲ್ಲ! ಆದ್ದರಿಂದ ಖುತುವಾಗುವವರೆಗೂ ತಾನು ರುದ್ರಪಟ್ಟಣದಲ್ಲೇ ಉಳಿಯಬೇಕಾಯಿತು... ಏತನ್ಮಧ್ಯೆ, ತನ್ನ ಅತ್ತೆಯವರು ಮಗನಿಗೆ ಬೇರೊಂದು ಲಗ್ನ ಮಾಡಲು ಆಲೋಚಿಸುತ್ತಿರುವರೆಂಬ ಸುದ್ದಿಯೂ ರುದ್ರಪಟ್ಟಣವನ್ನು ಮುಟ್ಟಿತ್ತು! ಆದರೆ ತನ್ನ ಪತಿ ಹಟ ಹಿಡಿದು, “ಇನ್ನೂ ಒಂದೆರಡು ವರ್ಷ ಕಾದು ನೋಡೋಣ. ಎಷ್ಟೋ ಹೆಣ್ಣುಗಳು ಹದಿನೇಳು ಹದಿನೆಂಟು ವರ್ಷದಲ್ಲಿ ಖುತುವಾಗಿರುವರೆಂದು ಕೇಳಿಲ್ಲವೆ?... “ಎಂದು ಅತ್ತೆ ನಿರ್ಧಾರವನ್ನು ಮುಂಡೋಡಿದ್ದರಂತೆ! ಅವರ ಮಾತನ್ನು ನಿಜಮಾಡುವಂತೆ, ತಾನು ಹದಿನೆಂಟನೆ ವರ್ಷಕ್ಕೆ ಮೈನೆರೆದು ಗಂಡನ ಮನೆ ಸೇರಿದ್ದಳು... ಅಷ್ಟರಲ್ಲಿ ತನ್ನ ಅತ್ತೆಯವರು ಸ್ವರ್ಗಸ್ಥರಾಗಿದ್ದರು... ಇಷ್ಟಾದರೂ ತನ್ನ ಮನಸ್ಸಿಗೆ ಸ್ವಲ್ಪವೂ ಕರೆಕರೆಯಾಗದಂತೆ ತನ್ನ ಪತಿ ಹಾಗೂ ತನ್ನ ಮಾವನವರು ನಡೆದುಕೊಂಡಿದ್ದರು. ತನ್ನವರಂತೂ” ನಮ್ಮ ತಾಯಿಯ ಹಟದಿಂದ ನಿನ್ನನ್ನ ಇಷ್ಟು ದಿನ ಅಲ್ಲೇ ಬಿಡಬೇಕಾಯಿತು...” ಎಂದು ತಷ್ಟೊಪಿಕೊಳ್ಳುವವರಂತೆ ರಮಿಸಿ ಹೇಳಿದ್ದರು. ತಮ್ಮ ತಾಯಿಯ ಹಟದ ಸ್ವಭಾವಕ್ಕೆ ನಿದರ್ಶನವಾಗಿ ಮನೆಯಲ್ಲಿ ಹಿಂದೆ ನಡೆದ ಒಂದು ಸಂಗತಿಯನ್ನೂ 'ಅವರು' ತನಗೆ ನಗುತ್ತ ವಿವರಿಸಿದ್ದರು: ಒಮ್ಮೆ ತೋಟದ ಬೇಲಿಗೆ ಕಾಡಿನಿಂದ ಮುಳ್ಳು ತಂದು ಹೊದ್ದಿಸುವ ಆಳುಗಳಿಗೆ ಹಿಟ್ಟು ಬೇಯಿಸು, ಎಂದು ಮಾವಯ್ಯ ಹೇಳಿದರಂತೆ, ಆಳುಕಾಳಿಗಲ್ಲ ಹಿಟ್ಟು ಬೇಯಿಸೊಕಲ್ಲ ನೀವು ನನ್ನನ್ನ ಲಗ್ನ ಆದದ್ದು- ಎಂದು ಅತ್ತೆಯವರು ವಿರೋಧ, ಮಾತಿಗೆ ಮಾತು ಮಾತು ಮಥಿಸಿ, ಇವಳನ್ನ ಕರೆದುಕೊಂಡು ಹೋಗಿ ಇವಳ ಅಪ್ಪನ ಮನೆಗೆ ಬಿಟ್ಟು ಬಾ ಎಂದು ಮಾವಯ್ಯ ತಮ್ಮ ಮಗನಿಗೆ ಆಜ್ಞೆ ಮಾಡಿದರಂತೆ. ಅಪ್ಪನ ಆಜ್ಞೆಯನ್ನು ಮೀರಲಾರದೆ, ಅಮ್ಮನನ್ನು